Monday, August 3, 2026
Monday, August 3, 2026

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

Date:

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಲೆಯಂತೆ ರೈತರಿಂದ ಭತ್ತವನ್ನು ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಭತ್ತವನ್ನು ಖರೀದಿಸಲು ಕನಿಷ್ಟ ಬೆಂಬಲವನ್ನು ಬೆಲೆ ನಿಗದಿಪಡಿಸಿದ್ದು ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ ರೂ.2369, ಗ್ರೇಡ್ ಎ ಭತ್ತ ಪ್ರತಿ ಕ್ವಿಂಟಾಲ್‌ಗೆ ರೂ.2389 ರಂತೆ ಖರೀದಿಸಲಾಗುವುದು. ಈ ಯೋಜನೆಯಡಿ ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮತ್ತು ನಿಯಮಿತ ವತಿಯಿಂದ ನೇಮಿಸಲಾಗುವ ಉಪ ಏಜೆನ್ಸಿಗಳಾದ ಟಿಎಪಿಸಿಎಂಎಸ್/ಪಿಎಸಿಎಸ್/ಎಫ್‌ಪಿಓ/ಎಸ್‌ಜಿಎಸ್ ಗಳನ್ನು ಸಂಗ್ರಹಣಾ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ.

ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳ ಎಪಿಎಂಸಿ ಯಾರ್ಡ್ಗಳಲ್ಲಿರುವ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದು ರೈತರಿಂದ ಭತ್ತ ಖರೀದಿಸಲಾಗುವುದು.

DC Shivamogga ರೈತರು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರ‍್ರೂಟ್ಸ್ ಐಡಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ದಿ:31-12-2025 ರವರೆಗೆ ಭತ್ತವನ್ನು ನೊಂದಾಯಿಸಿಕೊಳ್ಳಬಹುದು. ಹಾಗೂ ದಿ:28-02-2026 ರ ಅವಧಿಯವರೆಗೆ ರೈತರಿಂದ ಭತ್ತವನ್ನು ಖರೀದಿ ಮಾಡಲಾಗುವುದು. ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...