Saalumarada Thimmakka ಹಸಿರೇ ಉಸಿರಾಗಿ ಬಾಳಿದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕನಿಗೆ ಅಂತಿಮ ನಮನಗಳು
ನಿಮ್ಮ ಹೆಸರಲ್ಲಿ ಏನೇನಿದೆ ?!!ಎಂದು ಯಾರಾದರೂ ಕೇಳಿದರೆ ನಾವು ಮಾಡಿರುವ ಅಷ್ಟೋ-ಇಷ್ಟೋ ಆಸ್ತಿ-ಸೈಟು-ಮನೆ-ಗಾಡಿಯ ವಿವರ ಕೊಡಬಹುದು…. ವಾಸ್ತವದಲ್ಲಿ ಅವು ನಮ್ಮ ಹೆಸರಿನಲ್ಲಿ ಇದ್ದರೂ ನಮ್ಮದಲ್ಲ! ಇದು ಎಲ್ಲರಿಗೂ ಗೊತ್ತಿರುವ ಸತ್ಯ !
ನಮ್ಮ ಹೆಸರಿನಲ್ಲಿ “ಮರ” ಒಂದಿದೆಯೇ?!!! ಯಾರೋ ನೆಟ್ಟ ಮರವಲ್ಲ … ನೀವೆ ಕಯ್ಯಾರ ಸಸಿಯೊಂದನ್ನು ನೆಟ್ಟು ಮರವಾಗಿ ಬೆಳೆಸಿದ ಭಾಗ್ಯ ನಿಮಗಿದೆಯೇ!? ಈ ಭಾಗ್ಯ ನಿಮಗಿಲ್ಲದಿದ್ದರೆ ನೀವು ಕೋಟಿವಂತರಾದರೂ ಕಡು ಬಡವರೇ…..
Saalumarada Thimmakka ನಮ್ಮ ಪ್ರತಿ ಶ್ವಾಸವೂ ಆ ಮರಗಳು ನಮಗೆ ಕೊಟ್ಟ ತೀರಿಸಲಾಗದ ಸಾಲ …. ಋಣ ಹೊತ್ತು ಸಾಯುವುದರಲ್ಲಿ ಸುಖವಿಲ್ಲ …. ಸ್ವಂತ ಮಕ್ಕಳು ನಮ್ಮ ಹೆಸರು ಹೇಳದೇ ಇರಬಹುದು ಆದರೆ ನೆಟ್ಟ ಸಸಿ ಮರವಾದಾಗ ಸೂಸುವ ಪ್ರತಿ ತಂಗಾಳಿಯಲ್ಲೂ ನಮ್ಮ ಹೆಸರು ಪ್ರತಿಧ್ವನಿಸುತ್ತದೆ.
ಆದು ಮಾವೋ, ಬೇವೋ, ಹೊಂಗೆಯೋ, ಆಲವೋ, ಅರಳಿಯೋ, ನೇರಳೆಯೋ …….ಜಾಗ ಒಂದನ್ನು ಗುರುತಿಸಿ ಒಂದಾದರು ಸಸಿ ನೆಟ್ಟು ನಿಮ್ಮ ಹೆಸರಿಟ್ಚು ಬೆಳೆಸಿ ಮರವಾಗಿ ಮಾಡುವ ತಪಸ್ಸಿಗೆ ಇದು ಸೂಕ್ತ ಕಾಲ. ಅದೇ ಆ ವೃಕ್ಷಮಾತೆಯಿಂದ ನಾವು ಕಲಿಯಬಹುದಾದ ಪಾಠ
ತಿಮ್ಮಕ್ಕ
~ವಿನಯ್ ಶಿವಮೊಗ್ಗ
