Wednesday, September 16, 2026
Wednesday, September 16, 2026

Vagdevi Charitable Trust ವಿಶೇಷ ಚೇತನರಿಗೆ ಉಚಿತ ಪೆಟ್ಟಿಗೆ ನೆರವು ನೀಡಿದ ವಾಗ್ದೇವಿ ಟ್ರಸ್ಟ್

Date:

Vagdevi Charitable Trust ವಾಗ್ದೇವಿ ಚಾರಿಟಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಎಪ್ಪತ್ತೊಂಭತ್ತನೇ ಸ್ವಾತಂತ್ರ್ಯೋತ್ಸವ ವಿಶೇಷವಾಗಿ ಜರುಗಿತು.

ತೀರ್ಥಹಳ್ಳಿ ತಾಲೂಕು ಕೊಂಡ್ಲೂರು ಎಂಬಲ್ಲಿ ವಾಸವಾಗಿರುವ ವಿಕಲಚೇತನ ವ್ಯಕ್ತಿ ಶ್ರೀ ಕೆ ಎಂ ಸುಧೀರ್ ಇವರಿಗೆ ಟ್ರಸ್ಟ್ ನ ವತಿಯಿಂದ ಒಂದು ಪೆಟ್ಟಿಗೆ ಅಂಗಡಿ (petty shop) ಯನ್ನು ಉಚಿತವಾಗಿ ನೀಡಲಾಯಿತು.
ಅವರ ವಾಸಸ್ಥಾನದ ಸಮೀಪದಲ್ಲಿ ಐತಿಹಾಸಿಕ ಸ್ಥಳ ಕವಲೆ ದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಈ ಪೆಟ್ಟಿಗೆ ಅಂಗಡಿಯನ್ನು ಇರಿಸಲಾಗಿದೆ.

ಕೊಂಡ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಟ್ರಸ್ಟಿನ ಸೇವಾಕಾರ್ಯವನ್ನ ಶ್ಲಾಘಿಸಿದರು.

Vagdevi Charitable Trust ಟ್ರಸ್ಟ್ ನ ಅಧ್ಯಕ್ಷರು ಮತ್ತು ಎಲ್ಲ ಟ್ರಸ್ಟಿಗಳು ಹಾಗೂ ಅನೇಕ ದಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಾನಿಗಳ ಔದಾರ್ಯದಿಂದಲೇ ನಮ್ಮ ಸಂಸ್ಥೆ ನಡೆಯುತ್ತಿದೆ. ನಮ್ಮ ವಾಗ್ದೇವಿ ಚಾರಿಟಬಲ್ ಟ್ರಸ್ಟ್ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕಾಯಿಲೆ ಪೀಡಿತ ಬಡವರಿಗೆ ಔಷಧೋಪಚಾರ, ತುಂಬಾ ಬಡವರಿಗೆ ರೇಶನ್ ಕೊಡುವುದು, ಅನಾಥಾಶ್ರಮಗಳಿಗೆ ಸಹಾಯ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ವರ್ಷವಿಡಿ ಮಾಡುತ್ತಿರುತ್ತೇವೆ. ಈ ವರ್ಷ ಡಿಸೆಂಬರ್ ತಿಂಗಳಲ್ಲಿ ದಶಮಾನೋತ್ಸವವನ್ನು ಆಚರಿಸುತ್ತಿರುವುದರಿಂದ 10 ವಿಶೇಷವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ ಚಟುವಟಿಕೆ ಬಗ್ಗೆ
ಕೆ ಲೈವ್ ನ್ಯೂಸ್ ಗೆ ಶ್ರೀರವಿರಾಜ ವೈದ್ಯ ಅವರು ತಿಳಿಸಿದರು .

ಪ್ರಸ್ತುತ ಶ್ರೀ ಸುಧೀರ್ ಅವರಿಗೆ ನೀಡಿರುವ ಮಳಿಗೆಯ ನೆರವು ಒಂಭತ್ತನೆಯ ಕಾರ್ಯಕ್ರಮವಾಗಿದೆ ಎಂದು ಉಪಸ್ಥಿತರಿದ್ದ ಟ್ರಸ್ಟಿ ಡಿ.ಜಿ.ಮಂಜುನಾಥ್ ಈ ಸಂದರ್ಭದಲ್ಲಿ ನುಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...