Saturday, December 6, 2025
Saturday, December 6, 2025

Klive Special Article ಆಗಸ್ಟ್ 1. ವ್ಯಸನಮುಕ್ತ ದಿನಾಚರಣೆ

Date:

ವಿಶೇಷ ಲೇಖನ
ಆರ್ ಎಸ್. ಆಕಾಶ್

Klive Special Article ಮಾದಕ ವ್ಯಸನಗಳಿಗೆ ಯುವಜನತೆಯೇ ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಿಸಲು ಸರ್ಕಾರ ಹಲವಾರು ಬಗೆಯಲ್ಲಿ ಪ್ರಯತ್ನಿಸುತ್ತಿದ್ದು ವ್ಯಸನಮುಕ್ತಗೊಳಿಸಲು ಶ್ರಮಿಸಿದ ಡಾ.ಮಹಾಂತ ಶಿವಯೋಗಿರವರ ಜನ್ಮ ದಿನಾಚರಣೆ ಆ.01 ನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆ.01 ರಂದು ವ್ಯಸನ ಮುಕ್ತ ದಿನಾಚರಣೆ ಮಾಡಲು ಆದೇಶಿಸಿದೆ. ವಿಶೇಷವಾಗಿ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದ್ದು ಆರೋಗ್ಯ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದೆ.
ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ‘ಜೋಳಿಗೆ’ ಕಾರ್ಯಕ್ರಮದ ಮೂಲಕ 42 ವರ್ಷಗಳ ಕಾಲ ದೇಶ, ವಿದೇಶಗಳಲ್ಲಿ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸಿದ ಸಮಾಜ ಸುಧಾರಕ. ಜನರ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಪಡೆದು, ಗಣ್ಯ ವ್ಯಕ್ತಿಗಳನ್ನು ಕರೆಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಜೂ.26 ರಂದು ವಿಶ್ವ ಮಟ್ಟದಲ್ಲೂ ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಕೂಡ ನಡೆಸಲಾಗುತ್ತದೆ. ಆ ದಿನದಂದು ಹಲವಾರು ವ್ಯಕ್ತಿಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯAತ ವಿವಿಧ ಸಂಸ್ಥೆಗಳು, ಈ ಜಾಗತಿಕ ಆಚರಣೆಯನ್ನು ಬೆಂಬಲಿಸುತ್ತದೆ.
ಭಾರತದಲ್ಲಿ ಮಾದಕ ದ್ರವ್ಯಗಳನ್ನು ಮೂರು ವಿಧದಲ್ಲಿ ವಿಂಗಡಿಸಬಹುದು : ಕಾನೂನು ಬದ್ಧ ಮಾದಕವಸ್ತುಗಳು – ಮದ್ಯ ಮತ್ತು ತಂಬಾಕು /ಸಿಗರೇಟ್. ಅಕ್ರಮ ಮಾದಕ ವಸ್ತುಗಳು ಮತ್ತು ವಿನೋದ ಉಂಟುಮಾಡುವ ಡ್ರಗ್ಸ್ ಹಾಗೂ ಅಂಗಡಿಗಳಲ್ಲಿ ದೊರೆಯುವ ಅಥವಾ ವೈದ್ಯರು ಸೂಚಿಸಿದ ಔಷಧಗಳು.
ಮಾದಕ ವಸ್ತುಗಳ ಬಳಕೆ: ಮಾದಕ ವಸ್ತುಗಳಲ್ಲಿ ನಾನಾ ಬಗೆಗಳಿದ್ದು, ಅವುಗಳು ಸದಾ ಮನುಷ್ಯನನ್ನು ಚಟಕ್ಕೀಡು ಮಾಡುತ್ತಿರುತ್ತವೆ. ಧೂಮಪಾನ, ಗಾಂಜಾದಂತಹ ಮಾದಕಗಳನ್ನು ಸೇದುವುದು, ಚುಚ್ಚಿಕೊಳ್ಳುವುದು ಸೇರಿದಂತೆ ಮುಂತಾದ ಅನೇಕ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಇನ್ನೂ ಡ್ರಗ್ಸ್ನಂತಹ ಮಾದಕ ದ್ರವ್ಯಗಳು ಮೆದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗಳಿಗೆ ಒಳಗಾಗಬಹುದು.
ಬರಬರುತ್ತಾ ವ್ಯಸನಿಗಳು ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದಾರೆ. ಇದಿಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಮಟ್ಟಿಗೆ ಈ ಚಟಕ್ಕೆ ಅವಲಂಬಿತರಾಗುತ್ತಾರೆ.
ಮಾದಕ ವ್ಯಸನಿಗಳಲ್ಲಿ ಯುವಜನರೇ ಹೆಚ್ಚು:
ದೇಶದಲ್ಲಿ ಇಂತಹ ಮಾದಕ ವ್ಯಸನಗಳಿಗೆ 18 + ಯುವಕರೇ ಹೆಚ್ಚು ದಾಸರಾಗುತ್ತಿದ್ದಾರೆ ಎಂದು ಡಬ್ಲೂö್ಯ ಎಚ್‌ಓ ನ ಸಂಶೋಧನೆಯ ಮೂಲಕ ತಿಳಿದು ಬಂದಿದೆ. ದೇಶದಲ್ಲಿ ಶೇ.14.6 ರಷ್ಟು ಜನ ಮದ್ಯಪಾನದ ವ್ಯಸನಕ್ಕೆ ಒಳಗಾಗಿದ್ದು, ಶೇ.5.2 ಜನ ತಮ್ಮ ವೈಯಕ್ತಿಕ ಸಮಸ್ಯೆಗಳಿಗಾಗಿ ಹಾಗೂ ಶೇ.2.7 ಜನ ಚಟಕ್ಕೆ ಅವಲಂಬಿತವಾಗಿ ಸೇವನೆ ಮಾಡುತ್ತಿದ್ದಾರೆ. ಇದರಲ್ಲಿ ಶೇ.27.3 ರಷ್ಟು ಪುರುಷರು, 1.6 ರಷ್ಟು ಮಹಿಳೆಯರು, 1.3 ರಷ್ಟು 10 ರಿಂದ 17 ವಯಸ್ಸಿನವರು ಹಾಗೂ 17.1 ರಷ್ಟು 18 ವರ್ಷದ ಮೇಲ್ಪಟ್ಟ ಯುವಕರು ವ್ಯಸನಕ್ಕೆ ಒಳಾಗಿದ್ದಾರೆ.
2018 ರ ವರದಿ ಪ್ರಕಾರ ಕರ್ನಾಟಕದಲ್ಲಿ ಮದ್ಯಪಾನ ಸಮಸ್ಯೆಯಿಂದ ಬಳಲುತ್ತಿರುವ 20 ಲಕ್ಷ ಜನರು ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಬಯಸಿದ್ದಾರೆ.
Klive Special Article ಸೇದುವ ಮಾದಕ ದ್ರವ್ಯ: ದೇಶದಲ್ಲಿ ಶೇ.0.7 ಜನ ಒಳಸೇದುವ(ಇನ್ಹಲೆಂಟ್) ಮಾದಕ ದ್ರವ್ಯಗಳ ವ್ಯಸನಿಗಳಾಗಿದ್ದು ಶೇ. 0.21 ಜನ ತಮ್ಮ ವೈಯಕ್ತಿಕ ಸಮಸ್ಯೆಗಾಗಿ ಹಾಗೂ ಶೇ. 0.09 ಜನ ವ್ಯಸನಕ್ಕೆ ಅವಲಂಬಿತರಾಗಿದ್ದರೆ.
ಗಾAಜಾ: ದೇಶದಲ್ಲಿ ಶೇ.2.8 ಜನ ಗಾಂಜಾದ ವ್ಯಸನಕ್ಕೆ ಒಳಗಾಗಿದ್ದು, ಶೇ.0.66 ತಮ್ಮ ವೈಯಕ್ತಿಕ ಸಮಸ್ಯೆಗೆ ಹಾಗೂ ಶೇ.0.25 ಜನ ಚಟಕ್ಕೆ ಅವಲಂಬಿತರಾಗಿದ್ದಾರೆ. ಇದರಲ್ಲಿ 40 ಲಕ್ಷ ಜನ ಭಂಗಿ ಹಾಗೂ 50 ಲಕ್ಷ ಜನ ಗಾಂಜಾಕ್ಕೆ ದಾಸರಾಗಿದ್ದಾರೆ. ಶೇ.5.0 ಪುರುಷರು, ಶೇ.0.6 ಮಹಿಳೆಯರು, ಶೇ.0.9 10 ರಿಂದ 17 ವಯಸ್ಸಿ ಯುವಕರು ಹಾಗೂ ಶೇ.3.3 18 ವರ್ಷದ ಮೇಲ್ಪಟ್ಟ ಯುವಕರು ದಾಸರಾಗಿದ್ದಾರೆ.
ಒಪಿಯಾಡ್ : ದೇಶದಲ್ಲಿ ಶೇ.2.1 ಜನ ಒಪಿಯಾಡ್ ವ್ಯಸನಕ್ಕೆ ಒಳಗಾಗಿದ್ದು, ಶೇ.0.70 ವೈಯಕ್ತಿಕ ಸಮಸ್ಯೆಗಳಿಗೆ ಹಾಗೂ ಶೇ.0.26 ಜನ ಇದರ ಚಟಕ್ಕೆ ಅವಲಂಬಿತರಾಗಿದ್ದಾರೆ. ಇದರಲ್ಲಿ ಓಪಿಯಮ್‌ಗೆ 11 ಲಕ್ಷ, ಹೆರಾಯಿನ್‌ಗೆ 63 ಲಕ್ಷ ಹಾಗೂ ಫಾರ್ಮ್ ಓಪಿಯಾಡ್‌ಗೆ 25 ಲಕ್ಷ ಜನ ದಾಸರಾಗಿದ್ದಾರೆ.
ಮದ್ಯ- ವ್ಯಸನದ ಕುರಿತಾದ ಕೆಲವು ವಾಸ್ತವಾಂಶಗಳು:
ಮದ್ಯ ಸೇವಿಸುವ ಪ್ರತಿ ಇಬ್ಬರಲ್ಲಿ ಒಬ್ಬನು ತೀವ್ರವಾಗಿ ಈ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಮದ್ಯ ಸೇವಿಸುವ ವ್ಯಕ್ತಿಗಳು ಮದ್ಯ ಸೇವಿಸದ ವ್ಯಕ್ತಿಗಳಿಗಿಂತ ಮೂರು ಪಟ್ಟು ಹೆಚ್ಚು ಗಂಭೀರ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿದೆ. ಭಾರತದ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತಿ ಐದು ರೋಗಿಗಳಲ್ಲಿ ಒಬ್ಬರು ನೇರವಾಗಿ ಮದ್ಯವ್ಯಸನಕ್ಕೆ ಸಂಬಂಧಿಸಿದವರಾಗಿರುತ್ತಾರೆ.
ಮದ್ಯ ಸೇವನೆ ಮತ್ತು ಮಾದಕ ವ್ಯಸನಿಗಳು ಹಿಂಸೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಅವರ ಸಂಗಾತಿಗಳೊAದಿಗೆ ಈ ಸಾಧ್ಯತೆ ಅಧಿಕ. ಈ ರೀತಿಯ ಹಿಂಸೆಯು ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಅಥವಾ ಆರ್ಥಿಕವಾಗಿಯೂ ಕೂಡ ನಡೆಯಬಹುದು.
ಮದ್ಯಪಾನ ವ್ಯಸನಕ್ಕೆ ದಾಸರಾದವರು ಆತ್ಮಹತ್ಯೆ ಪ್ರಯತ್ನ ಮಾಡಬಹುದು ಅಥವಾ ಅಪಾಯಕಾರಿಯಾದ ಲೈಂಗಿಕ ವರ್ತನೆ ತೋರಬಹುದು. ಅಥವಾ ಹೆಚ್‌ಐವಿ ಸೋಂಕು, ಕ್ಷಯ, ಅನ್ನನಾಳದ ಕ್ಯಾನ್ಸರ್, ಲಿವರ್ ಸಮಸ್ಯೆ ಮತ್ತು ಇನ್ನಿತರ ಕಾಯಿಲೆಗಳಿಂದ ಕರುಳಿನ ಹುಣ್ಣು ಉಂಟಾಗಬಹುದು.
ಮದ್ಯವು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಮದ್ಯಪಾನದಿಂದ ಲಿವರ್ ಸಮಸ್ಯೆ, ಭ್ರೂಣಕ್ಕೆ ತೊಂದರೆ, ಮೆದುಳಿನ ಜೀವಕೋಶಗಳ ಕುಗ್ಗುವಿಕೆ, ಕ್ಯಾನ್ಸರ್‌ನ ಅಪಾಯದ ಹೆಚ್ಚಳ, ಖಿನ್ನತೆ, ಹೃದಯ ಸ್ನಾಯುಗಳ ದೌರ್ಬಲ್ಯ ಮತ್ತು ಕಿರಿಕಿರಿ ಅಥವಾ ಮನಸ್ಥಿತಿ ಬದಲಾಣೆ, ಪಾರ್ಶ್ಚವಾಯುವಿನ ತೊಂದರೆ, ಅಧಿಕ ರಕ್ತದೊತ್ತಡ, ಅಜೀರ್ಣ ತೊಂದರೆಗಳು, ಲೈಂಗಿಕ ದೌರ್ಬಲ್ಯ, ಅಕಾಲಿಕ ಮುಪ್ಪು ಸಂಭವಿಸಬಹುದು.
ದೀರ್ಘಕಾಲದ ಮದ್ಯ ಸೇವನೆಯಿಂದಾಗುವ ಸಮಸ್ಯೆಗಳು:-
ವ್ಯಕ್ತಿಯು ಮಾದಕ ವಸ್ತುವಿನ ಬಗ್ಗೆ ಯಾವಾಗಲೂ ಯೋಚಿಸುವುದು(ನಾನು ಮತ್ತೆ ಯಾವಾಗ ಕುಡಿಯುತ್ತೇನೆ /ಧೂಮಪಾನ ಮಾಡುತ್ತೇನೆ, ಇದರ ಬದಲಿಗೆ ಏನನ್ನು ತೆಗೆದುಕೊಳ್ಳಲಿ, ಅದನ್ನು ಎಲ್ಲಿಂದ ಪಡೆಯಲಿ? ಹೇಗೆ ಪಡೆಯಲಿ? ಇತ್ಯಾದದಿ ಚಿಂತನೆಗಳು.)
ವಿತ್‌ಡ್ರಾವಲ್ ಲಕ್ಷಣಗಳು– ವ್ಯಕ್ತಿಯು ಒಂದಷ್ಟು ದಿನ ಮಾದಕ ವಸ್ತುಗಳನ್ನು ಸೇವಿಸದೇ ಇದ್ದಾಗ ಅವರಲ್ಲಿ ನಡುಕ, ಕಿರಿಕಿರಿ, ತೀವ್ರ ಬಯಕೆ ಉಂಟಾಗಿ, ಮಾನಸಿಕ ಹಾಗೂ ಭಾವನಾತ್ಮಕ ಅಂಶಗಳ ಮೇಲೆ ಪರಿಣಾಮ.
ನಿಯಂತ್ರಣದ ಕೊರತೆ– ಇಡೀ ದಿನ ಮಾದಕ ವಸ್ತುಗಳನ್ನು ತೆಗೆದುಕೊಳ್ಳದೆ ಇರಬೇಕೆಂದು ನಿರ್ಧರಿಸಿ, ಅದಕ್ಕೆ ಬದ್ದರಾಗದೆ ವಿಫಲರಾಗುವುದು .
ಬಯಕೆ-ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ತೀವ್ರವಾದ ಬಯಕೆ. ನಿರಂತರ ಸೇವೆಯಿಂದ ತನಗೆ ಹಾಗೂ ಸುತ್ತ-ಮುತ್ತಲಿನವರಿಗೆ ತೊಂದರೆಯಾಗುವುದನ್ನು ತಿಳಿದಿದ್ದೂ ಅದನ್ನು ಮುಂದುವರಿಸುವುದು.
ಆರೋಗ್ಯ ಇಲಾಖೆಯಿಂದ ವ್ಯಸನಮುಕ್ತಿಗೆ ಆಪ್ತಸಮಾಲೋಚನೆ-ಚಿಕಿತ್ಸೆ:
ಮಾದಕ ವ್ಯಸನಗಳಿಂದ ಬಳಲುತ್ತಿರುವವರು ಹಾಗೂ ಅದರಿಂದ ಆಚೆ ಬರಲು ಹಂಬಲಿಸುತ್ತಿವವರಿಗೆ ಆಪ್ತ-ಸಮಾಲೋಚನೆ ಹೆಚ್ಚು ಸಹಕಾರಿಯಾಗತ್ತದೆ. ಅದರಂತೆ ಶಿವಮೊಗ್ಗ ಜಿಲ್ಲೆ ಒಳಗೊಂಡಂತೆ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಜಿಲ್ಲಾ, ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವ್ಯಸನಕ್ಕೆ ತುತ್ತಾದಾವರಿಗೆ ಮನೋಚೈತನ್ಯ ಕಾರ್ಯಕ್ರಮದ ಮೂಲಕ ಸ್ವ – ಇಚ್ಛೆಯಿಂದ ಮಧ್ಯಪಾನ ತ್ಯಜಿಸಲು ಬಯಸುವವರಿಗೆ ಔಷಧೋಪಚಾರ ಹಾಗೂ ಆಪ್ತಸಮಾಲೋಚನೆ ಮುಖಾಂತರ ಸಹಾಯ ಹಸ್ತ ನೀಡಲಾಗುತ್ತದೆ. ಮದ್ಯ ಅಥವಾ ಯಾವುದೇ ವ್ಯಸನ ತ್ಯಜಿಸಲು ಇಚ್ಛಿಸುವವರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮನೋವೈದ್ಯರ ತಂಡದ ಸಹಾಯ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ/ತಾಲ್ಲೂಕು ಆಸ್ಪತ್ರೆ/ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಅಥವಾ ಆರೋಗ್ಯ ಸಹಾಯವಾಣಿ ‘104’ಗೆ ಕರೆ ಮಾಡಬಹುದು.

  • ಆಕಾಶ್.ಆರ್.ಎಸ್, ಪ್ರಶೀಕ್ಷಾಣಾರ್ಥಿ, ವಾರ್ತಾ ಇಲಾಖೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...