” ಕೂಷ್ಮಾಂಡಾ ಶುಭದಾಸ್ತುಮೆ”
ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.
ದಿನದ ಒಳ್ಳೆಯಮಾತು(ನವರಾತ್ರಿಯ 4ನೇ ದಿನ)
ನವರಾತ್ರಿ(ನಾಲ್ಕನೆಯ ದಿನ)
Klive Special Article ” ಸುರಾ ಸಂಪೂರ್ಣ ಕಲಶಂ
ರುಧಿರಾಪ್ಲುತಮೇವಚ/
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ
ಶುಭದಾಸ್ತುಮೆ//
ನವರಾತ್ರಿಯ ನಾಲ್ಕನೆಯದಿನವಾದ ಇಂದು
ದೇವಿಯ ರೂಪವಾದ ಕೂಷ್ಮಾಂಡದೇವಿಯ
ಆರಾಧನೆಯ ದಿನ.
ಜಗತ್ತಿನ ಅಣುಅಣುವಿನಲ್ಲಿ ಚೈತನ್ಯ ತುಂಬಿದ
ದೇವಿ ಈಕೆ.ದುರ್ಗಾಮಾತೆಯಂತೆ ಹಲವು ಭುಜ
ಗಳನ್ನು ಹೊಂದಿದ ಈಕೆಯೂ ಕೂಡ ತನ್ನ
ಕೈಗಳಲ್ಲಿ ಆಯುಧ ಹಾಗೂ ಪುಷ್ಪ ಎರಡನ್ನು
ಹಿಡಿದುಅಪಾರತೇಜಸ್ಸಿನೊಂದಿಗೆ,ಕಾಂತಿಯೊಂದಿಗೆ ಬೆಳಗುತ್ತಿರುತ್ತಾಳೆ.ಈಕೆಯನ್ನು ಸೃಷ್ಟಿಕರ್ತೆ ಎಂದೂ ಕರೆಯುತ್ತಾರೆ. Klive Special Article ನವದುರ್ಗೆಯರೂಪವಾದಕೂಷ್ಮಾಂಡದೇವಿಜಗತ್ತನ್ನುಪೊರೆಯುತ್ತಿದ್ದಾಳೆಎಂದುಭಾವಿಸಲಾಗಿದೆ.ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ.ಕೂಷ್ಮಾಂಡದೇವಿಯು ಕ್ಷಮ ವಾತ್ಸಲ್ಯಾದಿ ಕಲ್ಯಾಣಗುಣ ಪೂರ್ಣಳು.ಈ ದೇವಿ ಸದಾ ಮಂದಸ್ಮಿತೆ.ಈಕೆಯ ಆರಾಧನೆಯಿಂದ ಮನದ ಕ್ಲೇಷಕಳೆದುಜ್ಞಾನದಬೆಳಕುಮೂಡುತ್ತದೆ.ಕೂಷ್ಮಾಂಡವೆಂದರೆಬೂದುಕುಂಬಳಕಾಯಿಎಂದರ್ಥ.ಆಯುರ್ವೇದ ಶಾಸ್ತ್ರದ ರೀತ್ಯ ಬೂದುಕುಂಬಳಕಾಯಿಯು ಜ್ಞಾನವರ್ಧಕ,ತೇಜೋವರ್ಧಕ,ಸಕಲತಾಪವನ್ನು ಪರಿಹರಿಸಿ ದೇಹಕ್ಕೆ ತಂಪೆರೆವ ಶಾಖಾಹಾರ.
ಇಂತಹ ಶಕ್ತಿ ಸ್ವರೂಪಳಾದ ಕೂಷ್ಮಾಂಡದೇವಿಯನ್ನು ಭಕ್ತಿಯಿಂದ ಪೂಜಿಸಿ ಅನುಗ್ರಹ ಪಡೆಯೋಣ
