Monday, May 25, 2026
Monday, May 25, 2026

District Legal Services Authority ಮಾನಸಿಕ ಅಸ್ವಸ್ಥರಿಗೆ ವೈದ್ಯಕೀಯ, ಆರೋಗ್ಯ, ಆಸ್ತಿ ರಕ್ಷಣೆ ನಿಟ್ಟಿನಲ್ಲಿ ಕಾನೂನು ಸೇವೆಗಳಿವೆ, ಸದ್ಬಳಕೆ ಮಾಡಿ- ನ್ಯಾ.ಜಿ.ಎ.ಮಂಜುನಾಥ್.

Date:

District Legal Services Authority ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವರಿಗೆ ವಿಶಿಷ್ಟ ಹಕ್ಕುಗಳಿವೆ. ಅವರುಗಳ ಆರೋಗ್ಯ, ಆಸ್ತಿ ರಕ್ಷಣೆ ಮಾಡಿಕೊಳ್ಳಲು ಕಾನೂನಿನ ಸೇವೆಗಳಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ.ಎ. ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಹಾಗೂ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಸಿಮ್ಸ್ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಕಚೇರಿಯಲ್ಲಿ ತೆರೆಯಲಾಗಿರುವ ಉಚಿತ ಕಾನೂನು ಸೇವಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಮಾನಸಿಕ ಅಸ್ವಸ್ಥತೆಗೆ ಒಳಗಾದ ವ್ಯಕ್ತಿಗಳ ವೈದ್ಯಕೀಯ, ಆರೋಗ್ಯ, ಆಸ್ತಿ ರಕ್ಷಣೆಯ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಡಿ ಸಹಾಯ ಲಭ್ಯವಿದ್ದು, ಅದರ ಸದ್ಭಳಕೆ ಪಡೆದುಕೊಳ್ಳಬೇಕು. ಹಾಗೂ ಯಾರೇ ಆಗಲಿ ತಾವು ಮಾಡುವ ಕೆಲಸವನ್ನು ಶ್ರದ್ದೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಕರೆ ನೀಡಿದರು. .
ಸಿಮ್ಸ್ ನಿರ್ದೇಶಕರಾದ ಡಾ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಕಚೇರಿಯಲ್ಲಿ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಿರುವುದು ಬಹಳ ಉಪಯುಕ್ತವಾಗಿದ್ದು, ಇಂತಹ ಕಾರ್ಯಕ್ರಮಗಳ ಮಾಹಿತಿಯು ಎಲ್ಲಾ ಜನರಿಗೆ ತಲುಪಬೇಕು ಹಾಗೂ ಅಗತ್ಯವಿದ್ದವರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರಾದ ಸಂತೋಷ್ ಎಂ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಿಗೆ ಕಾನೂನು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಿಡಿಪಿಓ ಕಚೇರಿ, ಮೆಗ್ಗಾನ್ ಆಸ್ಪತ್ರೆಯ ಎಆರ್‌ಟಿ ಕ್ಲಿನಿಕ್, ಬಾಲ ನ್ಯಾಯ ಮಂಡಳಿ, ಜಿಲ್ಲಾ ಸೈನಿಕ್ ಬೋರ್ಡ್, ಹಿರಿಯ ನಾಗರಿಕರ ಸಹಾಯವಾಣಿ, ಕೇಂದ್ರ ಕಾರಾಗೃಹ ಹಾಗೂ ಮಹಿಳಾ ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನುರಿತ ವಕೀಲರನ್ನು ಕಾನೂನು ಸಲಹಾ ಕೇಂದ್ರಗಳಿಗೆ ನಿಯೋಜಿಸಲಾಗಿದ್ದು, ಇವರ ಸೇವೆಯನ್ನು ಪಡೆಯಬಹುದು.
ಅಲ್ಲದೆ ಮಕ್ಕಳು ಕಾಣೆಯಾದ ಬಗ್ಗೆ ದೂರು ನೀಡಲು ಬಂದವರಿಗೆ ಹಾಗೂ ಮಹಿಳೆಯರಿಗೆ ಹಾಗೂ ಕಾನೂನು ನೆರವನ್ನು ಬಯಸುವ ಬಂಧಿತರಾದ ಆರೋಪಿಗಳಿಗೆ ಕಾನೂನು ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಲು ದೊಡ್ಡಪೇಟೆ ಪೊಲೀಸ್ ಠಾಣೆ, ತುಂಗಾನಗರ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ತಲಾ ಒಬ್ಬ ಅರೆಕಾಲಿಕ ಕಾನೂನು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
District Legal Services Authority ಮಾನಸಿಕ ಅಸ್ವಸ್ಥರಿಗೆ ಉಚಿತ ಕಾನೂನಿನ ನೆರವು ನೀಡಲು ಹಾಗೂ ಘನತೆಯಿಂದ ಬದುಕಲು ನಮ್ಮ ಪ್ರಾಧಿಕಾರವು ಉಚಿತವಾಗಿ ವಕೀಲರನ್ನು ನೇಮಿಸಿದ್ದು, ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಿ ಉಚಿತ ಕಾನೂನಿನ ಸಲಹೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ ಟಿ.ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಗೀತಾ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರಾಮ್ ಪ್ರಸಾದ್, ಶುಶ್ರೂಷಕಾಧೀಕ್ಷಕಿ ಶೇಷಮ್ಮ, ಮಾನಸಿಕ ಆರೋಗ್ಯ ವಿಮರ್ಶ ಮಂಡಳಿಯ ಸದಸ್ಯರಾದ ರಜನಿ ಪೈ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಸದಸ್ಯರಾದ ಶುಭ್ರತ, ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...

Madhu Bangarappa ಶಿವಮೊಗ್ಗಕ್ಕೆ ಜೂನ್ 1 ರಂದು ಸೀಎಮನ ಭೇಟಿ: ಮಧು ಬಂಗಾರಪ್ಪ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ

Madhu Bangarappa ಜೂನ್ 01 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿರುವ...

Madhu Bangarappa ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ. ವಿವಿಧ ಸಮಸ್ಯೆಗಳ ಬಗ್ಗೆ ಪಕ್ಷಾತೀತ ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ...

CM Siddharamaiah ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ- ಸಿದ್ಧರಾಮಯ್ಯ

CM Siddharamaiah ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ,...