Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ ಬಿರಾದರರವರು ಭೌತಶಾಸ್ತ್ರ ವಿಷಯದಲ್ಲಿ ಡಾ. ಚಂದ್ರಶೇಖರ ಎಂ.ಎನ್. ಮತ್ತು ಪ್ರೋ. ದೇವಿದಾಸ್ ಜಿ.ಬಿ ಅವರ ಮಾರ್ಗದರ್ಶನದಲ್ಲಿ ಸಂಶೋಧಿಸಿದ “ಸಿಂಥೇಸಿಸ್ ಆಂಡ್ ಕ್ಯಾರೇಕ್ಟರೈಜೇಷನ್ ಆಫ್ ಹ್ಯವಿ ಮೆಟಲ್ ಆಕ್ಸೈಡ್ ಡೋಪ್ಡ್ ಬೋರೇಟ್ ಗ್ಲಾಸೆಸ್ ಫಾರ್ ರೇಡಿಯೇಷನ್ ಶೀಲ್ಡಿಂಗ್ ಅಪ್ಲಿಕೇಷನ್” ಎಂಬ ಪ್ರಬಂಧಕ್ಕೆ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್‌ಡಿ ನೀಡಿ ಗೌರವಿಸಿದೆ.
ಇವರು ತಮ್ಮ ಪ್ರಬಂಧದಲ್ಲಿ ಕಿರಣ ರಕ್ಷಣೆಗೆ ಸೂಕ್ತವಾದ ನವೀನ ಬೊರೇಟ್ ಗ್ಲಾಸ್ ವಸ್ತುಗಳ ಅಭಿವೃದ್ಧಿ ಮತ್ತು ಅವುಗಳ ಗುಣಲಕ್ಷಣಗಳನ್ನು ಸಂಶೋಧಿಸಿದ್ದಾರೆ. ಈ ಅಧ್ಯಯನವು ಕಿರಣ ರಕ್ಷಣಾ ವಸ್ತುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ವಿಷಯದಲ್ಲದಿ ಮಹತ್ವದ ಮಾಹಿತಿಯನ್ನು ಒದಗಿಸುತ್ತದೆ.
ಭವಿಷ್ಯದಲ್ಲಿ ಯಂತ್ರಗಳು, ವೈದ್ಯಕೀಯ ಉಪಕರಣಗಳು ಮತ್ತು ಇತರ ರೇಡಿಯೇಷನ್ ಅಪ್ಲಿಕೇಶನ್‌ಗಳಿಗೆ ಬಳಸಬಹುದಾದ ಶಿಲ್ಡಿಂಗ್ ವಸ್ತುಗಳ ಅಭಿವೃದ್ಧಿಗೆ ದಾರಿತೋರಬಹುದೆಂದು ಶ್ರೀಕಾಂತ ಬಿರಾದರ ತಿಳಿಸಿದ್ದಾರೆ.
Kuvempu University ಶ್ರೀಕಾಂತ ಬಿರಾದರರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಲು ಅಭಿನಂದಿಸಿದ್ದಾರೆ. ಸಂಶೋಧನೆಗೆ ಸಹಕರಿಸಿದ ಗುರುಗಳು, ಕಾಲೇಜು ಮತ್ತು ಮನೆಯವರ ಬೆಂಬಲಕ್ಕೆ ಶ್ರೀಕಾಂತ ಬಿರಾದರ ಧನ್ಯವಾದ ತಿಳಿಸಿದ್ದಾರೆ.
