B.Y.Raghavendra ಶಿವಮೊಗ್ಗದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.
ಸಾರ್ವಜನಿಕರಿಗೆ ಒಂದು ಸಂದೇಶ ಕೊಡಬೇಕಿದೆ.
ಡಿಸಿಎಂ ಹೇಳ್ತಾರೆ ಹಿಂದೆ ಸಿಎಂ ಬದಲಾವಣೆ ಒಪ್ಪಂದ ಆಗಿದೆ ಅಂತ.ಆದರೆ ನಾನೇ ಐದು ವರ್ಷ ಸಿಎಂ ಅಂತ ಸಿದ್ದರಾಮಯ್ಯನವರು ಹೇಳ್ತಾರೆ.ಯಾರು ಎಷ್ಟೇ ವರ್ಷ ಇರಲಿ ಆದರೆ ನಿಮ್ಮ ಚರ್ಚೆಯಲ್ಲಿ ಅಭಿವೃದ್ದಿ ವಿಚಾರ ಪ್ರಸ್ತಾಪ ಆಗ್ತಿಲ್ಲ ಎಂದರು.
ನಿಮ್ಮ ಕುರ್ಚಿಯ ಹಗ್ಗಾಜಗ್ಗಾಟದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ.ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಆಗದೆ ರೈತರು ಬೀದಿಗೆ ಬಿದ್ದಿದ್ದಾರೆ.ಬೆಳೆಹಾನಿ ಪರಿಹಾರ ನೀಡಿಲ್ಲ, ರಸ್ತೆ ಗುಂಡಿಗಳು ಮುಚ್ಚುವ ಕೆಲಸ ಆಗಿಲ್ಲ.
ರಾಜ್ಯದ ಜನರು ನಿಮ್ಮನ್ನ ನೋಡಿ ನಗ್ತಾ ಇದ್ದಾರೆ ಎಂದು ಹೇಳಿದರು.
B.Y.Raghavendra ಏನೇ ಮಾಡಿಕೊಂಡರು ನಾಲ್ಕು ಗೋಡೆ ಮಧ್ಯೆ ಮಾತಾಡಿಕೊಂಡು ಆಡಳಿತದ ಕಡೆ ಗಮನ ನೀಡಿ.
ನೂರಕ್ಕೆ ನೂರು ಸಿಎಂ ಬದಲಾವಣೆ ಆಗುತ್ತೆ.
ಈಗ ಮತ್ತೆ ಮಾಧ್ಯಮದಲ್ಲಿ ಸಂಕ್ರಾತಿ ನಂತರ ಅಂತಾ ಬರ್ತಿದೆ.
ನಮಗೇನು ಯಾರು ಸಿಎಂ ಆದರೂ ರಾಜ್ಯಕ್ಕೆ ಉತ್ತಮ ಆಡಳಿತ ಕೊಡಲಿ ಅಂತ ಒತ್ತಾಯ ಮಾಡ್ತೇನೆ.
ರಾಜ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.
ವಿಜಯೇಂದ್ರ ಅವರು ತಮ್ಮ ಪೂರ್ಣ ಅವಧಿವರೆಗೆ ಮುಂದುವರಿಯುತ್ತಾರೆ ಎಂದು ಹೇಳಿದರು.
