Monday, February 2, 2026
Monday, February 2, 2026

ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್: ಹರತಾಳು ಹಾಲಪ್ಪ

Date:

ನಾನು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯ ನೋಟಿಸ್ ಕೊಟ್ಟಿದ್ದೇನೆ. ಅವರು ಸಮರ್ಪಕ ಉತ್ತರ ಕೊಡದೇ ಇದ್ದಲ್ಲಿ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪದೇಪದೇ ಅವರು ಸಿಗಂದೂರು ದೇವಸ್ಥಾನದ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಲಪ್ಪ ಅವರು ಶಾಸಕರಾಗಿದ್ದಾಗ ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವ ಪ್ರಯತ್ನ ಮಾಡಿದ್ದರೆಂದು ಸುಳ್ಳು ಹೇಳುತ್ತಿದ್ದಾರೆ. ನಾನು ಯಾವತ್ತೂ ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವುದಾಗಲೀ, ಸರಕಾರದ ವಶಕ್ಕೆ ಪಡೆಯುವ ಕುರಿತು ಕನಸು ಮನಸಲ್ಲೂ ಎಣಿಸಿಲ್ಲ. ಆ ರೀತಿ ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ತಂದೆ, ತಾಯಿ, ಅಜ್ಜ ಅಜ್ಜಿ ಕಾಲದಿಂದಲೂ ಸಿಗಂದೂರು ದೇವಸ್ಥಾನದ ಭಕ್ತರು. ನಾನೂ ಅದರ ಭಕ್ತ. ಸಮಯ ಬಂದಾಗಲೆಲ್ಲ ದೇವಸ್ಥಾನದ ಪರವಾಗಿ ನಿಂತಿದ್ದೇವೆ. ಅದು ದೇವಸ್ಥಾನದ ಆಡಳಿತ ಮಂಡಳಿ ಪರವಾಗಿಯೂ ಅಲ್ಲ; ಭಟ್ಟರ ಪರವಾಗಿಯೂ ಅಲ್ಲ; ಎಲ್ಲರ ಪರವಾಗಿ ದೇವಸ್ಥಾನ ಉಳಿಯಬೇಕು, ಬೆಳೆಯಬೇಕೆಂಬ ಪ್ರಯತ್ನ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಸರಕಾರ ವಹಿಸಿಕೊಳ್ಳಲಿ; ಮುಜರಾಯಿ ವಹಿಸಿಕೊಳ್ಳಲೆಂದು ಯಾವತ್ತೂ ಹೇಳಿಲ್ಲ ಎಂದು ವಿವರಿಸಿದರು.
ನಾನು ಅಲ್ಲಗಳೆದ ಬಳಿಕವೂ ಗೋಪಾಲಕೃಷ್ಣ ಅವರು ಪದೇಪದೇ ಹೇಳಿದ್ದಾರೆ. ಹಾಲಪ್ಪನವರು ಇದನ್ನು ಮುಜರಾಯಿಗೆ ವಹಿಸಬೇಕೆಂಬ ಪ್ರಯತ್ನ ಮಾಡಿದ್ದಾಗಿ ವಿವಿಧ ಪತ್ರಿಕೆಗಳಲ್ಲಿ ಬಂದಿದೆ ಎಂದು ದೈನಿಕವನ್ನು ಪ್ರದರ್ಶಿಸಿದರು. ಅವರು ಆಟಾಟೋಪದ ಮಾತನ್ನಾಡುತ್ತಾರೆ. ಆದರೆ, ನಾವು ಅಂಥ ಪ್ರಯತ್ನವನ್ನು ಯಾವತ್ತೂ ಮಾಡಿಲ್ಲ ಎಂದು ತಿಳಿಸಿದರು.
ಸಿಗಂದೂರು ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ಅವರಲ್ಲಿ, ದೇವಸ್ಥಾನದ ಅರ್ಚಕರಲ್ಲಿ, ಆಡಳಿತ ಮಂಡಳಿ, ಧರ್ಮದರ್ಶಿಗಳಲ್ಲಿ ತಪ್ಪು ಭಾವನೆ ತರತಕ್ಕಂಥ ಕೆಲಸ ಮಾಡಿ ನನ್ನ ಮಾನ ಹರಾಜು ಹಾಕಬೇಕೆಂದು ಹಾಗೂ ನನಗೆ ಕೆಟ್ಟ ಹೆಸರು ತರಬೇಕೆಂದು ಸತತ ಪ್ರಯತ್ನ ಮಾಡುತ್ತಿದ್ದಾರೆ. ನಾನು ಅಂಥದ್ದೇನೂ ಮಾಡಿಲ್ಲ ಎಂದು ಅನೇಕ ಸಲ ಹೇಳಿದ್ದೇನೆ. ಆದರೂ ಪದೇಪದೇ ಹೇಳಿ ನನ್ನ ತೇಜೋವಧೆ ಮಾಡುವ, ಭಕ್ತÀರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಈ ಸಂಬಂಧ ಅವರಿಗೆ ಕಾನೂನಿನಡಿ ನೋಟಿಸ್ ಕೊಟ್ಟಿದ್ದಾಗಿ ಹೇಳಿದರು.
5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲಿದ್ದೇನೆ; ಇಲ್ಲವೇ ಬೇóಷರತ್ ಕ್ಷಮೆ ಕೇಳಬೇಕು ಅಥವಾ ನಿಮ್ಮ ಬಳಿ ಸಾಕ್ಷ್ಯಾಧಾರ ಇದ್ದರೆ ಒದಗಿಸಬೇಕು ಎಂದು ತಿಳಿಸಿರುವುದಾಗಿ ಹೇಳಿದರು. ಅವರು, ಅವರ ಕುಟುಂಬದವರು ಈ ದೇವಸ್ಥಾನವನ್ನು ಮುಜರಾಯಿಗೆ ವಹಿಸಿ ಕೊಡಬೇಕೆಂದು ಹೇಳಿದ್ದಿದೆ ಎಂದು ಆರೋಪಿಸಿದರು.
ರಾಜಕೀಯದಲ್ಲಿ ಸುಳ್ಳು ಹೇಳುತ್ತಾರೆ; ಅಭಿವೃದ್ಧಿಯ ವಿಷಯದಲ್ಲೂ ಸುಳ್ಳು ಹೇಳುತ್ತಾರೆ. ಆದರೆ, ದೇವರ ವಿಷಯದಲ್ಲಿ ಸುಳ್ಳು ಹೇಳುವ ಇವರಿಗೆ ಕಾನೂನು ಕ್ರಮವೇ ಸರಿಯಾದುದೆಂದು ನೋಟಿಸ್ ಕೊಟ್ಟಿದ್ದೇನೆ ಎಂದು ತಿಳಿಸಿದರು.

(ಕರುಣಾಕರ ಖಾಸಲೆ)
ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...