Klive Special Article ಪ್ರತಿವರ್ಷವೂ ನಾವು ತಂದೆಯ ದಿನ,ತಾಯಿಯದಿನ,ಮಕ್ಕಳದಿನ,ಹೀಗೆ ಒಂದೊಂದು ದಿನದ ಹೆಸರಿನಲ್ಲಿ ದಿನಾಚರಣೆಯನ್ನು ಆಚರಿಸುತ್ತೇವೆ.
ಹಾಗೆಯೇ ಗುರುಪೂರ್ಣಿಮೆಯೂ ಬಹಳ ಮುಖ್ಯವಾದ ದಿನವಾಗಿರುತ್ತೆ.
ನಮಗೆ ಮೊದಲಗುರುಗಳು ತಾಯಿ ತಂದೆ,ನಂತರ ಆಚಾರ್ಯರು,ವಿದ್ಯೆಕಲಿಸಿದ ಗುರುಗಳು.ಇಂದಿನ ದಿವಸ ನಾವು ನಮ್ಮ ಗೌರವದ ಕೃತಜ್ಞತೆಗಳನ್ನು ಗುರುಗಳಿಗೆ ಅರ್ಪಿಸಬೇಕಾದ ದಿನ.
ಗುರುಗಳ ಜವಾಬ್ದಾರಿಯೂ ಬಹಳ ದೊಡ್ಡದಿದೆ. ಪಾಠಮಾಡುವುದರ ಜೊತೆಗೆ ಸೂಕ್ತ ಮಾರ್ಗದರ್ಶನವನ್ನು ಕೊಡುವ ಜವಾಬ್ದಾರಿ ಇದೆ ಗುರುವಿಗೆ.
Klive Special Article ದಾಸರು ತಮ್ಮ ಬುದ್ಧಿಮಾತಿನ ಪದದಲ್ಲಿ”ಗುರುವಿನ
ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”
ಎಷ್ಟು ಸುಂದರವಾದ ವಾಕ್ಯ.ಎಂದರೆ ಗುರುವಿನ ಗುಲಾಮಗಿರಿ ಮಾಡು ಎಂದರ್ಥವಲ್ಲ.ಗುರುಗಳ ಮನಸ್ಸನ್ನು ಗೆದ್ದು ಅವರಿಂದ ಭೇಷ್ ಎಂದು ಶಹಬ್ಬಾಷ್ ಗಿರಿಪಡೆದು ಅವರ ಪ್ರೀತಿಯನ್ನು ಸಂಪಾದಿಸಿ ವಿದ್ಯಾರ್ಥಿಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು.
ಒಮ್ಮೆ ಗುರುವಿನ ಪ್ರೀತಿ ಸಂಪಾದಿಸಿದಿವೆಂದರೆ ಮುಂದೆ
ಜೀವನದ ದಾರಿಯಲ್ಲಿಯೂ ಯಾವುದೇ ಅಡೆತಡೆಯಿಲ್ಲದೆ ಸಾಗಬಹುದು.ಗುರುಗಳ ಕೃಪೆ ಪಡೆದ
ನಿದರ್ಶನಗಳನ್ನು ನಾವು ಇಂದಿರೇಶವಿಠಲಾಂಕಿತರಾದ
ಶ್ರೀಪಾಂಡುರಂಗಿ ಹುಚ್ಚಾಚಾರ್ಯರಿಂದ ಕಾಣಬಹುದು.
ಬಹಳಷ್ಟು ಜನ ಶಿಷ್ಯರು ಇವರನ್ನು ಗುರುಗಳಾಗಿ ಸ್ವೀಕರಿಸಿ ,ಅವರಲ್ಲಿ ಶಿಷ್ಯರಾಗಿ ಅವರ ಅನುಗ್ರಹ ಪಡೆದು
ತಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಿದವರಿದ್ದಾರೆ.
ಗುರುಪೂರ್ಣೀಮೆಯ ಶುಭದಿನದಂದು ನಾವೂ ಎಲ್ಲ
ಗುರುಗಳಿಗೂ ಮತ್ತು ಗುರುವೃಂದಕ್ಕೂ ನಮನಗಳನ್ನು ಅರ್ಪಿಸೋಣ.
Klive Special Article ಕಲಿಸಿದ ಚೇತನಕ್ಕೆ ಶಿರಬಾಗುವ ದಿನ ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ
Date:
