Sunday, March 15, 2026
Sunday, March 15, 2026

Madhu Bangarappa ಬಡವರು & ಶ್ರಮಿಕರು ಹಸಿವಿನಿಂದ ಇರಬಾರದು ಎಂಬ ಉದಾತ್ತ ಉದ್ದೇಶದ ಹಿನ್ನೆಲೆಯಿಂದ ಇಂದಿರಾ ಕ್ಯಾಂಟೀನ್ ಚಾಲನೆ- ಮಧು ಬಂಗಾರಪ್ಪ.

Date:

Madhu Bangarappa ಬಡವರು ಮತ್ತು ಶ್ರಮಿಕ ವರ್ಗದವರು ಹಸಿವಿನಿಂದ ಇರಬಾರದು ಎಂಬ ಉದಾತ್ತ ಉದ್ದೇಶದಿಂದ ನಮ್ಮ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಗೆ ಮರುಜೀವ ನೀಡಿದೆ. ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಮುಖ್ಯ ಗುರಿ ಎಂದು ಶಾಲಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
​ಅವರು ಭಾನುವಾರ ಆನವಟ್ಟಿಯಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಅನ್ನು ಲೋಕಾರ್ಪಣೆಗೊಳಿಸಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಮುಖವಾಗಿದ್ದ 20 ಅಂಶಗಳ ಕಾರ್ಯಕ್ರಮದ ಆಶಯದಂತೆ, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೂ.5 ಮತ್ತು 10 ರೂ.ಗಳ ಅತ್ಯಲ್ಪ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಮೂಲಕ ಜನಸಾಮಾನ್ಯರ ಪರವಾಗಿ ನಿಂತಿದೆ. ಇದರಿಂದ ಹಸಿದವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ಕೈಗೆಟುಕುವ ದರದಲ್ಲಿ ಮತ್ತು ಸಕಾಲದಲ್ಲಿ ಸಿಗುವುದರಿಂದ ಶ್ರಮಿಕ ವರ್ಗದವರಿಗೂ ಸಾಕಷ್ಟು ಅನುಕೂಲವಾಗಿದೆ ಎಂದರು.
​ ಜಿಲ್ಲೆಯಲ್ಲಿ ಈಗಾಗಲೇ 16 ಇಂದಿರಾ ಕ್ಯಾಂಟೀನ್‌ಗಳ ಗುರಿ ಹೊಂದಲಾಗಿದ್ದು, ಶನಿವಾರ ಹೊಳೆಹೊನ್ನೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಿ ಇಂದು ಆನವಟ್ಟಿಯಲ್ಲಿ ಉದ್ಘಾಟಿಸಲಾಗಿದೆ. ಮತ್ತು ಶಿಕಾರಿಪುರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.
Madhu Bangarappa ಪಂಚ ಗ್ಯಾರಂಟಿಗಳ ಶಕ್ತಿ: ರಾಜ್ಯದ ಜನತೆಗೆ ಕೇವಲ ಅಕ್ಕಿ ಮಾತ್ರವಲ್ಲದೆ, ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಗೌರವಧನ ಹಾಗೂ ಉಚಿತ ವಿದ್ಯುತ್ ನೀಡುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಇದು ಸರ್ಕಾರದ ಕೊಡುಗೆಯಲ್ಲ, ಜನರ ಹಕ್ಕು ಎಂದು ಸಚಿವರು ಪ್ರತಿಪಾದಿಸಿದರು.
ಪಂಪ್‌ಸೆಟ್ ಸಕ್ರಮ: ರೈತರ ಹಿತದೃಷ್ಟಿಯಿಂದ ಬಾಕಿ ಇರುವ ಬೋರ್‌ವೆಲ್ ಪಂಪ್‌ಸೆಟ್‌ಗಳ ಸಕ್ರಮ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿವರು ಸ್ವತಃ ಕ್ಯಾಂಟೀನ್ ಆಹಾರ ಸವಿಯುವ ಮೂಲಕ ಗುಣಮಟ್ಟವನ್ನು ಪರಿಶೀಲಿಸಿದರು.
​ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ- ಶೈಕ್ಷಣಿಕ ಪ್ರತಿಭೆ ಅನಾವರಣಕ್ಕೆ” ಡಿಜಿಟಲ್ ಸ್ಟುಡಿಯೊ” ಆರಂಭಿಸುವ ಉದ್ದೇಶವಿದೆ- ಮಧು ಬಂಗಾರಪ್ಪ.

Madhu Bangarappa ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ- ಶೈಕ್ಷಣಿಕ ಪ್ರತಿಭೆ ಅನಾವರಣಗೊಳಿಸಲು ವೇದಿಕೆಯನ್ನು ಒದಗಿಸುವ...

Priyank Kharge ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸಲು ಮುಂಜಾಗ್ರತಾ ಕ್ರಮ- ಪ್ರಿಯಾಂಕ್ ಖರ್ಗೆ.

Priyank Kharge ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ...

Shivanand Patil ಯಶವಂತಪುರದಲ್ಲಿ ಶೀಘ್ರವೇ ಟೆಕ್ಸ್ ಟೈಲ್ ಪಾರ್ಕ್ ಶಂಕುಸ್ಥಾಪನೆ- ಜವಳಿ ಸಚಿವ ಶಿವಾನಂದ ಪಾಟೀಲ್.

Shivanand Patil ಪಾರಂಪರಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಉತ್ಪನ್ನಗಳಿಗೆ...