Wednesday, September 16, 2026
Wednesday, September 16, 2026

ರಾಜ್ಯಮಟ್ಟದ ವಿವಿಧ ಪುಷ್ಪಾಧಾರಿತ ಕಲೆಗಳ ಸ್ಪರ್ಧೆಗೆ ಅರ್ಜಿ ಆಹ್ವಾನ

Date:

ಲಾಲ್‌ಬಾಗ್ ಸಸ್ಯ ಶಾಸ್ತ್ರೀಯ ತೋಟದಲ್ಲಿ, ಜನವರಿ-2026 ರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ತೇಜಸ್ವಿ-ವಿಸ್ಮಯ; ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ” ವಿಷಯಾಧಾರಿತ 219ನೇ ಫಲಪುಷ್ಪ ಪ್ರದರ್ಶನಕ್ಕೆ ಪೂರಕವಾಗಿ, ವಿವಿಧ ಪುಷ್ಪಾಧಾರಿತ ಕಲೆಗಳ (ಇಕೆಬಾನ ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಹಾಗೂ ಪುಷ್ಪ ರಂಗೋಲಿ) ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿರುತ್ತದೆ.

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ಕಚೇರಿ ವೇಳೆಯಲ್ಲಿ ಅಂದರೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತೋಟಗಾರಿಕೆ ಅಪರ ನಿರ್ದೇಶಕರ ಕಚೇರಿ (ಯೋಜನೆ), ಲಾಲ್‌ಬಾಗ್, ಬೆಂಗಳೂರು ಇವರಿಂದ ಅರ್ಜಿಗಳನ್ನು ಪಡೆದು, ಪ್ರತಿ ಅರ್ಜಿಗೆ ರೂ. 100/- ಶುಲ್ಕವನ್ನು ಪಾವತಿಸಿ 2026 ನೇ ಜನವರಿ 14 ರ
ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಲಾಲ್ ಬಾಗ್ ಸಸ್ಯ ತೋಟ ಉಪನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...