ಶ್ರೀಶ್ರೀಅಕ್ಷೋಭ್ಯರಾಮಪ್ರಿಯತೀರ್ಥ ಶ್ರೀಪಾದಂಗಳವರು,ಬಾಳಗಾರು ಕ್ಷೇತ್ರ.
(ಶಿವಮೊಗ್ಗ ಭಕ್ತಮಂಡಳಿಯಿಂದ ನುಡಿ ನಮನಗಳು)
ಪವಿತ್ರ ತುಂಗೆಯ ದಡದಲ್ಲಿರುವುದು ಬಾಳಗಾರು. ಇಲ್ಲಿರುವುದು ಶ್ರೀಬಾಳಗಾರು ಅಕ್ಷೋಭ್ಯತೀರ್ಥ ಮಠ. ಇಲ್ಲಿ ನೆಲೆಯೂರಿ ನಿಂತಿರುವರು ಶ್ರೀ ನರಸಿಂಹ ದೇವರು.
ನರಸಿಂಹ ದೇವರ ಅಂತರಂಗ ಭಕ್ತರಾದ ರಾಯರೂ ಇಲ್ಲಿನೆಲೆಸಿರುವರು. ಶ್ರೀ ನರಸಿಂಹ ದೇವರ ಅರ್ಚನೆಗೆ ಸೇವಾರತರಾದವರು
ಶ್ರೀಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥರು. ಶ್ರೀರಘುಭೂಷಣ ತೀರ್ಥರ ಕರ ಕಮಲ ಸಂಜಾತರು.
ನಗುಮುಖದ ಸ್ವಾಮಿಗಳಿವರು.
ಶ್ರೇಷ್ಠ “ಮಾನಕರಿ”ಮನೆತನದಲ್ಲಿ ಹುಟ್ಟಿದವರು. ಮಾನಕರಿ ಹುಲಿಕುಂಠಾಚಾರ್ಯ ಮತ್ತು ಸಾವಿತ್ರಮ್ಮ ಇವರಪೂರ್ವಾಶ್ರಮದ ತಂದೆತಾಯಿಯರು . ತಂದೆತಾಯಿಯರು ಮಾನಕರಿ ಶ್ರೀನಿವಾಸಾಚಾರ್ಯರು ಎಂದು ಕರೆದರು.
ಪದವಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದು ಚಿನ್ನದ ಪದಕ ಗಳಿಸಿದವರು.
ಮಾತೃಭಾಷೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ತಮ್ಮ ವಿದ್ಯಾ ಪ್ರೌಢಿಮೆಯಿಂದ ಹಲವಾರು ಪ್ರತಿಷ್ಠಿತ ಪದಕ ಗೌರವಗಳನ್ನು ಪಡೆದವರು. ಹಲವಾರು ಧಾರ್ಮಿಕ ಪುಸ್ತಕಗಳನ್ನು ಬರೆದಿರುವರು. ಹಂಪಿ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯ ಗೌರವ ಪಡೆದವರು.
ಬಾಲ್ಯದಿಂದಲೂ ಧಾರ್ಮಿಕ ವಿಷಯದಲ್ಲಿ ಆಸಕ್ತಿ ಹೊಂದಿದವರು. ಶ್ರೀರಾಯರ ಪರಮ ಭಕ್ತರು.ಬಾಳಗಾರು ಮಠದ ಪೀಠಕ್ಕೆಶ್ರೀಮೂಲರಾಮನ ಸೂಚನೆ ಮತ್ತು ರಾಯರ ಅನುಗ್ರಹದಿಂದಆಯ್ಕೆಯಾದವರು.
ತಮ್ಮೆಲ್ಲ ಸಾಂಸಾರಿಕ ಬಂಧನವನ್ನು ಕಳಚಿ ಶ್ರೀರಘುಭೂಷಣತೀರ್ಥರಿಂದ ಪ್ರಣವ ಮಂತ್ರ ಉಪದೇಶ ಪಡೆದು ಶ್ರೀಮಠದ ಸರ್ವಜ್ಞ ಪೀಠವನ್ನಲಂಕರಿಸಿದರು.
ಶ್ರೀಗಳವರು ಜ್ಞಾನ ದಾಸೋಹಕ್ಕೆ ಆದ್ಯತೆ ಕೊಟ್ಟಿರುವರು. ಯುವ ಪಡೆಯ ಉನ್ನತಿಗೆ ಗುರಿ ಹೊಂದಿರುವರು.
ಮಠಕ್ಕೆ ಹೋದ ಭಕ್ತರಿಗೆ ಹೊಟ್ಟೆತುಂಬ ಅನ್ನ ಪ್ರಸಾದ ನೀಡುವರು.
ತಲೆಯ ತುಂಬಾ ಜ್ಞಾನ ಪ್ರಕಾಶ ತುಂಬಿಸುವರು. ನಮ್ಮ ಶಿವಮೊಗ್ಗೆಯ ಭಕ್ತರು ಭಾಗ್ಯವಂತರು. ಎಲ್ಲರನ್ನೂ ಹರಸಲು ಬಂದಿರುವರು ಶ್ರೀಬಾಳಗಾರು ಶ್ರೀಗಳವರು. ಇಂತಹ ಶ್ರೀಗಳನ್ನು ಪಡೆದ ನಾವೇ ಧನ್ಯರು ಧನ್ಯರು. ನಮ್ಮ ಶಿವಮೊಗ್ಗೆಯ ಭಕ್ತರು ಶ್ರೀಗಳವರ ಚರಣಾರ
ವಿಂದಗಳಲ್ಲಿ ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುತ್ತಿರುವೆವು.
