Independence Day ವಿನೋಬನಗರ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯಕ್ತ “ದೇಶ ಮೊದಲು” ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ ಯಶಸ್ವಿಯಾಯಿತು.
ನಾಡಿನ ರಾಜರು ಮತ್ತು ವೀರ ಯೋಧರು ಕುರಿತು 15ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸುಂದರವಾಗಿ ಪ್ರಸ್ತುತಪಡಿಸಿದರು. ಶ್ರೀರಂಜಿನಿ ಅವರ ನೇತೃತ್ವದಲ್ಲಿ ಕ್ರಿಯಾಶೀಲತೆ, ದೇಶಭಕ್ತಿ ಗೀತೆಯೊಂದಿಗೆ ಅತ್ಯಂತ ಸುಂದರವಾಗಿ ಮೂಡಿಬಂದಿತು.
ಇನ್ನರ್‌ವ್ಹೀಲ್ ಅಧ್ಯಕ್ಷೆ ಲತಾ ಎಂ.ರಮೇಶ್ ಮಾತನಾಡಿ, 79ನೇ ಸ್ವಾತಂತ್ರö್ಯ ದಿನಾಚರಣೆ ಶುಭಾಶಯ. ನಾಡಿನ ರಾಜರು, ವೀರಯೋಧರ ಜೀವನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ. ವಿದ್ಯಾರ್ಥಿಗಳು ದೇಶದ ಇತಿಹಾಸ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಈ ಸಂದಂರ್ಭದಲ್ಲಿ ಸಂಸ್ಥೆ ನಿರ್ದೇಶಕಿ ಜ್ಯೋತಿ ಪವಾರ್ ಮಕ್ಕಳಿಗೆ ಶುಭ ಹಾರೈಸಿದರು. ಸಂಸ್ಥೆ ನಿರ್ದೇಶಕಿ ಹೇಮಾ ಮೋಹನ್ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ರಮೇಶ್, ರಾಮಪ್ಪ, ಶೋಭಾ, ಅನಿತಾ ಭಾಗವಹಿಸಿದ್ದರು.
Independence Day ಈ ಸಂದರ್ಭದಲ್ಲಿ ಮಕ್ಕಳಿಗೆ ದೇಶ ಭಕ್ತರ ಜೀವನ ಚರಿತ್ರೆಯ ಪುಸ್ತಕ ಹಾಗೂ ಪೆನ್‌ಗಳನ್ನು ವಿತರಿಸಲಾಯಿತು. ಗುರುಗಳಿಗೂ ಸನ್ಮಾನಿಸಿ ಕಿರುಕಾಣಿಕೆ ನೀಡಲಾಯಿತು.
