Friday, March 20, 2026
Friday, March 20, 2026

Karnataka Sanga Shivamogga ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ವಸುಧಾ-ವೈಶಾಲಿ ಜನ್ಮದಿನ ಕಲಾ ಸನ್ಮಾನ ಕಾರ್ಯಕ್ರಮ

Date:

Karnataka Sanga Shivamogga ಕಳೆದ ನಲವತ್ತು ವರ್ಷಗಳ೦ತೆ ಈ ವರ್ಷವೂ ಕೂಡ ವಸುಧಾ-ವೈಶಾಲಿ ಜನ್ಮದಿನ ಸಮಿತಿಯು ಸ್ವಯಂ ಸಂಘ ಸಂಸ್ಥೆ “ಸಮಾನಸ” (ರಿ.) ದ ಸಹಯೋಗದೊ೦ದಿಗೆ ದಿನಾ೦ಕ 01-02-2026 ರವಿವಾರ ಸ೦ಜೆ 5 ಘ೦ಟೆಗೆ ಸರಿಯಾಗಿ ಶಿವಮೊಗ್ಗ ಕರ್ನಾಟಕ ಸಂಘದ ಹಸೂಡಿ ವೆ೦ಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಕಲಾ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಿತ್ತೂರು ರಾಣಿಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತರೂ, ಶ್ರೀವಿದ್ಯಾ ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಶ್ರೀಮತಿ ಪೂಜಾ ರರಘುನಂದನ್, ಹಾಸನ ಇವರನ್ನು ಈ ವರ್ಷದ ಕಲಾ ಸನ್ಮಾನಿತರಾಗಿ ಆಮ೦ತ್ರಿಸಲಾಗಿದೆ. ಸನ್ಮಾನ ಸಮಾರ೦ಭದ ನ೦ತರ ಸನ್ಮಾನಿತರಿ೦ದ “ತಾಯಿಯಾಗುವುದೆ೦ದರೆ” ಎ೦ಬ “ಏಕವ್ಯಕ್ತಿ ರ೦ಗಪ್ರದರ್ಶನ”ವು ಜರುಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸ೦ಘದ ಅಧ್ಯಕ್ಷರಾದ ಪ್ರೊ. ಹೆಚ್. ಆರ್. ಶ೦ಕರನಾರಾಯಣ ಶಾಸ್ತ್ರಿಯವರು ವಹಿಸುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರದ ಪ್ರಖ್ಯಾತ ಜನಾನುರಾಗಿ ವೈದ್ಯರಾದ ಡಾ. ಪಿ. ನಾರಾಯಣ ಅವರು ಉಪಸ್ಥಿತರಿರುವರು. ವಿಶೇಷ ಆಮ೦ತ್ರಿತರಾಗಿ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್ ಅವರು ಆಗಮಿಸಲಿದ್ದಾರೆ.

ಮಕ್ಕಳ ಹೆಸರಿನಲ್ಲಿ ಇದೊ೦ದು “ಸ೦ಗೀತ ಸಾಹಿತ್ಯ, ನೃತ್ಯ, ಯಕ್ಷಗಾನ ರ೦ಗಗಳ ವಿದ್ಯೆಗೆ ತಲೆಬಾಗುವ ಸ೦ಸ್ಕೃತಿ ಸನ್ಮಾನ” ಕಾರ್ಯಕ್ರಮ. ಆ ದಿನ ಬ೦ದ ಎಲ್ಲ ಪುಟಾಣಿ ಮಕ್ಕಳಿಗೆ ಕಿರುಗಾಣಿಕೆ ನೀಡುವು
ದು ಹಾಗೂ ಮಿತ್ರಭೋಜನವನ್ನು ಏರ್ಪಡಿಸುವದೂ ಈ ಕಾರ್ಯಕ್ರಮದ ಸದುದ್ದೇಶ.

Karnataka Sanga Shivamogga ಕಲಾಭಿಮಾನಿಗಳು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿ ಸಾಹಿತ್ಯ-ಕಲೆಗಳ ಈ ಸನ್ಮಾನ ‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಹಾಗೂ ಮಿತ್ರಭೋಜನವನ್ನುಸ್ವೀಕರಿಸಬೇಕೆ೦ದು ಕಾರ್ಯಕ್ರಮದ ಸ೦ಘಟಕರೂ ಪ್ರಾಯೋಜಕರೂ ಆದ ಡಾ. ವಿಘ್ನೇಶ್ ಎನ್. ಭಟ್ ಮತ್ತು ಡಾ. ಸುಮಿತ್ರಾ ವಿ. ಭಟ್ ಅವರು ಶಿವಮೊಗ್ಗದ ಕಲಾಸಕ್ತರನ್ನು ಆತ್ಮೀಯವಾಗಿ ಆಮ೦ತ್ರಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...