Monday, February 2, 2026
Monday, February 2, 2026

Teacher’s Day ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕ ವೃಂದ

Date:

Teacher’s Day ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜಿಲ್ಲೆಯಿಂದ 40 ಶಿಕ್ಷಕ/ಶಿಕ್ಷಕಿಯರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ -07, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07, ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07 ಹಾಗೂ ವಿಶೇಷ ಶಿಕ್ಷಕ ಪ್ರಶಿಸ್ತಿಗೆ -19 ಶಿಕ್ಷಕರುಗಳು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹ ಶಿಕ್ಷಕರುಗಳಾದ ಶೀಲಾ ಪಿ.,- ಸಾಗರ, ಮಂಜಪ್ಪ ಡಿ.,-ಹೊಸನಗರ, ಜ್ಯೋತಿ ಹೆಚ್.ಎಂ., -ತೀರ್ಥಹಳ್ಳಿ, ಶಾರದಾ ಎಸ್.,-ಭದ್ರಾವತಿ, ಗಣೇಶ್ ನಾಯ್ಕ ಎನ್., -ಸೊರಬ, ಸುರೇಶ್ ಕೆ.,-ಶಿಕಾರಿಪುರ, ತಸ್ನಿಂ ಕೌಸರ್-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಡ್ತಿ ಮುಖ್ಯ ಶಿಕ್ಷಕರಗಳಾಗಿ ಸುಮ ಹೆಚ್.ಎ,-ತೀರ್ಥಹಳ್ಳಿ, ರಾಧಾಬಾಯಿ-ಶಿವಮೊಗ್ಗ, ಕೃಷ್ಣಪ್ಪ ಹೆಚ್.ವಿ.-ಸೊರಬ ಹಾಗೂ ಸಹ ಶಿಕ್ಷಕರುಗಳಾದ ಬೂದ್ಯಪ್ಪ ಡಿ.,-ಸಾಗರ, ಶಿಲ್ಪ ಜೆ., -ಹೊಸನಗರ, ಭಾರತಿ ಎಸ್.,-ಭದ್ರಾವತಿ, ಮಹೇಶಪ್ಪ ಬಂಡಿಬೈರನಹಳ್ಳಿ -ಶಿಕಾರಿಪುರ ಇವರುಗಳು ಆಯ್ಕೆಯಾಗಿದ್ದಾರೆ.
ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯ ಶಿಕ್ಷಕರುಗಳಾದ ಗಜೇಂದ್ರ ಎಸ್.ಹೆಚ್., -ಸಾಗರ, ರಾಮಚಂದ್ರ ಎಸ್.ಜೆ. -ಸೊರಬ ಹಾಗೂ ಸಹ ಶಿಕ್ಷಕರುಗಳಾದ ಚಂದ್ರು ಸಿ.,-ಹೊಸನಗರ, ಕೃಷ್ಣಪ್ಪ ಡಿ.,-ತೀರ್ಥಹಳ್ಳಿ, ಛಾಯಾ ಶ್ಯಾಮಸುಂದರ- ಭದ್ರಾವತಿ, ನಾಗರಾಜಪ್ಪ ಪಿ.-ಶಿಕಾರಿಪುರ, ಹಸನ್ ಸಾಬ್ ಕೆ.ಹೆಚ್.-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.
Teacher’s Day ವಿಶೇಷ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಸರ್ಕಾರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರುಗಳಾದ ಶರಣ್ಣಪ್ಪ ಎ,-ಸಾಗರ, ಆಶಾ ಬಿ.ಕೆ,-ತೀರ್ಥಹಳ್ಳಿ, ಮುಖ್ಯ ಶಿಕ್ಷಕರಾದ ಭಾರತಿ ಎ.,-ಹೊಸನಗರ, ಸಹ ಶಿಕ್ಷಕರುಗಳಾದ ಶಬಿನಾ-ಭದ್ರಾವತಿ, ದುರುಗಪ್ಪ ಡಿ.ಬಿ.-ಸೊರಬ, ಸಂಜೀವ ನಾಯ್ಕ-ಶಿಕಾರಿಪುರ, ಪುಟ್ಟಸ್ವಾಮಿ ಕೆ.ಕೆ.-ಹೊನಸಗರ, ತಿಪ್ಪೆಸ್ವಾಮಿ ಆರ್.-ಭದ್ರಾವತಿ, ರವಿ ಎಸ್.ಟಿ.-ಶಿವಮೊಗ್ಗ, ಜಯ ಎಂ. ಶೇಟ್-ಶಿವಮೊಗ್ಗ, ಸಂಜಿದಾ ಬಾನು-ಶಿವಮಸೊಗ್ಗ, ಶಿಲ್ಪ ಜಿ.ಎಸ್.-ಶಿಕಾರಿಪುರ, ಆಶಾರಾಣಿ ಎ. ಆರ್.-ಶಿಕಾರಿಪುರ, ಅಪರ್ಣ ವಿ. ಎಂ-ಸೊರಬ., ಕಲಾವತಿ ಎ.-ಸೊರಬ, ಅಂಥೋನಿ ಫರ್ನಾಂಡಿಸ್-ಸಾಗರ, ಗೋಪಿ ವಿ.-ತೀರ್ಥಹಳ್ಳಿ, ಚಿತ್ರಕಲಾ ಶಿಕ್ಷಕರಾದ ಅರವಿಂದ ಟಿ.ಎನ್.-ತೀರ್ಥಹಳ್ಳಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸುಶೀಲಮ್ಮ ಎಸ್.-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...