Friday, March 20, 2026
Friday, March 20, 2026

National Health Campaign ಕುಷ್ಠರೋಗ ಸಾಮಾಜಿಕ ಕಳಂಕವಲ್ಲ.ಆರಂಭದಲ್ಲೇ ಪತ್ತೆಹಚ್ಚಿದಲ್ಲಿ ಸೂಕ್ತ ಚಿಕಿತ್ಸೆಯಿಂದ ಗುಣಸಾಧ್ಯ,- ಡಾ. ನಟರಾಜ್

Date:

National Health Campaign ಕುಷ್ಠರೋಗವನ್ನು ಒಂದು ಸಾಮಾಜಿಕ ಕಳಂಕವಾಗಿ ಬಿಂಬಿಸಲಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಹಾಗೂ ಈ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚುವ ಮೂಲಕ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದು ಕುಷ್ಟರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಡಿಹೆಚ್‌ಓ ಡಾ.ನಟರಾಜ್ ಕೆ.ಎಸ್.ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಷ್ಠರೋಗವು ಎಂ.ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಕಾಯಿಲೆಯಾಗಿದ್ದು, ಈ ರೋಗದಿಂದ ಉಂಟಾಗುವ ಅಂಗವಿಕಲತೆಯಿಂದ ಇದಕ್ಕೆ ಸಾಮಾಜಿಕ ಕಳಂಕ ಅಂಟಿದೆ.
ದೇಹದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು, ಕೈ ಅಥವಾ ಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದಿರುವುದು, ಜೋಮು ಹಿಡಿಯುವುದು, ಮುಖ ಮತ್ತು ಕಿವಿಯ ಮೇಲೆ ಎಣ್ಣೆಯಂತಹ ಹೊಳಪುಗಳು ಕಂಡುಬರುವುದು ಈ ರೋಗದ ಲಕ್ಷಣಗಳಾಗಿದ್ದು, ಈ ರೋಗವು ಮೂಗಿನ ದ್ರವದಿಂದ ಹಾಗೂ ಉಸಿರಿನ ಮೂಲಕ ಆರೋಗ್ಯವಂತನಿಗೆ ಹರಡಲಿದೆ.

ಈ ರೋಗವು ವಂಶಪಾರಂಪರ್ಯವಲ್ಲ ಹಾಗೂ ಪಾಪ-ಶಾಪಗಳಿಂದ ಬರುವುದಿಲ್ಲ ಎಂದು ಮಾಹಿತಿ ನೀಡಿದರು.

ದೇಹದಲ್ಲಿ ತಿಳಿಬಿಳಿ ಮಚ್ಚೆಗಳು ಕಂಡು ಬಂದಲ್ಲಿ ಅದನ್ನು ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಬೇಕು. ಆ ಮೂಲಕ ರೋಗದ ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದು ಅಂಗವಿಕಲತೆಯನ್ನು ತಡೆಗಟ್ಟಬಹುದಾಗಿದೆ.
ಈ ರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದಲೂ ಕೂಡ ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು, 6 ಅಥವಾ 12 ತಿಂಗಳ ಕಾಲ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದು.

National Health Campaign ಈಗಾಗಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಬಹು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಡಿಎಲ್ ಓ ಡಾ. ಕಿರಣ್ ಮಾತನಾಡಿ, ಕುಷ್ಠರೋಗ ನಿರ್ಮೂಲನೆ ಬಹುಮುಖ್ಯ ಕಾರ್ಯಕ್ರಮವಾಗಿದ್ದು, ಆದಷ್ಟು ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತರು ವ್ಯಕ್ತಿಯ ದೇಹದಲ್ಲಿ ಯಾವುದೇ ರೀತಿಯ ತಿಳಿ ಬಿಳಿ ಮಚ್ಚೆ ಹಾಗೂ ಚರ್ಮದಲ್ಲಿ ಕಾಯಿಲೆ ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ತೋರಿಸಿಕೊಂಡು‌ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲೆಯಲ್ಲಿ ಇಂದಿನಿಂದ 14 ದಿನಗಳ ಕಾಲ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ನಡೆಯಲಿದ್ದು, 133 ಹಳ್ಳಿಗಳು, 71,662 ಮನೆಗಳು ಹಾಗೂ 3,06,052 ಜನರನ್ನು ಪರೀಕ್ಷೆಗೆ ಒಳಪಡಿಸಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚುವ ಗುರಿಯನ್ನು ಹೊಂದಿದ್ದೇವೆ ಎಂದರು.

ಈ ವೇಳೆ ಆಶಾ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗ ಪ್ರಕರಣವನ್ನು ಪತ್ತೆ ಹಚ್ಚುವ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್ಷಿಯಾ ಅಂಜುಂ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಸ್ವಯಂ ಸೇವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಶಿವಮೊಗ್ಗದಿಂದ ದಂಪತಿ ನಾಪತ್ತೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆಮ

Shivamogga News ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 2ನೇ...

Shivamogga News ಪಂಚಾಂಗ ಶ್ರವಣವು ಪುಣ್ಯಪ್ರದ. ಕೆಟ್ಟಸ್ವಪ್ನವನ್ನು ದೂರಮಾಡುತ್ತದೆ- “ಕಗ್ಗ” ಜಿ.ಎಸ್.ನಟೇಶ್.

Shivamogga News ಪಂಚಾಂಗ ಶ್ರವಣದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಮ್ಮ ಎಲ್ಲಾ...

Rangayana, Shivamogga ಚಿಣ್ಣರ ಸಿಹಿಮೊಗೆ ಬೇಸಿಗೆ ಶಿಬಿರದಲ್ಲಿ ನಾಟಕ ನಿರ್ದೇಶಕ ಮತ್ತು ಜನಸಹಾಯಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಅರ್ಜಿಗಳ ಆಹ್ವಾನ.

Rangayana ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ...