ಭದ್ರಾವತಿಯ ಶಂಕರಘಟ್ಟದ ಬಿಆರ್ ಪಿಯಲ್ಲಿ ಲಾರಿ – ಬೈಕ್ ನಡುವೆ ಡಿಕ್ಕಿಯಾಗಿ ಮದುವೆ ಆಗಿ ಒಂದೂವರೆ ವರ್ಷಕ್ಕೆ ದಂಪತಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗದ ಕಡೆಯಿಂದ ಮನೆಗೆ ತೆರಳುತ್ತಿದ್ದ ದಂಪತಿ
ಬಾಬು(೩೧) ಸಾವಿತ್ರಿ (೨೫) ಅಪಘಾತಕ್ಕೆ ಬಲಿಯಾಗಿದ್ದಾರೆ.
ದಂಪತಿಗಳು ಶಿವಮೊಗ್ಗದ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ಶಿವಮೊಗ್ಗದಿಂದ ಬರುತ್ತಿದ್ದ ಜೋಳತುಂಬಿದ ಲಾರಿ
ರಸ್ತೆ ಘಾಟಿ ಹತ್ತಲು ಆಗದೆ ಲಾರಿ ಹಿಂದೆ ಬರುತ್ತಿತ್ತು.
ಹಿಂಬದಿ ಬರುತ್ತಿದ್ದ ಬೈಕ್ ಮೇಲೆ ಲಾರಿ ಹತ್ತಿದೆ.
ಲಾರಿ ಹತ್ತಿದ್ದ ರಭಸಕ್ಕೆ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಒಂದುವರೆ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಬಾಬು ಮತ್ತು ಸಾವಿತ್ರಿ
ಕೂಲಿಕೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.
