Madhu Bangarappa ಜಾತಿಜನ ಗಣತಿ ಸಮೀಕ್ಷೆ ಶೇ.90.12 ರಷ್ಟು ಆಗಿದೆ.
ಸಮೀಕ್ಷೆ ತುಂಬ ಅವಶ್ಯಕತೆ ಇದೆ. ಇದರಿಂದ ಬಜೆಟ್ ಗೆ ಅನುಕೂಲವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ದೊಡ್ಡ ದೊಡ್ಡ ಉದ್ಯಮಿಗಳು ಸಹ ಸಹಕಾರ ನೀಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಇನ್ಫೋಸಿಸ್ ನ ದಂಪತಿಗಳ ಹೆಸರನ್ನು ಹೇಳದೆ ಮನವಿ ಮಾಡಿದರು. ಎಲ್ಲಾರು ಸಹ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲೆಯಲ್ಲಿ 97 % ರಷ್ಟು ಸಮೀಕ್ಷೆ ಮುಕ್ತಾಯವಾಗಿದೆ.
Madhu Bangarappa ನಿನ್ನೆಗೆ ಶಿಕ್ಷಕರನ್ನು ಸಮೀಕ್ಷೆಗೆ ಬಳಸುವುದನ್ನು ನಿಲ್ಲಿಸಲಾಗಿದೆ.
ಕೆಲವರು ಮತವೇ ಹಾಕುವುದಿಲ್ಲ. ಅಂತಹವರು ಮಾತ್ರ ಎಲ್ಲಾ ಸೌಲಭ್ಯವನ್ನು ಕೇಳುತ್ತಾರೆ.
ಇಂತಹವರು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
