Saturday, December 6, 2025
Saturday, December 6, 2025

Klive Special Article ದಿನದ ಒಳ್ಳೆಯ ಮಾತು (ಬೆಳಕಿನ ಹಬ್ಬ ದೀಪಾವಳಿ)

Date:

Klive Special Article ದೀಪಾವಳಿ ಹಬ್ಬ ಬಹಳ ದೊಡ್ಡ ಸಂದೇಶವನ್ನೇ
ಕೊಡುತ್ತದೆ. ದೀಪಾವಳಿ ಎಂದರೆ ಕತ್ತಲನ್ನು ಸರಿಸಿ
ಬೆಳಕನ್ನು ಹರಿಸುವ ಹಬ್ಬ. ದುಷ್ಟ ಶಕ್ತಿಗಳನ್ನು ಸಂಹರಿಸಿ
ಒಳ್ಳೆಯದನ್ನು ತರುವ ಬೆಳಕಿನ ಹಬ್ಬ. ನರಕಾಸುರನೆಂಬ ಅಜ್ಞಾನವನ್ನು ಓಡಿಸಿ ನಮಗೆ
ಸುಜ್ಞಾನವೆಂಬ ಬೆಳಕನ್ನು ತಂದು ಕೊಡುವ ಹಬ್ಬ. ಹಿಂಸಾಚಾರ ಹೆಚ್ಚಾದಾಗಲೆಲ್ಲಾ ವಿಷ್ಣುವು ಒಂದೊಂದು ಅವತಾರವೆತ್ತಿ ಅದನ್ನು ಮೆಟ್ಟಿ ಹಾಕಿದ್ದಾನೆ. ರಾಕ್ಷಸರನ್ನು ಸಂಹಾರ ಮಾಡಿದ್ದಾನೆ. ಜಗತ್ತು ಕತ್ತಲಲ್ಲಿ ಇದ್ದಾಗಲೆಲ್ಲ ಬೆಳಕುನೀಡಿದ್ದಾನೆ. ಕತ್ತಲನ್ನು ಕಳೆದು ಬೆಳಕು ತರುವುದೇ ದೀಪಾವಳಿಯ ಉದ್ದೇಶ. ನರಕ ಚತುರ್ದಶಿ ಎಂದರೆ ವಿಷ್ಣುವು ನರಕಾಸುರನೆಂಬೊ ರಾಕ್ಷಸನನ್ನು ಸಂಹರಿಸಿದ ದಿನ. ತ್ರಯೋದಶಿಯಂದು ನೀರು ತುಂಬುವ ಹಬ್ಬ. ಮಾರನೆಯ ದಿನ ನರಕತುರ್ದ‌‌ಶಿ . ಇಂದು ಅಮಾವಾಸ್ಯೆ.
ಬುಧವಾರದ ದಿನ ಬಲಿ ಪಾಡ್ಯಮಿ ಹಬ್ಬ. ಈ ದೀಪಾವಳಿ ಹಬ್ಬದಲ್ಲಿ ಧನ, ಧಾನ್ಯ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ಹಾಗಾಗಿ ಈ ಭೂಮಿಯಲ್ಲಿ ಸಂತರು, ಯತಿಗಳು, ಶರಣರು ಮತ್ತು ಹರಿ ದಾಸರುಗಳು ಧರ್ಮದ ರಕ್ಷಣೆ ಮತ್ತು ಮನುಕುಲದ ಉದ್ಧಾರಕ್ಕಾಗಿ ಅವತಾರ ಮಾಡಿದ್ದಾರೆ.
Klive Special Article ಹೆಚ್ಚಿನ ಜನರಲ್ಲಿ ಸತ್ಯಪಾಲನೆ ಧರ್ಮವನ್ನು ಬಿಟ್ಟು ಅಧರ್ಮಾಚರಣೆಯಿಂದ ಈ ಕಲಿಯುಗದಲ್ಲಿ ಅರಾಜಕತೆ ಎದ್ದು ಕಾಣುತ್ತಿದೆ. ಕಾಲ ಕಾಲಕ್ಕೆ ಮಳೆಬೆಳೆ
ಯಾಗುತ್ತಿಲ್ಲ, ರೋಗರುಜಿನಾದಿಗಳು ಹೆಚ್ಚುತ್ತಲೇ ಇವೆ. ಭಗವಂತನು ಭಕ್ತಿಗೆ ಒಲಿದೇ ಒಲಿಯುತ್ತಾನೆ. ಭಗವಂತನಲ್ಲಿ ನಿಶ್ಚಲವಾದ ಭಕ್ತಿಯನ್ನು ಮಾಡಿದರೆ ರೋಗ, ರುಜಿನ, ಕಷ್ಟ ಕಾರ್ಪಣ್ಯಗಳಿಂದ ರಕ್ಷಣೆ ಪಡೆಯಬಹುದು. ಆದ್ದರಿಂದ ಈ ದೀಪಾವಳಿ ಹಬ್ಬದಂದು ನಾವೂ ಸಹ ಅಜ್ಞಾನವೆಂಬೋ ಅಂಧಕಾರವನ್ನು ಓಡಿಸಿ ಸುಜ್ಞಾನವೆಂಬೋ ಜ್ಞಾನದ ಬೆಳಕನ್ನು ಅನುಗ್ರಹಿಸುವಂತೆ ಭಗವಂತನಲ್ಲಿ ಪ್ರಾರ್ಥಿಸೋಣ. ಹಾಗೆಯೇ ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ,ಸಕಲ ಸನ್ಮಂಗಳವನ್ನು ಮತ್ತು ಜ್ಞಾನ
ಸಂಪತ್ತನ್ನು ಕರುಣಿಸುವಂತೆ ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...