Himalayan Rider ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಪ್ರದೇಶದವರೆಗೂ 2,200 ಕಿ.ಮೀ. ದೂರದ 18 ದಿನದ ಸಾಹಸ ಬೈಕ್‌ಯಾತ್ರೆಯನ್ನು ಶಿವಮೊಗ್ಗ ನಗರದ ರೋಟರಿ ರಿವರ್ ಸೈಡ್ ಶಿವಮೊಗ್ಗ ಕ್ಲಬ್ ಕಾರ್ಯದರ್ಶಿ, ಫೆಲೋಶಿಪ್ ಬೈಕ್ ರೈಡ್ ಅಧ್ಯಕ್ಷ ನಿತಿನ್ ಯಾದವ್ ಹಾಗೂ ಇನ್ನರ್‌ವ್ಹೀಲ್ ಸದಸ್ಯೆ ಅಂಬಿಕಾ ನಿತಿನ್ ಯಾದವ್ ಯಶಸ್ವಿಯಾಗಿ ಪೂರೈಸಿದ್ದಾರೆ.
2200 ಕಿ.ಮೀ. ದೀರ್ಘದ ಹಾದಿ ಲಡಾಕ್, ಕಾಶ್ಮೀರ ಹಾಗೂ ಜಗತ್ತಿನ ಅತ್ಯಂತ ಎತ್ತರದ ವಾಹನ ದಾರಿ “ಉಮ್ಲಿಂಗ್ ಲಾ ಪಾಸ್” (19,024 ಅಡಿ) ತಲುಪಿದೆ. ಈ ಮಾರ್ಗದಲ್ಲಿ ಮನಾಲಿ, ಬಾರ್ ಲಚ್ ಲಾ ಪಾಸ್, ಲೇಹ್, ನುಬ್ರಾ ವ್ಯಾಲಿ, ಪಾಂಗೊಂಗ್ ಲೇಕ್, ಹನ್ಲೆ ಅಟಲ್ ಟನಲ್, ರೋಟಂಗ್ ಪಾಸ್, ಕಾರ್ಗಿಲ್ ಯುದ್ಧ ಸ್ಮಾರಕ, ಪಹಲ್ಗಾಮ್, ಗುಲ್ಮಾರ್ಗ, ಶ್ರೀನಗರ ಎಂಬ ಹಿಮಾಲಯದ ಪ್ರೇರಣಾದಾಯಕ ನಿಲ್ದಾಣಗಳು ಸೇರಿವೆ.
Himalayan Rider ನಿತಿನ್ ಮತ್ತು ಅಂಬಿಕಾ ದಂಪತಿ ರೋಟರಿ ಕ್ಲಬ್ ಆಫ್ ಎಕೋ ಪ್ರಿಸರ್ವೇಶನ್ ಕಾಶ್ಮೀರ ಜತೆ ( ಆರ್‌ಐಡಿ 3070) ಜೊತೆ ನಡೆದ ಫ್ಲಾಗ್ ವಿನಿಮಯವು ಈ ಯಾತ್ರೆಯ ಮಹತ್ವ ಹೆಚ್ಚಿಸಿತು.
ರೋಟರಿ ರಿವರ್ ಸೈಡ್ ಶಿವಮೊಗ್ಗ ಕ್ಲಬ್ ಕಾರ್ಯದರ್ಶಿ ನಿತಿನ್ ಯಾದವ್ ಮಾತನಾಡಿ, ಹಿಮಾಲಯದ ಪ್ರಯಾಣ ವಿಶೇಷ ಅನುಭವ ನೀಡಿದ್ದು, ಪ್ರಯಾಣ ಅತ್ಯಂತ ಸಂತಸದಾಯಕವಾಗಿತ್ತು. ಈ ಸಾಹಸದಲ್ಲಿ ಪ್ರತಿಯೊಂದು ಕ್ಷಣವೂ ಬದುಕಿನ ಪಾಠವಾಗಿತ್ತು ಸಹನೆ, ಸಹಕಾರ, ಧೈರ್ಯ ಮತ್ತು ಬಾಂಧವ್ಯದ ಸಂಯೋಜನೆಯಾಗಿತ್ತು ಎಂದು ತಿಳಿಸಿದರು. ರೋಟರಿ ಕ್ಲಬ್ ಆಫ್ ಎಕೋ ಪ್ರಿಸರ್ವೇಶನ್ ಕಾಶ್ಮೀರದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
