Akashavani Bhadravati ಆಕಾಶವಾಣಿ ಭದ್ರಾವತಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕ / ಯುವತಿಯರಿಂದ ವಸಂತೋತ್ಸವ ಯುವಕವಿ ಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ.
ಕವನ ಕಳುಹಿಸುವವರು ವಸಂತಮಾಸದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆ ಹಾಗೂ ವಸಂತಮಾಸಕ್ಕೆ ಸಂಬಂಧಿಸಿದಂತೆ ಕವನಗಳನ್ನು ಕಳುಹಿಸಬಹುದಾಗಿದೆ. Akashavani Bhadravati 18 ರಿಂದ 35 ರ ವಯೋಮಾನದವರು ಈ ಕವಿಗೋಷ್ಥಿಗೆ ಕವನಗಳನ್ನು ಏಪ್ರಿಲ್ 15 ರೊಳಗಾಗಿ ನಿಲಯ ನಿರ್ದೇಶಕರು, ವಸಂತೋತ್ಸವ ಯುವಕವಿಗೋಷ್ಠಿ ವಿಭಾಗ, ಆಕಾಶವಾಣಿ, ಜೆ.ಪಿ.ಎಸ್.ಕಾಲೋನಿ ಭದ್ರಾವತಿ 577302 ಗೆ ಕಳುಹಿಸಬಹುದಾಗಿದ್ದು ಆಯ್ಕೆಯಾದ ಕವನಗಳನ್ನು ಬರೆದ ಕವಿಗಳೆ ಶ್ರೋತೃಗಳ ಸಮ್ಮುಖದಲ್ಲಿ ಪ್ರಸ್ತುತ ಪಡಿಸಲು ಅವಕಾಶ ಕಲ್ಪಿಸಲಾಗುವುದು ಹಾಗು ಕವನಗಳನ್ನು ಗಾಯನ ರೂಪದಲ್ಲಿ ಆಕಾಶವಾಣಿಯ ಕಲಾವಿದರಿಂದ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ತಿಳಿಸಿರುತ್ತಾರೆ.
Akashavani Bhadravati ಭದ್ರಾವತಿ ಆಕಾಶವಾಣಿ ವಸಂತೋತ್ಸವ ಯುವಕವಿಗೋಷ್ಠಿ : ಕವಿಗಳಿಗೆ ಕವಿತೆ ಕಳಿಸಲು ಪ್ರಕಟಣೆ
Date:
