Wednesday, August 12, 2026
Wednesday, August 12, 2026

JCI Shimoga Malnad ಬೇಸಿಗೆ ನೀರಿನ ಬೇಗೆ ನೀಗಲುಜೆಸಿಐ ಭಾವನಾ ದಿಂದ ಹಕ್ಕಿಗಳಿಗೆ ನೀರುಣಿಸುವ ಚಟುವಟಿಕೆ- ಪೂರ್ಣಿಮಾ ಸುನೀಲ್.

Date:

JCI Shimoga Malnad ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆಯು ನಿರಂತರ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸಂಸ್ಥೆಯ ಸಮಾಜಮುಖಿ ಕಾರ್ಯ ಅರ್ಥಪೂರ್ಣ ಎಂದು ಜೆಸಿಐ ಸಂಸ್ಥೆಯ ಜಡ್‌ವಿಸಿ ಪೂರ್ಣಿಮಾ ಸುನೀಲ್ ಹೇಳಿದರು.

ಜೆಸಿಐ ಶಿವಮೊಗ್ಗ ಭಾವನಾದ ಅಲೂಮ್ನಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಪ್ರಕೃತಿಯ ಮೇಲಿನ ಕಾಳಜಿಯು ಕಡಿಮೆಯಾಗುತ್ತಿದೆ. ಮಲೆನಾಡು ಶಿವಮೊಗ್ಗ ಅತಿ ಹೆಚ್ಚು ಬಿಸಿಲು ಹೊಂದಿದ ಜಿಲ್ಲೆಗಳಲ್ಲಿ ಒಂದಾಗುತ್ತಿದೆ. ಇಂತಹ ಬಿಸಿಲ ಬೇಗೆಯಿಂದ ಸುಡುತ್ತಿರುವ ಮೂಕ ಪಕ್ಷಿಗಳನ್ನು ಕೇಳುವವರಿಲ್ಲ. ಇದಕ್ಕಾಗಿ ಜೆಸಿಐ ಸಂಸ್ಥೆ ಹಕ್ಕಿಗಳಿಗೆ ತಮ್ಮದೇ ಮನೆಯ ತಾರಸಿ ಮೇಲೆ ಆಗಿರಬಹುದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಗಿರಬಹುದು. ಹಕ್ಕಿಗಳು ಅತಿ ಹೆಚ್ಚು ಇರುವ ಸ್ಥಳಗಳಲ್ಲಿ ನೀರು ಸಿಗುವಂತೆ ಮಾಡುವ ವಿಶೇಷ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.

JCI Shimoga Malnad ಜೆಸಿಐ ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದು, ಇತ್ತೀಚೆಗೆ ಹಕ್ಕಿಗಳಿಗೆ ನೀರುಣಿಸಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಯಿತು ಎಂದರು.

ಜೆಸಿಐ ಸಂಸ್ಥೆಯ ಜಡ್‌ವಿಸಿ ಉದಯ್ ಕಡಂಬ, ಕೋಆರ್ಡಿನೇಟರ್ ದಿವ್ಯಾ, ಸುರೇಖಾ ಮುರುಳಿಧರ್, ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷೆ ಕರಿಬಸಮ್ಮ, ಜೆಸಿಐ ಶಿವಮೊಗ್ಗ ವಿವೇಕ್ ಅಧ್ಯಕ್ಷೆ ವಿಜಯಲಕ್ಷ್ಮೀ ಉದಯ್ ಹಾಗೂ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...