Thursday, April 9, 2026
Thursday, April 9, 2026

Kuvempu University ಮುದ್ರಣ ಮಾಧ್ಯಮದಲ್ಲಿ ಬರವಣಿಗೆ ಕೌಶಲ, ಮುಖ್ಯ. ವರದಿಗಾರಿಕೆ ತುಂಬಾ ಜವಾಬ್ದಾರಿಯುಳ್ಳದ್ದು- ಶರತ್ ಕುಮಾರ್ ಉದಯವಾಣಿ

Date:

Kuvempu University ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ “ವೃತ್ತಿಪರ ಪತ್ರಕರ್ತರ ಸವಾಲುಗಳು” ಎನ್ನುವ ವಿಷಯದ ಕುರಿತು ಶರತ್ ಕುಮಾರ್ ಅವರು ವಿಶೇಷ ಉಪನ್ಯಾಸ ನೀಡಿದರು.
ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡುವುದು ತುಂಬಾ ಸವಾಲು ಆಗಿರುತ್ತದೆ. ಪತ್ರಕರ್ತರಿಗೆ ಸಮಯ ನಿರ್ವಹಣೆ ಮಾಡುವುದು ತಿಳಿದಿರಬೇಕು. ಸೂಕ್ಷ್ಮ ವಿಚಾರಗಳ ಕುರಿತು ವರದಿ ಮಾಡುವಾಗ ಜವಾಬ್ದಾರಿಯಿಂದ ಮಾಡಬೇಕು ಮತ್ತು ಗಂಭೀರ ವಿಚಾರದ ಕುರಿತು ಜಾಗೃತರಾಗಿರಬೇಕು ಎಂದು ತಿಳಿಸಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ತುಂಬಾ ಅವಕಾಶಗಳಿವೆ ಮತ್ತು ಮುದ್ರಣ ಮಾಧ್ಯಮಕ್ಕೆ ಹೋಗುವವರಿಗೆ ಬರವಣಿಗೆ ಕೌಶಲ್ಯ ತುಂಬಾ ಮುಖ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
Kuvempu University ವಿಭಾಗದ ಹಳೆಯ ವಿದ್ಯಾರ್ಥಿ ಆಗಿದ್ದ ಶರತ್ ಕುಮಾರ್ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024 ನೇ ಸಾಲಿನ ಬಿ ಜಿ ತಿಮ್ಮಪ್ಪಯ್ಯ ಪ್ರಶಸ್ತಿಗೆ ಭಾಜನರಾದ ಕಾರಣ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥರಾದ ಡಾ. ವರ್ಗೀಸ್ ಪಿ.ಎ ವಹಿಸಿದ್ದರು.ಈ ಸಂದರ್ಭದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್,ಡಾ.ಸತ್ಯ ಪ್ರಕಾಶ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮುಬೀನಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು. ಭಾರ್ಗವಿ ಜಿ.ಆರ್ ಪ್ರಾರ್ಥಿಸಿ, ತಾರಾ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಚುನಾವಣಾ ಆಯೋಗವು ಗ್ಯಾರಂಟಿ ಯೋಜನೆಗಳ ಲೆಕ್ಕ ಕೇಳಿ ನಮ್ಮನ್ನ ಬೆದರಿಸಲು ಹೊರಟಿದೆ- ಸಿದ್ಧರಾಮಯ್ಯ

CM Siddharamaiah ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನಡೆಯುತ್ತಿರುವ ಉಪಚುನಾವಣೆಗಳ ಸಂದರ್ಭದಲ್ಲಿ...

MESCOM ಏಪ್ರಿಲ್11. ಶಿವಮೊಗ್ಗದ ಮಲ್ಲಿಗೆ ಇಡ್ಲಿ ಸೆಂಟರ್, ಡೀಸಿ ಕಛೇರಿ ಕಾಂಪೌಂಡ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ...