Shimoga News ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ ೧೧೫ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು. ಗೋಪಾಳದ ಶ್ರೀ ಶಾರದಾ ಶಂಕರ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ಮತ್ತು ಹುಬ್ಬಳ್ಳಿಯ ಹಿಂದೂಸ್ಥಾನಿ ಗಾಯಕ ನಿಜಗುಣಿ ಮಂಗಿ ಅವರಿಂದ ಸಂಗೀತ ಸೇವೆ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ರಾಮಣ್ಣ ಭಜಂತ್ರಿ ಶಹನಾಯ, ವೀರಭದ್ರಯ್ಯ ಶಾಸ್ತ್ರಿಗಳಿಂದ ವೇದಘೋಷ ಹಾಗೂ ಹಿರಿಯ ತಬಲ ಕಲಾವಿದರಾದ ಪಂ. Shimoga News ಆರ್. ತುಕಾರಾಮ್ ರಂಗಧೋಳ್ ವಿನಾಯಕ್ ಭಟ್ ಅವರ ತಬಲ ಸೇವೆ ಹಾಗೂ ಸಿದ್ದಣ್ಣ ಬಡಿಗಾರ್ ಅವರು ಆರ್‍ಮೋನಿಯಂ ನೊಂದಿಗೆ ಸಾಥ್ ನೀಡಲಿದ್ದಾರೆ. ಸಂಗೀತ ಶಿಕ್ಷಕಿ ನಾದಶ್ರೀ ಫಕೀರಯ್ಯ ಕಾರ್ಯಕ್ರಮ ಶಾಸ್ತ್ರಿ ಅವರು ನಿರೂಪಿಸಿದರು.
Shimoga News ಸಂಗೀತ ರಸಿಕರನ್ನ ರಂಜಿಸಿದ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ
Date:
