Sunday, August 2, 2026
Sunday, August 2, 2026

ಪತ್ರಕರ್ತ ವೆಂಕಟೇಶ್ ಎಸ್ ಸಂಪ ಅವರಿಗೆ ಮಂಗಳ ಎಂ.ಸಿ.ವರ್ಗೀಸ್ ಪ್ರಶಸ್ತಿ

Date:

ಪತ್ರಕರ್ತ, ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ವೆಂಕಟೇಶ ಎಸ್ ಸಂಪ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಮಂಗಳ ಎಂ. ಸಿ. ವರ್ಗೀಸ್ ಪ್ರಶಸ್ತಿಯನ್ನು ಏ.12 ರಂದು ಬೀದರನಲ್ಲಿ ನೆಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾದ ಈಶ್ವರ ಖಂಡ್ರೆ,ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಬೀದರ್ ಶಾಸಕರಾದ ಶೈಲೇಂದ್ರ ಬೆಲ್ದಾಳೆ, ಪ್ರದಾನ ಮಾಡಿದರು.

ವೆಂಕಟೇಶ ಸಂಪ ಅವರು ಕಳೆದ 20 ವರ್ಷಗಳಿಂದ ನಿರಂತರವಾಗಿ ಸಂಪದ ಸಾಲು ಎನ್ನುವ ಧನಾತ್ಮಕ ಪತ್ರಿಕೆಯನ್ನು ನಡೆಸುತ್ತಿರುವ ವೆಂಕಟೇಶ ಸಂಪರವರ ಸಾವಿರಾರು ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಧನಾತ್ಮಕವಾಗಿ ಸಮಾಜಮುಖಿಯಾಗಿ ಮತ್ತು ಯುವಕರಿಗೆ ಸ್ಪೂರ್ತಿದಾಯಕವಾಗಿ ಅವರ ಹಲವಾರು ಲೇಖನಗಳು ಸಂಪದ ಸಾಲು ಪತ್ರಿಕೆಯ ಸಂಪಾದಕೀಯದಲ್ಲಿಯೂ ಪ್ರಕಟವಾಗಿವೆ ಮತ್ತು ಜನಪ್ರಿಯತೆ ಪಡೆದಿದೆ, ಹಾಗೂ ರೇಡಿಯೋ ಟಿವಿಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಹಲವಾರು ಟೀವಿ ಚಾನಲ್ ಗಳ ಪ್ಯಾನಲ್ ಡಿಸ್ಕಷನ್ ಗಳಲ್ಲಿ ಭಾಗವಹಿಸುವುದರ ಜೊತೆಗೆ ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಸಂಪದ ಫೌಂಡೇಶನ್ ಫಾರ್ ಪಬ್ಲಿಕ್ ಅವೇರ್ನಸ್ ಸಂಸ್ಥೆ ಮೂಲಕ ಹಲವಾರು ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...