Rotary Club Shimoga ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲವಾದರೆ ಕುಟುಂಬ ಮತ್ತು ದೇಶದ ಪ್ರಗತಿ ಸಾಧ್ಯ ಎಂದು ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆಯ ಇಸಿ ಕಮಿಟಿ ಸದಸ್ಯೆ ಎಸ್.ವಿ.ಚಂದ್ರಕಲಾ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಭಾಂಗಣದಲ್ಲಿ ಏರ್ಪಡಿಸಿದ್ದ ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಗುಡಿ ಕೈಗಾರಿಕೆ ಹಾಗೂ ಸ್ವಂತ ಉದ್ದಿಮೆಗಳಿಂದ ಹಣದ ದುಡಿಮೆ, ಹಣದಿಂದಲೇ ಮತ್ತೆ ಹಣವನ್ನು ಗಳಿಸುವಂತೆ ಧೈರ್ಯವಾಗಿ ಮುನ್ನಡೆಯಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಪ್ರಕಾಶ್ ಮೂರ್ತಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕುಟುಂಬದ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕೈಜೋಡಿಸಲು ಸಹಾಯಕ ವಾಗುತ್ತೆದೆ. ಸ್ತ್ರೀ ಶಕ್ತಿ ಸಾಲವು ಗುಡಿ ಕೈಗಾರಿಕೆ ಮಹಿಳೆಯರ ಸ್ವಾವಲಂಬನೆಗೆ ನೆರವಾಗುತ್ತೆದೆ ಎಂದು ಹೇಳಿದರು.
ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಉದ್ಯಮ ನಡೆಸಲು ಅವಶ್ಯವಿರುವ ಅರಿವು ಶಿಬಿರಗಳನ್ನು ಆಯೋಜಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
Rotary Club Shimoga ಎಸ್‌ಬಿಐ ಮುಖ್ಯ ವ್ಯವಸ್ಥಾಪಕ ಗಂಗಾಧರಪ್ಪ ಮಾತನಾಡಿ, ಬ್ಯಾಂಕ್ ಗಳ ಸಾಲ ಸೌಲಭ್ಯಗಳು ಎಲ್ಲಾ ಜನರಿಗೂ ತಲುಪುತಿಲ್ಲ. ಎಸ್‌ಬಿಐನಿಂದ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳಿದ್ದು, ಸಾಲ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಯಶಸ್ವಿ ಮಹಿಳೆಯರಾಗಬೇಕು ಎಂದು ತಿಳಿಸಿದರು.
ಗೋಪಾಳ ಮಹಿಳಾ ಸಹಕಾರ ಸಂಘದ ಸದಸ್ಯರು ಹಾಗೂ ರೋಟರಿ ಸದಸ್ಯರಾದ ರವಿ, ಎಚ್‌ಎಲ್ ಕಮ್ಯೂನಿಟಿ ಡೈರೆಕ್ಟರ್ ಮಂಜುಳಾ ರಾಜು, ಸಿದ್ದಲಿಂಗ ಮೂರ್ತಿ, ಕಾರ್ಯದರ್ಶಿ ರಶ್ಮಿ, ನಾಗರಾಜ್ ಹಾಗೂ ಹಲವು ರೋಟರಿ ಸದಸ್ಯರು ಭಾಗವಹಿಸಿದ್ದರು.
Rotary Club Shimoga ಕುಟಂಬದ ಆರ್ಥಿಕ ಬೆಳವಣಿಗೆಯಿಂದ ದೇಶದ ಪ್ರಗತಿ ಸಾಧ್ಯ :ಎಸ್.ವಿ.ಚಂದ್ರಕಲಾ
Date:
