Rotary Club Shimoga ದೇಶದಲ್ಲಿ ಸರ್ವರಿಗೂ ಶಿಕ್ಷಣದ ಜೊತೆಗೆ ಮಾನವಿಯತೆ ಬೆರೆತಾಗ ಮಾತ್ರ ದೇಶದ ಉನ್ನತಿಗೆ ಕಾರಣವಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪ್ಪ ಗುಂಡಪಳ್ಳಿಯವರು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿಯ ವಾರದ ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ಪ್ರಾಪ್ತವಯಸ್ಸಿನ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣದ ನಂತರ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು, ಸಾದ್ಯವಾಗದಿದ್ದಾಗ ಎದೆಗುಂದದೆ ಇತರೆ ತಮ್ಮ ಆಸಕ್ತಿಯ ಉತ್ತಮ ಆಯ್ಕೆಗಳನ್ನು ಆರಿಸಿಕೊಳ್ಳಬೇಕು. ಅದಕ್ಕೆ ಎಲ್ಲಾ ಪಾಲಕರು ಅವರ ಇಷ್ಟವಾದದ್ದನ್ನು ಓದಲು ಉತ್ತೇಜನ ನೀಡಬೇಕು. ಈಗ ವಿದ್ಯಾಭ್ಯಾಸಕ್ಕಿಂತ ಕೌಶಲ್ಯಭರಿತ ಜಾಣ್ಮೆಗೆ ಅವಕಾಶ ಜಾಸ್ತಿ.
ಪಾಲಕರು ಮಕ್ಕಳಿಗೆ ಉತ್ತಮ ಜೀವನ ಶೈಲಿ ಕಲಿಸಿ. ಬಹಳಷ್ಟು ಮಕ್ಕಳು ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅವರ ಮೇಲೆ ನಿಗಾಇಡಿ, ವಿಶ್ವದಲ್ಲೆ ಉತ್ತಮ ಸಂಸ್ಕೃತಿ ನಮ್ಮದು, ನಮ್ಮ ನಡೆ ನುಡಿಗಳನ್ನು ಮಕ್ಕಳಿಗೆ ಕಲಿಸಿ. ಮಾನವೀಯತೆಯನ್ನು ಯಾರು ಮರೆಯಬಾರದು, ಅಪಘಾತ, ತುರ್ತು ಸಂದರ್ಭದಲ್ಲಿ ಸ್ವಂದಿಸಿ, ನಮ್ಮಲ್ಲೆ ಕಾಲೆಳೆಯುವ ಸಂಸ್ಕೃತಿಯನ್ನು ಬಿಡಿ.
ಮುಂದೆ ಕೃತಕಬುದ್ದಿಮತೆ ಬರಲಿದೆ. ಸಾಮಾನ್ಯ ಉದ್ಯೋಗ ಕಾಣೆಯಾಗಲಿದೆ. ಇಂದು ಎಲ್ಲದೂ ಸಾದ್ಯ, ಪ್ರಯತ್ನ ಮುಖ್ಯ, ಸಮಯಕ್ಕೆ ಮಹತ್ವ ನೀಡಿ, ನಂಬಿಕೆ ಉಳಿಸಿ ಬೆಳೆಸಿ. ಪಾಲಕರು, ಶಿಕ್ಷಕರು ಮಕ್ಕಳನ್ನು ತಿದ್ದಿ ತೀಡಿ, ಪ್ರೀತಿಯಿಂದ ಗೆಲ್ಲಬೇಕು ಎಂದರು.
ಬಿ.ಎಸ್.ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು, ಲಕ್ಷ್ಮೀನಾರಾಯಣ್ ಸ್ವಾಗತಿಸಿ, ಕಾರ್ಯದರ್ಶಿ ರೇವಣಸಿದ್ದಪ್ಪ ವಂದಿಸಿದರು. ಭಾರದ್ವಾಜ್, ನವೀನ್, ಜವಳಿ, ಎನ್.ವಿ.ಭಟ್ ಇತರ ಸದಸ್ಯರು ಇದ್ದರು
Rotary Club Shimoga ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಇಷ್ಟವಾದದ್ದನ್ನ ಓದಲು ಉತ್ತೇಜಿಸಬೇಕು – ಚಂದ್ರಪ್ಪ ಗುಂಡಪಲ್ಲಿ
Date:
