C.P. Radhakrishnan ಈ ಬಾರಿಯ ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆ
ಕುತೂಹಲ ಕೆರಳಿಸಿತ್ತು.
ಏಕೆಂದರೆ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಫಲಿತಾಂಶ ಹೇಗಾದರೂ ಬರಬಹುದು.
ಆದರೆ ಎನ್ ಡಿ ಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ವಿಪಕ್ಷಗಳ ಮತಗಳನ್ನೂ ಸೆಳೆದಿದ್ದಾರೆಂದರೆ ಶ್ಲಾಘನೀಯವೆ.
452 ಸಂಸದರ ಮತಗಳು ರಾಧಾಕೃಷ್ಣನ್ ಪರ ಬಂದಿವೆ. ವಪಕ್ಷದ ಅಭ್ಯರ್ಥಿ ನ್ಯಾ.ಬಿ.ಸುದರ್ಶನ್ ರೆಡ್ಡಿ ಅವರ ಪರ 300/ಮತಗಳು ಚಲಾಯಿಸಲ್ಪಟ್ಟಿವೆ.
ಯಾವುದೇ ಅಭ್ಯರ್ಥಿ ಗೆಲುವಿಗೆ 377 ಮತಗಳನ್ನ ಕನಿಷ್ಡ ಪಡೆಯಬೇಕು. ಆದರೆ 152 ಮತಗಳ ಅಂತರದಲ್ಲಿ ಎನ್ ಡಿ.ಎ ಅಭ್ಯರ್ಥಿ ಜಯಶೀಲರಾಗಿದ್ದಾರೆ .
ಶ್ರೀ ಸಿ.ಪಿ.ರಾಧಾಕೃಷ್ಣನ್.
C.P. Radhakrishnan ತಮಿಳುನಾಡಿನ ತಿರುಪ್ಪೂರಲ್ಲಿ ಜನನ.
( 1957, ಅಕ್ಡೋಬರ್ 20)
ತಾರುಣ್ಯದಲ್ಲಿಯೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು.ಜನಸಂಘದ ಮೂಲಕ ಕಾರ್ಯಕರ್ತರಾಗಿ ಸೇವೆ ಆರಂಭಿಸಿದರು.
ಬಿಬಿಎ ಪದವೀಧರರು.
ತಮಿಳುನಾಡು ಬಿಜೆಪಿ ಯ ಕಾರ್ಯದರ್ಶಿ.
ಕೊಯಮತ್ತೂರು ಲೋಕಸಭಾಕ್ಷೇತ್ರದಿಂದ ಎರಡು ಸಲ ಸಂಸತ್ತಿಗೆ ಆಯ್ಕೆ.
2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕ.
ನಂತರ ಮಹಾರಾಷ್ಟ್ರದ ರಾಜ್ಯಪಾಲಿರಾಗಿ ಸೇವೆ ಸಂದಿದೆ.
