Saturday, May 23, 2026
Saturday, May 23, 2026

Rotary East English Medium School ಶಿಕ್ಷಕ ವೃತ್ತಿಯು ಪ್ರತ್ಯಕ್ಷ ದೇವರಿಗೆ ಸಮಾನವಾಗಿದೆ- ಕೆ.ಬಿ.ರವಿಶಂಕರ್

Date:

Rotary East English Medium School ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಶಿಕ್ಷಕರ ಸಮೂಹದೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿಯಾದ ರೊ. ಕೆ ಬಿ ರವಿಶಂಕರ್ ಇವರು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಶಿಕ್ಷಕರ ವೃತ್ತಿಯು ಪ್ರತ್ಯಕ್ಷ ದೇವರಿಗೆ ಸಮಾನದುದೆಂದು ಶಿಕ್ಷಕರ ಅವಿರತ ಶ್ರಮದ ಪರವಾಗಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಹುದ್ದೆಗೆ ನೇಮಕಗೊಳ್ಳುತ್ತಿದ್ದು ಆಮೂಲಕ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆಂದು, ಈ ಕಾರಣಕ್ಕೆ ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಬಹಳದೊಡ್ಡದಾಗಿರುತ್ತದೆಂದು ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ರೋಟರಿ ಪೂರ್ವದ ಅಧ್ಯಕ್ಷರಾದ ರೊ. ನಿಪ್ಚೂನ್ ಕಿಶೋರ್‌ಕುಮಾರ್ ರವರು ಮಾತನಾಡುತ್ತಾ ಇಂದಿನ ದಿನಗಳಲ್ಲಿ ಸೇವಾಮನೋಬಾವದ ಉತ್ತಮ ಶಿಕ್ಷಕರನ್ನು ಕಾಣುವುದೇ ಅಪರೂಪವೆಂದು ಆದರೆ ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರೆಲ್ಲರೂ ಸೇವಾಮನೋಬಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು, ಈ ಕಾರಣಕ್ಕಾಗಿ ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ಬಡವರು ಮತ್ತು ಮದ್ಯಮ ವರ್ಗದವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆಂದು, ಬಾಲ್ಯದಲ್ಲಿಯೇ ವಿದ್ಯಾರ್ಥಿಗಳಿಗೆ ಸೇವಾಮನೊಬಾವನ್ನು ಬೆಳೆಸಿಕೊಳ್ಳುತ್ತಿದ್ದಾರೆಂದು ಈ ಕಾರಣಕ್ಕೆ ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರೆಲ್ಲರು ಅಭಿನಂದನಾರ್ಹರೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಪೂರ್ವದ ಕಾರ್ಯದರ್ಶಿ ರೊ. ಧನಂಜಯರವರು ಮಾತನಾಡುತ್ತಾ ಈ ಒಂದು ಸಂದರ್ಭವು ತಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತದೆಂದು ಬಾಲ್ಯದಲ್ಲಿ ತಮಗೆ ವಿದ್ಯಾರ್ಜನೆ ಮಾಡಿದ ಗುರುಗಳಿಗೆ ವಂದಿಸುವಂತಹ ಸುವರ್ಣವಕಾಶ ಇದಾಗಿರುತ್ತದೆಂದು ಪ್ರತಿಯೊಬ್ಬ ವಿದ್ಯಾರ್ಥಿಯು ತಾವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರು.

ವಿದ್ಯಾರ್ಜನೆ ಮಾಡಿದ ಗುರುಗಳನ್ನು ಮರೆಯಬಾರದೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟನ ನಿಕಟ ಪೂರ್ವ ಮ್ಯಾನೇಜಿಂಗ್ ಟ್ರಸ್ಟಿಯಾದ ರೊ. ಚಂದ್ರಶೇಖರಯ್ಯ ಎಮ್ ಇವರು ಮಾತನಾಡುತ್ತ ತಮ್ಮ ಜೀವನದುದ್ದಕ್ಕೂ ವಿದ್ಯಾರ್ಥಿಗಳಿಗೆ ತಮ್ಮ ಪಾಂಡಿತ್ಯವನ್ನು ದಾರೆಯೆರದ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡುವಂತಹ ಕಾರ್ಯಕ್ರಮ ಇದಾಗಿದೆಯೆಂದು ರಾಷ್ಟಕಂಡ ಅತ್ಯುತ್ತಮ ಶಿಕ್ಷಕ ಮತ್ತು ತತ್ವಜ್ಞಾನಿಯಾದ ಡಾ|| ಸರ್ವಪಲ್ಲಿ ರಾಧಕೃಷ್ಣರವರ ತತ್ವಾದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

Rotary East English Medium School ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟಿನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್. ಸಿ. ರವರು ಮಾತನಾಡುತ್ತಾ ಶಿಕ್ಷಕ ವೃತ್ತಿಗೆ ಬೆಲೆಕಟ್ಟಲಾಗದಂತಹ ಮೌಲ್ಯವಿದೆಯೆಂದು ಮೌಲ್ಯಾದಾರಿತ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದೆಂದು ಅಭಿಪ್ರಾಯ ಪಟ್ಟು ಮೌಲ್ಯಾದಾರಿತ ಬದುಕನ್ನು ಕಟ್ಟಿಕೊಳ್ಳುವ ದೆಸೆಯಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟನ ಉಪಾದ್ಯಕ್ಷರಾದ ನಾಗವೇಣಿ ಎಸ್. ಆರ್. ಖಜಾಂಚಿ ರೊ. ಮಂಜುನಾಥ ಎನ್ ಬಿ ಟ್ರಸ್ಟಿಯಾದ ಅನಿತಾ ರವಿಶಂಕರ್ ಮತ್ತು ಪ್ರಿನ್ಸಿಪಾಲ್ ಸೂರ್ಯನಾರಾಯಣ್ ಇನ್‌ಟ್ರಕ್ಟ್ ಕ್ಲಬ್‌ನ ಸಂಯೋಜಕರಾದ ಶ್ರೀಮತಿ ರೂಪ ಎಸ್ ಸಿ ರವರು ಉಪಸ್ಥಿತರಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಕುಮಾರಿ ಗೌತಮಿಯವರು ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga jyanendra ಉಪಲೋಕಾಯುಕ್ತರ ಅನಿಸಿಕೆ ಸರಿ. ರಾಜ್ಯದಲ್ಲಿ ಭ್ರಷ್ಠಾಚಾರದ ತಾಂಡವ- ಆರಗ ಜ್ಞಾನೇಂದ್ರ

Araga jyanendra ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಉಪ ಲೋಕಾಯುಕ್ತ ಬಿ...

Backward Classes Welfare Department ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2026-27...

Nidhi Apke Nikat ಮೇ 27 .ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಿಧಿ ಆಪ್ ಕೆ ನಿಕಟ್ 2.0 ಕಾರ್ಯಕ್ರಮ

Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ...

Shivamogga Police ಅನಾಮಧೇಯ ಶವದ ವಾರಸುದಾರರ ಪತ್ತೆಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

Shivamogga Police ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಬಸ್...