Mathura Paradise ಮನುಷ್ಯ ತನ್ನಲ್ಲಿನ ಮನಸ್ಸಿನ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಮಾತೃಭಾಷೆ ಸಹಕಾರಿ ಎಂದು ಮಹಿಳಾ ಉದ್ಯಮಿ ಡಾ. ಲಕ್ಷ್ಮೀದೇವಿ ಗೋಪಿನಾಥ್ ಹೇಳಿದರು.
ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಎಸ್.ಎಸ್.ಕರೋಕೆ ಗ್ರೂಪ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರೂ ಮಾತೃಭಾಷೆಯಲ್ಲಿ ಭಾವನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಬಹುದು. ಕನ್ನಡ ಭಾಷೆಯನ್ನು ಉಳಿಸೋಣ, ಬೆಳೆಸೋಣ. ಅನ್ಯ ಭಾಷೆಯನ್ನು ಗೌರವಿಸೋಣ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಮನುಷ್ಯನ ಮನಸ್ಸಿಗೆ ನೆಮ್ಮದಿ ತರುವ ದಿವ್ಯ ಔಷಧ. ಇಂತಹ ಕರೋಕೆ ತಂಡಗಳಿಂದ ಹೊಸ ಹೊಸ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುವುದರ ಜತೆ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಗೀತೆಗಳ ಸ್ಪರ್ಧೆಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಗಾಯಕರ ಭಾಷಾಜ್ಞಾನ ಹಾಗೂ ಧ್ವನಿ ಸಂಸ್ಕಾರ ಆಗುತ್ತದೆ ಮತ್ತು ಅವರಲ್ಲಿ ಕನ್ನಡ ಅಭಿಮಾನ ನೆಲೆಯುತ್ತದೆ ಎಂದು ತಿಳಿಸಿದರು.
Mathura Paradise ಎಸ್‌ಎಸ್ ಕರೋಕೆ ಗ್ರೂಪ್ ತಂಡದ ಅಧ್ಯಕ್ಷ ಮಥುರಾ ನಾಗರಾಜ್ ಮಾತನಾಡಿ, ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಅವರಿಗೆ ರಾಜ್ಯ ಮಟ್ಟದ ಮಹಿಳಾ ಉದ್ಯಮಿ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ನೂರಾರು ಜನರಿಗೆ ಉದ್ಯೋಗ ಕೌಶಲ್ಯ ಹಾಗೂ ಅನ್ನದಾತರಾಗಿರುವ ಗೋಪಿನಾಥ್ ದಂಪತಿಗೆ ನಾವು ಸದಾ ಚಿರಋಣಿ ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಪರಭಾಷೆಯ ವ್ಯಾಮೋಹದಿಂದ ನಮ್ಮ ಕನ್ನಡ ಭಾಷೆಗೆ ಕುತ್ತು ಬರುತ್ತಿದೆ. ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮೀಸಲಾಗದೆ ಮನೆಮನಗಳಲ್ಲಿ ನಮ್ಮ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವುದರ ಮುಖಾಂತರ ಸ್ವಾಭಿಮಾನಿಗಳಾಗೋಣ ಎಂದು ತಿಳಿಸಿದರು.
ಎಸ್‌ಎಸ್ ಕರೋಕೆ ಗ್ರೂಪ್ ತಂಡದ ವತಿಯಿಂದ ಕನ್ನಡ ರಾಜ್ಯೋತ್ಸವದ ವಿಶೇಷ ಗೀತೆಗಳ ಗಾಯನ ಹಾಗೂ ಸ್ಪರ್ಧೆ ನೆರವೇರಿತು. ಯೇಸುದಾಸ್, ಕಲಾವಿದರಾದ ರೂಪಾ, ಕರಿಬಸವ, ಲಿಸ್ಸಿ, ವಿನಯ್, ಯಶಸ್ವಿನಿ, ಪ್ರತಿಭಾ, ಶರತ್, ಶುಭ, ಪ್ರಕಾಶ್, ಎಸ್ ಎಸ್ ಕರೋಕೆ ಗ್ರೂಪ್ ತಂಡದ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
Mathura Paradise ಮಾತೃಭಾಷೆಯಲ್ಲಿ ಭಾವನೆಗಳನ್ನ ಉತ್ತಮವಾಗಿ ವ್ಯಕ್ತಪಡಿಸಬಹುದು- ಡಾ.ಲಕ್ಷ್ಮೀದೇವಿ ಗೋಪಿನಾಥ್
Date:
