Police Department ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ “ಇಗ್ನೆಂಟ್ ಮೈಂಡ್ ಅಂಡ್ ಇಗ್ನೆಂಟ್ ಪಾಸಿಟಿವಿಟಿ” ಎಂಬ ಘೋಷವಾಕ್ಯದಡಿ ಜು.24 ರಂದು ಆನ್‌ಲೈನ್ ಪಾಡ್‌ಕಾಸ್ಟ್ ಮೂಲಕ ‘ಇನ್ಸ್ಪೈರ್’ ಎಂಬ ವಿನೂತನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ “ಇಗ್ನೆಂಟ್ ಮೈಂಡ್ ಅಂಡ್ ಇಗ್ನೆಂಟ್ ಪಾಸಿಟಿವಿಟಿ” ಎಂಬ ಘೋಷವಾಕ್ಯದಡಿ ಜು.24 ರ ಸಂಜೆ 7 ಗಂಟೆಗೆ ಆನ್‌ಲೈನ್ ಪಾಡ್‌ಕಾಸ್ಟ್ ಮೂಲಕ “ಇನ್ಸೆ÷್ಪರ್” ವಿಡಿಯೋ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಇವರು ಮಾತನಾಡಿ ಸೈಬರ್ ಕ್ರೈಂ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಮದ್ಯಪಾನ, ಡ್ರಗ್ಸ್, ಗಾಂಜಾ, ಮಾದಕ ದ್ರವ್ಯ ಸೇವನೆ, ಸಂಚಾರ ನಿಯಮಗಳು, ಎಪಿಕೆ ಫೈಲ್, ಆನ್‌ಲೈನ್ ಫಿಶಿಂಗ್, ಸಾಮಾಜಿಕ ಜಾಲತಾಣಗಳಿಂದ ಆಗುವ ಅನಾಹುತಗಳು, ಸಾರ್ವಜನಿಕ ವೈ-ಫೈ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಗಳು, ಆನ್‌ಲೈನ್ ಶಾಪಿಂಗ್ ನಿಂದಾಗುವ ಸ್ಯಾಮ್ಗಳ ಬಗ್ಗೆ ಮತ್ತು ಸಂಚಾರ್ ಸಾಥಿ ಆ್ಯಪ್‌ನ ಉಪಯೋಗದ ಕುರಿತು ಹಾಗೂ ಇತರೆ ಉಪಯುಕ್ತ ಮಾಹಿತಿಯನ್ನು ನೀಡಿದರು.
Police Department ಈ ಆನ್‌ಲೈನ್ ಪಾಡ್‌ಕಾಸ್ಟ್ ನಲ್ಲಿ ಜಿಲ್ಲೆಯ 33 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 200 ವಿದ್ಯಾರ್ಥಿ ನಿಲಯಗಳಲ್ಲಿ 6 ನೇ ತರಗತಿಯಿಂದ ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಓದುತ್ತಿರುವ ಸುಮಾರು 15 ರಿಂದ 16 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಎನ್ ಹೇಮಂತ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪ್ರೀತಿ, ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
Police Department ಇನ್ಸ್ಪೈರ್ ಆನ್ ಲೈನ್ ಪಾಡ್ ಕಾಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಯಶಸ್ವಿ
Date:
