Sunday, August 2, 2026
Sunday, August 2, 2026

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Date:

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮ ನವಮಿ ಉತ್ಸವದ ಭಾಗವಾಗಿ ಪ್ರತಿ ದಿನ ಸಂಜೆ 06.30ಕ್ಕೆ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ದೇವರಿಗೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.

ಮಾ. 19ರ ಗುರುವಾರ ಯುಗಾದಿ ಹಬ್ಬ ಪಂಚಾಂಗ ಶ್ರವಣ ನಡೆಯಲಿದ್ದು, ಮಹಾವಿಷ್ಣುವಿನ ಅಲಂಕಾರವಿದೆ. ಮಾ. 20ರ ಶುಕ್ರವಾರ ಶ್ರೀಮತಿ ಭವಾನಿ ಅನಂತರಾಮ್ ಮತ್ತು ಸಂಗಡಿಗರು, ಮತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಗೂ ದೇವರಿಗೆ ವಿಶ್ವಾಮಿತ್ರ ಯಜ್ಞ ಸಂರಕ್ಷಣೆ ಅಲಂಕಾರ, ಮಾ. 21ರ ಶನಿವಾರ ಕಗ್ಗ ಖ್ಯಾತಿಯ ನಟೇಶ್‌ರವರಿಂದ ಸೀತಾ ಪರಿತ್ಯಾಗ – ಉಪನ್ಯಾಸ, ದೇವರಿಗೆ ಅಹಲ್ಯಾ ಶಾಪ ವಿಮೋಚನೆ ಅಲಂಕಾರವಿದೆ. 22ರ ಭಾನುವಾರ ನಾಗಶ್ರುತಿ ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಸೀತಾ ಕಲ್ಯಾಣ ಅಲಂಕಾರವಿದೆ. ಮಾ. 23ರ ಸೋಮವಾರ ನಡೆಯುವ ಮುದ್ರಿಕಾ ಪ್ರದಾನ ಗಮಕ ವಾಚನದಲ್ಲಿ, ಡಾ. ಸನತ್ ಕುಮಾರ್‌ರವರಿಂದ ವಾಚನ, ಅಚ್ಯುತ ಅವಧಾನಿಯವರಿಂದ ವ್ಯಾಖ್ಯಾನ ನಡೆಯಲಿದೆ.

Kote SeethaRamanjaneya Temple ದೇವರಿಗೆ ಗುಹಾತಿಥ್ಯ ಅಲಂಕಾರವಿದೆ. ಮಾ. ೨೪ರ ಮಂಗಳವಾರ ಸಂಭ್ರಮ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಕಬಂಧ ಬಾಹು ವಧೆ ಅಲಂಕಾರವಿದೆ. ಮಾ. 25ರ ಬುಧವಾರ ನಾದ ಸಂಭ್ರಮ ಕಾರ್ಯಕ್ರಮವಿದ್ದು, ದೇವರಿಗೆ ಶಬರಿ ಅತಿಥ್ಯ ಅಲಂಕಾರವಿದೆ. ಮಾ. 26ರ ಗುರುವಾರ ಶೃಂಗೇರಿ ಹೆಚ್. ಎಸ್. ನಾಗರಾಜ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮವಿದ್ದು, ದೇವರಿಗೆ ವಿಭೀಷಣ ಶರಣಾಗತಿ ಅಲಂಕಾರವಿದೆ. ಮಾ. 27ರ ಶುಕ್ರವಾರ ಬೆಳಗ್ಗೆ ಮೂಲ ರಾಮರಿಗೆ ಮಹಾಭಿಷೇಕ, ಸಂಜೆ 5ಕ್ಕೆ ಪಟ್ಟಾಭಿಷೇಕ, ಸಂಜೆ 7ಕ್ಕೆ ಉತ್ಸವ, ರಾವಣ ಸಂಹಾರ ಮತ್ತು ಪುಷ್ಪಕ ವಿಮಾನ ಅಲಂಕಾರ, ಮಾ. 28ರ ಶನಿವಾರ ಸಂಜೆ 7.00ಕ್ಕೆ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 5 ರಿಂದ ವಿವಿಧ ಭಜನಾ ಮಂಡಳಿ ವತಿಯಿಂದ ಸಂಜೆ ಭಜನಾ ಕಾರ್ಯಕ್ರಮವಿದ್ದು, ರಾತ್ರಿ ವಸಂತ ಸೇವೆ (ಪಾನಕ, ಕೋಸಂಬರಿ) ವಿತರಣೆ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...