Thursday, August 6, 2026
Thursday, August 6, 2026

Senior Citizens Day ಹಿರಿಯ ನಾಗರಿಕರು ಹಾಗೂ ವೃದ್ಧರು ದೇವರ ಪ್ರತಿರೂಪ : ಕೆ ಪಿ ಶೆಟ್ಟಿ

Date:

Senior Citizens Day ಬುದ್ಧಿಮಾಂದ್ಯರು ಹಾಗೂ ಹಿರಿಯ ನಾಗರಿಕರ ಸೇವೆ ದೇವರ ಪೂಜಿಸಿದಂತೆ ಅವರ ಅನುಭವಗಳು ಇಂದಿಗೂ ನಮಗೆ ದಾರಿ ದೀಪವಾಗಿವೆ ಎಂದು ರೋಟರಿ ಸಹಾಯಕ ಗೌರ್ನರ್ ಕೆ ಪಿ ಶೆಟ್ಟಿ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ಗುಡ್ ಲಕ್ ಆರೈಕೆ ಕೇಂದ್ರದಲ್ಲಿ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಆಶ್ರಮವಾಸಿಗಳಿಗೆ ಅನ್ನಪೂರ್ಣ ಯೋಜನೆ ಅಡಿಯಲ್ಲಿ ಒಂದು ದಿನದ ಪ್ರಸಾದ ವ್ಯವಸ್ಥೆ ಹಾಗೂ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳು ಮತ್ತು ಮೈಕ್ ಸೆಟ್ ಅನ್ನು ನೀಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಇಂದು ಹೊಂದಾಣಿಕೆ ಪ್ರೀತಿ ವಿಶ್ವಾಸ ಇದರ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಅನಾಥಾಶ್ರಮಗಳು ಹಾಗೂ ವೃದ್ಧಾಶ್ರಮಗಳು ಸಮಾಜದಲ್ಲಿ ಹೆಚ್ಚಾಗದಂತೆ ನಾವು ನೀವೆಲ್ಲರೂ ನೋಡಿಕೊಳ್ಳಬೇಕು ನಮ್ಮ ಹಿರಿಯರು ನಮ್ಮ ಕುಟುಂಬಕ್ಕೆ ಮಾಡಿದ ತ್ಯಾಗ ಸೇವೆ ಹಾಗೂ ವ್ಯವಸ್ಥೆ ಎಂದು ಮರೆಯಲು ಸಾಧ್ಯವಿಲ್ಲ. ಇಂದು ಆಧುನಿಕತೆ ಹೆಚ್ಚಾದಂತೆ ಪರಸ್ಪರರಲ್ಲಿ ಒಡನಾಟದ ಕೊರತೆ ಎದ್ದು ಕಾಣುತ್ತಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಸಹಾಯಕ ಗೌರ್ನರ್ಜಿ ವಿಜಯಕುಮಾರ್ ಮಾತನಾಡುತ್ತಾ, ತಂದೆ ತಾಯಿಗಳ ಗುರಿ ಹಿರಿಯರ ಆಶೀರ್ವಾದವೇ ನಮ್ಮ ಬೆನ್ನಿಗೆ ವಜ್ರ ಕವಚ ಅವರ ಮಾರ್ಗದರ್ಶನ ನಮ್ಮಲ್ಲಿ ಎಲ್ಲೂ ದಾರಿ ತಪ್ಪಾದ ಹಾಗೆ ನೋಡಿಕೊಳ್ಳುತ್ತದೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳ ಕೊರತೆ ಎದ್ದು ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಗುಡ್ ಲಕ್ ಆರೈಕೆ ಕೇಂದ್ರ ಎಲ್ಲಾ ದಾನಿಗಳ ಸಹಾಯದಿಂದ ಯಾವುದೇ ಸರ್ಕಾರದ ನೆರವು ಇಲ್ಲದ ಹಾಗೆ ಪ್ರತಿನಿತ್ಯ ತುಂಬಾ ವ್ಯವಸ್ಥಿತವಾಗಿ ಶಿವಮೊಗ್ಗದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಇಂದು ಜನರು ನಮ್ಮ ಹಾರೈಕೆ ಕೇಂದ್ರದ ಮೇಲೆ ಇಟ್ಟಂತಹ ಗೌರವ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿ ಎಂದು ನುಡಿದರು. Senior Citizens Day ಇದೇ ಸಂದರ್ಭದಲ್ಲಿ ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ ಯು. ರವೀಂದ್ರನಾಥ್ ಐತಾಳ್ ಅವರು ಮಾತನಾಡುತ್ತಾ ನಮ್ಮ ಆರೈಕೆ ಕೇಂದ್ರದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ನಮ್ಮ ಹುಟ್ಟುಹಬ್ಬ ವಿವಾಹ ವಾರ್ಷಿಕೋತ್ಸವ ಹಾಗೂ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಚಿಕ್ಕದಾಗಿ ಮಾಡಲು ಆದ್ದರಿಂದ ನಮ್ಮ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ಸಹಾಯ ಹಸ್ತ ನೀಡಬೇಕೆಂದು ಕರೆ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....

DC Shivamogga ಮುಂದಿನ 61 ವಾರಗಳಿಗೆ ಜಾನುವಾರುಗಳ ಅಗತ್ಯ ಮೇವಿಗೆ ಕೊರತೆಯಿಲ್ಲ : ಪ್ರಭುಲಿಂಗ ಕವಳಿಕಟ್ಟಿ

DC Shivamogga ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಗಸ್ಟ್...