Monday, August 24, 2026
Monday, August 24, 2026

Ugadi ಸೊರಬದಿಂದ ಚಂದ್ರಗುತ್ತಿವರೆಗೆ ವಕೀಲರ ಬಳಗದಿಂದ ಪಾದಯಾತ್ರೆ.

Date:

Ugadi ಯುಗಾದಿ ಹಬ್ಬದ ಅಂಗವಾಗಿ ತಾಲೂಕಿನ ವಕೀಲರ ಬಳಗದ ವತಿಯಿಂದ ಪಟ್ಟಣದ ಪುರ ದೈವ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿAದ ಶಕ್ತಿ ಪೀಠ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಿ ಸನ್ನಿಧಿವರೆಗೆ ಎರಡನೇ ವರ್ಷದ ಪಾದಯಾತ್ರೆ ನಡೆಸಲಾಯಿತು.
ಶ್ರೀ ದೇವಿಗೆ ಪೂಜೆ ಸಲ್ಲಿಸಿ, ದರ್ಶನಾಶೀರ್ವಾದ ಪಡೆಯುವ ಜೊತೆಗೆ ಉತ್ತಮ ಮಳೆ ಬೆಳೆಯಾಗಲಿ, ರೈತಾಪಿ ಸಮೂಹ ಸಮೃದ್ಧಿಯಾಗಿರಲಿ, ನಾಡಿನಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂದು ವಕೀಲರ ಬಳಗದಿಂದ ಪ್ರಾರ್ಥಿಸಲಾಯಿತು. ಪಾದಯಾತ್ರೆಯಲ್ಲಿ ವಕೀಲರ ಮಕ್ಕಳು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಚ್. ಚಂದ್ರಶೇಖರ್, ಮಾಜಿ ಅಧ್ಯಕ್ಷ ಸಿ.ವೈ. ಅಶೋಕ್, ಮಾಜಿ ಕಾರ್ಯದರ್ಶಿ ಎಸ್. ಅರುಣ್, ವಕೀಲರಾದ ಎಚ್. ಆನಂದ್, ಕೆ.ಪಿ. ಮಾರುತಿ, ಕೆ.ಎಸ್. ಪರಶುರಾಮ, ಎಚ್.ಇ. ಸತ್ಯನಾರಾಯಣ, ಶರತ್ ಯಂಕೇನ್, ಆಶೀಕ್ ನಾಗಪ್ಪ, ಯು.ಕೆ. ಗುರುಮೂರ್ತಿ, ಟಿ.ಜಿ. ಸೋಮಶೇಖರ, ಪ್ರಮುಖರಾದ ಹೂವಪ್ಪ ಯಂಕೇನ್, ಏಕಾಂತ ಮತ್ತಿತರರಿದ್ದರು.
Ugadi ೨೦ ಸೊರಬ ೦೧: ಸೊರಬ ಪಟ್ಟಣದಲ್ಲಿ ವಕೀಲರ ಬಳಗದಿಂದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿAದ ಚಂದ್ರಗುತ್ತಿಯ ಶಕ್ತಿಪೀಠ ಶ್ರೀ ರೇಣುಕಾಂಬ ಸನ್ನಿಧಿವರೆಗೆ ಯುಗಾದಿ ಹಬ್ಬದ ನಿಮಿತ್ತ ಪಾದಯಾತ್ರೆ ನಡೆಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...