Saturday, December 6, 2025
Saturday, December 6, 2025

Klive Special Article ನವರಾತ್ರಿ ಎಂಟನೇ ದಿನ, ದೇವಿಯ ಮಹಾಗೌರಿ ರೂಪದ ಆರಾಧನೆ, ” ಮಹಾಗೌರಿ ಶುಭಂ ದದ್ಯಾತ್”

Date:

ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

ನವರಾತ್ರಿ(ಎಂಟನೆಯದಿನ)


Klive Special Article ಶ್ರೀಮಹಾಗೌರಿ ಮಾತೆಯ ಆರಾಧನೆಯ ದಿನ

“ಶ್ವೇತೆ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ/
ಮಹಾಗೌರೀ ಶುಭಂ ದದ್ಯಾತ್ ಮಹಾದೇವ
ಪ್ರಮೋದದಾ//


ಇಂದು ನವರಾತ್ರಿಯ ಎಂಟನೆಯ ದಿವಸ.
ಇಂದು ದೇವಿಯ ಎಂಟನೆಯ ರೂಪವಾದ ಮಹಾ
ಗೌರಿಯ ಆರಾಧನೆಯ ದಿನ.
ಸರ್ವ ಸನ್ಮಂಗಳ ಕಾರಿಣಿಯಾದ ದೇವಿಯ ರೂಪ
ಮಹಾಗೌರಿಯ ಅವತಾರ ರೂಪ.
ಶ್ವೇತ ವರ್ಣದಿಂದ ಕಂಗೊಳಿಸುವ ಮಾತೆಯ ದೇಹವೆಲ್ಲಾ ಪ್ರಭೆಯಿಂದ ಹೊಳೆಯುವುದು. ನಂದಿ ವಾಹನ ರೂಢಳಾದ ದೇವಿಯು ಶಾಂತಿ ಮತ್ತು ಸಂತೋಷದ ಪ್ರತೀಕ.
ನಾಲ್ಕು ಭುಜಗಳನ್ನು ಹೊಂದಿರುವ ಮಾತೆ,ಅಭಯ ಹಸ್ತದಿಂದ ಭಕ್ತರನ್ನು ಹರಸುತ್ತಿದ್ದಾಳೆ.ಒಂದು ಕೈಯಲ್ಲಿ
ದುಷ್ಟಶಕ್ತಿಗಳನ್ನು ನಿಗ್ರಹಿಸಲು ತ್ರಿಶೂಲವನ್ನು ಹಿಡಿದಿರು
ತ್ತಾಳೆ.ಪಾರ್ವತೀ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು. ಶಿವನನ್ನು ಪಡೆಯುವುದು ಅವಳ ಗುರಿಯಾಗಿರುತ್ತದೆ. ನಾರದ ಮಹರ್ಷಿಗಳ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಮಾಡುವರು. ಸುದೀರ್ಘ
ತಪಸ್ಸನ್ನು ಮಾಡುತ್ತಾ ನೀರು ಆಹಾರವನ್ನೂ ತ್ಯಜಿಸುತ್ತಾಳೆ.
ಬಿಸಿಲಿನಿಂದ ಆಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುವುದು ಮತ್ತು ದೀರ್ಘಕಾಲ ತಪಸ್ಸನ್ನು ಮಾಡುತ್ತಾ ಕುಳಿತ ಕಾರಣ ಆಕೆಯ ಮುಂಬೈಗೆ ಧೂಳು ಮೆತ್ತಿಕೊಳ್ಳುತ್ತದೆ.
Klive Special Article ಇವಳ ತಪಸ್ಸಿಗೆ ಸಂತುಷ್ಟನಾದ ಶಿವನು ಪಾರ್ವತಿಯ ಮೈಮೇಲಿನ ಕಪ್ಪುಬಣ್ಣ ಮತ್ತು ಇಷ್ಟು ದಿನಗಳ ಕಷ್ಟಗಳ ಪರಿಹಾರಕ್ಕಾಗಿ ಗಂಗಾಜಲವನ್ನು ಮೈಮೇಲೆ ಹರಿಸಿದ್ದರಿಂದ ಮೈಯೆಲ್ಲಾ ಕಾಂತಿಯಿಂದ ಹೊಳೆಯತೊಡಗಿತು.
ಆಕೆಯು ಮಹಾಗೌರಿಯಾಗಿ ಹೊಸ ಜನ್ಮ ಎತ್ತಿದಳು.ಶಿವನು ಆಕೆಯ ಭಕ್ತಿಗೆ ಮೆಚ್ಚಿ ಅವಳ ಇಷ್ಟದ ಪ್ರಕಾರ ಆಕೆಯನ್ನು ವರಿಸಿದ.
ಭಕ್ತರಿಗೆ ಶಾಂತಿ ಮತ್ತು ಸಂತೋಷವನ್ನು ಕೊಟ್ಟು ಅನುಗ್ರಹಿಸುವ ಮಹಾಗೌರಿಮಾತೆಗೆ ಭಕ್ತಿಯ ನಮನಗಳನ್ನು ಅರ್ಪಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...