Shri Shivakumar Swamiji ಶಿವಮೊಗ್ಗ ನಗರದ ನವಲೆ, ಡಾಲರ್ಸ್ ಕಾಲೋನಿಯ ಹಿಂಭಾಗ ಶ್ರೀ ಶಿವಕುಮಾರ ಸ್ವಾಮೀಜಿ ನೌಕರರ ಸಂಘ ಶ್ರೀ ಬಿ.ಎಸ್. ಯಡಿಯೂರಪ್ಪ ಉಚಿತ ವಿದ್ಯಾರ್ಥಿ ನಿಲಯ ಇಲ್ಲಿ ಕಾರ್ತಿಕ ಚಿಂತನ ಕಾರ್ಯಕ್ರಮ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಬಸವ ಮರುಳಸಿದ್ದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಏರ್ಪಡಿಸಲಾಗಿತ್ತು.
ಕುಮಾರಿ ತನ್ಮಯ್ ಅವರ ವಚನ ಗೀತೆಯ ಪ್ರಾರ್ಥನೆ ಮಾಡಿದರು, ಶ್ರೀ ಕೆ. ಶರಣಪ್ಪ ಸಭೆಗೆ ಸರ್ವರನ್ನು ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಶಿವಕುಮಾರ ಸ್ವಾಮೀಜಿ ನೌಕರ ಸಂಘದ ಅಧ್ಯಕ್ಷರು ಆಗಿರುವ ಶ್ರೀ ಸಿ ಎಸ್ ಷರಾಕ್ಷರಿ ಅವರು ವಿದ್ಯಾರ್ಥಿ ನಿಲಯ ನಡೆದು ಬಂದ ದಾರಿ ಸಮಾಜ ಬಾಂಧವರು ನೀಡಿದ ಉದಾರ ಧಾನ ಮತ್ತು ಕಡು ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳ ನೆರವನ್ನ ನೆನಪಿಸಿಕೊಂಡರು.
ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ ಜ್ಯೋತಿಪ್ರಕಾಶ್ ಕಾರ್ಯದರ್ಶಿಗಳಾದ ಶ್ರೀ ಎಸ್.ಪಿ ದಿನೇಶ್ ಹಾಗೂ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಬಳ್ಳೇಕೆರೆ ಸಂತೋಷ್ ವಿದ್ಯಾರ್ಥಿ ನಿಲಯ ಕಾರ್ತಿಕ ಚಿಂತನದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಸಹಕಾರಿ ಯೂನಿಯನ್ ನಲ್ಲಿ ಜಯಶಾಲಿಗಳಾದ ಶ್ರೀ ದಿನೇಶ್ ಬುಳ್ಳಾಪುರ. ಕೆ.ಎಲ್ ಜಗದೀಶ್ ಮತ್ತು ಹನುಮಂತು ಭದ್ರಾವತಿ ಮತ್ತು ನಿವೃತ್ತ ನೌಕರ ಸಂಘದ ನೂತನ ಜಿಲ್ಲಾಧ್ಯಕ್ಷರಾದ ಎಸ್. ಆರ್ ಚಂದ್ರಪ್ಪ ಇವರನ್ನು ಅಭಿನಂದಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಶ್ರೀಮತಿ ವಿಜಯ ಶ್ರೀಧರ್ ಭಕ್ತಿ ಮತ್ತು ಶ್ರದ್ದೆಯ ಬಗ್ಗೆ ಶರಣರ ವಚನಗಳ ಮೂಲಕ ಪ್ರಸ್ತುತಪಡಿಸಿದರು. ಬಸವ ಕೇಂದ್ರದ ಗುರುಗಳಾದ ಶ್ರೀ ಶ್ರೀ ಬಸವಮರುಳಸಿದ್ದ ಸ್ವಾಮಿಗಳು ಸಮಾಜದ ಪರಂಪರೆಯಲ್ಲಿ ವಚನ ಸಾಹಿತ್ಯ ಮತ್ತು ಭಕ್ತಿ ಪರಂಪರೆಯನ್ನು ಆಶೀರ್ವಚನದ ಮೂಲಕ ಭಕ್ತರಿಗೆ ತಿಳಿಸಿದರು.
Shri Shivakumar Swamiji ಶ್ರೀ ಎಸ್.ಪಿ ಮೋಹನ್ ಕುಮಾರ್ ಕಾರ್ಯಕ್ರಮವನ್ನು ಶರಣು ಸಮರ್ಪಣೆ ಮಾಡಿದರು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಲವಕುಮಾರ್ ಸ್ವಾಮಿ ಪದಾಧಿಕಾರಿಗಳಾದ ಕೆ.ಸಿ ಶರಣಪ್ಪ, ಎಸ್.ಪಿ. ಮೋಹನ್ ಕುಮಾರ್, ಬಿ.ಎಚ್. ನಿರಂಜನ್ ಮೂರ್ತಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಸಿದ್ದಬಸಪ್ಪ, ಶಿವಕುಮಾರ ಸ್ವಾಮೀಜಿ ಸಂಘದ ಗೌರವಾಧ್ಯಕ್ಷರಾದ ಶ್ರೀ ಸಿ.ಜಿ. ಪರಮೇಶ್ವರಪ್ಪ ಕಾರ್ಯದರ್ಶಿಗಳಾದ ಡಾ. ಶಿವಯೋಗಿ ಎಲಿ ಖಜಾಂಚಿಗಳಾದ ಎಂ.ಎನ್. ರಂಗನಾಥ ಉಪಸ್ಥಿತರಿದ್ದರು.
