Thursday, April 30, 2026
Thursday, April 30, 2026

ಸೇವಿಸುವ ಆಹಾರವು ಉತ್ತಮ ಗುಣಮಟ್ಟದ್ದಾಗಿದ್ದಲ್ಲಿ ಆರೋಗ್ಯವು ಉತ್ತಮ : ಎಸ್‌.ಪಿ ಪರಮೇಶ್ವರ್ ಹೆಚ್

Date:

ಸೇವಿಸುವ ಆಹಾರವು ಉತ್ತಮ ಗುಣಮಟ್ಟದ್ದಾಗಿದ್ದಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ದಾವಣಗೆರೆ ಜಿಲ್ಲಾ ಅಡಿಷನಲ್ ಎಸ್‌.ಪಿ ಪರಮೇಶ್ವರ್ ಹೆಚ್ ಹೇಳಿದರು.

ಅವರಿಂದು ಆಹಾರ್2000 ನವರ ನೂತನ ಆಹಾರೋದ್ಯಮ ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳು ಹಾಗೂ ಸಿಹಿ ಪದಾರ್ಥಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ರಾಷ್ಟ್ರದ ಜಿಡಿಪಿಯಲ್ಲಿ ಆಹಾರೋದ್ಯಮದ ಕೊಡುಗೆ ಮಹತ್ತರವಾಗಿದೆ. ನಮ್ಮ ರಾಷ್ಟ್ರದ ಜಿಡಿಪಿ ಅಭಿವೃದ್ಧಿ ದರವು 7.8 ರಷ್ಟಿದ್ದು ವಿಶ್ವದಲ್ಲಿ ಇದು ಅಧಿಕವಾಗಿದೆ, ದೇಶದ ನಿವ್ಹಳ ಆಂತರಿಕ ಉತ್ಪಾದನಾ ಅಭಿವೃದ್ಧಿಯಲ್ಲಿ ಶೇಕಡ 11 ರಿಂದ 12 ರಷ್ಟು ಕೊಡುಗೆ ಕೊಡುತ್ತಿರುವ ಆಹಾರೋದ್ಯಮ ಕ್ಷೇತ್ರವು ದೇಶದ ಒಟ್ಟು ಉದ್ಯೋಗಗಳಲ್ಲಿ ಶೇಕಡ 13ರಷ್ಟನ್ನು ಒದಗಿಸುತ್ತಿದೆ ಎಂದರಲ್ಲದೆ ರುಚಿಯೊಂದಿಗೆ ಶುಚಿಯನ್ನೂ ಕಾಪಾಡಿಕೊಂಡು ಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ಒದಗಿಸಬಲ್ಲ ಆಹಾರ ಪದಾರ್ಥಗಳಿಗೆ ಯಾವತ್ತೂ ಭವಿಷ್ಯವಿದ್ದು ಆಹಾರ 2000 ಸಂಸ್ಥೆಯ ಧ್ಯೇಯವೇ ಇದಾಗಿದೆ. ಗ್ರಾಹಕ ಪರವಾದ ಆರ್ ಪ್ರಭಾಕರ್ ರವರ ಅವಿಷ್ಕಾರಗಳ ಪರಿಕಲ್ಪನೆಗಳನ್ನು ಎರಡೂವರೆ ದಶಕಗಳ ಕೆಳಗೆ ದಾವಣಗೆರೆಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಜಿ ವಿ ರಮೇಶ್ ಹಾಗೂ ಜಿ ನಾರಾಯಣ ಭಟ್ ರವರ ಪರಿಶ್ರಮವ ಅನುಕರಣೆಯ ಎಂದು ಹೆಚ್ ಬಿ ಮಂಜುನಾಥ್ ಅಭಿಪ್ರಾಯ ಪಟ್ಟರು.

ಘಪ್ರಸಿದ್ಧ ಮಯೂರ ಸಮೂಹದ ಚೇರ್ಮನ್ ಜಿ ಶ್ರೀನಿವಾಸರಾವ್ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಯಾವುದೇ ಸಂಸ್ಥೆಯ ಅಭಿವೃದ್ಧಿಯಲ್ಲಿ ಸಿಬ್ಬಂದಿಗಳ ಪಾತ್ರವೂ ಮಹತ್ತರವಾಗಿರುತ್ತದೆ ಎಂದರು. ರೂಪಾರವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳ ನಾಡಿದ ಆಹಾರ 2000 ಸಂಸ್ಥೆಯ ಜಿ ವಿ ರಮೇಶ್ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಬಳಸಿ ಆರೋಗ್ಯಕರವಾದ ಉತ್ಪನ್ನಗಳನ್ನು ನೂತನ ಸಂಸ್ಥೆಯು ಗ್ರಾಹಕರಿಗೆ ಒದಗಿಸಲಿದೆ ಎಂದರು. ಆಹಾರ 2000 ಸಂಸ್ಥೆಯ ರಚತ ಮಹೋತ್ಸವ ಅಂಗವಾಗಿ 35 ಶ್ರಮಿಕ ಬಂಧುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಸೇವಾ ಉದ್ದೇಶದ ಮಾತಾಪಿತೃ ಫೌಂಡೇಶನ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಆಹಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿ ನಾರಾಯಣ ಭಟ್, ಸುಬ್ಬಣ್ಣ, ಜನಾರ್ದನರಾವ್, ನಗರಪಾಲಿಕಾ ಮಾಜಿ ಸದಸ್ಯ ನಾಗರಾಜ್, ಶಿವನಹಳ್ಳಿ ರಮೇಶ್, ಲೋಕಿಕೆರೆ ನಾಗರಾಜ್, ಸುನಂದಾ ರಮೇಶ್ ಭಟ್ ಮುಂತಾದವರು ಉಪಸ್ಥಿತರಿದ್ದು ಹೋಟೆಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರರಾರು ಅಧ್ಯಕ್ಷೀಯ ನುಡಿಗಳ ನಾಡಿದರು. ಖ್ಯಾತ ವಾಗ್ಮಿ ಶ್ರೀಕಾಂತ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕಿ ಮಾನಸ ವಿ ಎಸ್, ಹೆಚ್ ಎಂ ಶ್ರೀಧರ್ ಮತ್ತು ತಂಡದವರು ಸುಗಮ ಸಂಗೀತ ಪ್ರಸ್ತುತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಪ್ರವಾಸಿ ತಾಣವಾಗಿ ಜೋಗದ ಅಭಿವೃದ್ದಿ ಕಾಮಗಾರಿ ಶೀಘ್ರ ಪೂರೈಸಲು ಸಂಸದ ರಾಘವೇಂದ್ರ ಸೂಚನೆ

B.Y. Raghavendra ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣವಾದ ಜೋಗ ಜಲಪಾತವನ್ನು...

Revenue Department ಮೇ 1 & 2 ಶಿವಮೊಗ್ಗದಲ್ಲಿ ಕಂದಾಯ ಇಲಾಖಾ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ

Revenue Department ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ...

Klive Special Article ವಿಶಿಷ್ಟಾವತಾರಾ.. ನರಸಿಂಹಾವತಾರ ...

Klive Special Article ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವೇ ನೃಸಿಂಹಾವತಾರ.ದಶಾವತಾರದಲ್ಲಿ ಇದೊಂದು...