Linganamakki Dam ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು , ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಹಾಗೂ ಇತರೆ ಮುಖಂಡರು ಭಾನುವಾರ ಲಿಂಗನಮಕ್ಕಿ ಜಲಾಶಯದ ಗೇಟ್ ಗಳನ್ನು
ತೆರೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗೇಟ್ ಗಳನ್ನು ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು ಮಾತನಾಡಿ, 5 ಗೇಟ್ ಗಳ ಮೂಲಕ ಸುಮಾರು 3.5 ಕ್ಯೂಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಗಿದೆ.
ಜಲಾಶಯದ ನೀರನ್ನು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಸಾಗರ, ಸೊರಬ ತಾಲ್ಲೂಕುಗಳ ಗ್ರಾಮಗಳು, ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಬಳಕೆ ಮಾಡಲಾಗುವುದು. ಹಾಗೂ ಶಿರಸಿ ,ಸಿದ್ದಾಪುರಗಳಿಗೂ ನೀರನ್ನು ಕೇಳಲಾಗುತ್ತಿದೆ.
ಲಿಂಗನಮಕ್ಕಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್ಟ್ ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕವಾಗಿದ್ದು ವಿದ್ಯುತ್ ಅಭಾವವನ್ನು ನೀಗಿಸಿದೆ ಎಂದರು.
Linganamakki Dam ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಮಾತನಾಡಿ ಜಲಾಶಯ ಆರಂಭ ೧೯೬೪ ಯಿಂದ ಇಲ್ಲಿಯವರೆಗೆ ೨೧ ಬಾರಿ ನೀರನ್ನು ನದಿಗೆ ಬಿಡಲಾಗಿದೆ. ಈ ನೀರನ್ನು ಜಿಲ್ಲೆಯ ಕುಡಿಯುವ ನೀರಿಗೆ ಹೊರತಾಗಿ ನೀರಾವರಿ ಸೇರಿದಂತೆ ಬೇರೆ ಯಾವ ಯೋಜನೆಗೂ ಬಳಸಿಕೊಳ್ಳಲಾಗುವುದಿಲ್ಲ ಎಂದರು.
5 ಗೇಟ್ ಗಳನ್ನು ತೆರೆದು 3500 ಕ್ಯುಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಯಿತು.
