Saturday, December 6, 2025
Saturday, December 6, 2025

Klive Special Article ಭಿನ್ನ ಕಥಾ ಹಂದರದ ನೈತಿಕ ಥ್ರಿಲ್ಲರ್ ‘ಶಾಖಾಹಾರಿ’

Date:

Klive Special Article 2024ರ ಫೆಬ್ರವರಿ 16 ರಂದು ಬಿಡುಗಡೆಯಾದ “ಶಾಖಾಹಾರಿ” ಎಂಬ ಕನ್ನಡ ಚಲನಚಿತ್ರವು ವಿಶಿಷ್ಟ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿದೆ. ಇದು ತಾತ್ವಿಕ ಚರ್ಚೆ, ನೈತಿಕತೆ ಹಾಗೂ ಹಾಸ್ಯಾಸ್ಪದ ಪ್ರಹಸನಗಳ ಮಧ್ಯೆ ಕಟ್ಟಲ್ಪಟ್ಟಿರುವ ಒಂದು ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.

ಈ ಚಿತ್ರವನ್ನು ಸಂದೀಪ್ ಸುಂಕದ ನಿರ್ದೇಶಿಸಿದ್ದಾರೆ. ಕತೆ, ಸಂಭಾಷಣೆ ಹಾಗೂ ಚಿತ್ರಕಥೆಯನ್ನೂ ಸಂದೀಪ್ ಸುಂಕದ ಅವರು ಎಸ್.ಆರ್. ಗಿರೀಶ್ ಅವರ ಜೊತೆಯಲ್ಲಿ ಬರೆದಿದ್ದಾರೆ. ಚಿತ್ರಕ್ಕೆ ಬದಲಾಗದ ಗುಣಮಟ್ಟ ನೀಡಿರುವ ನಿರ್ಮಾಪಕರು ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ವಿನಯ್ ಯುಜಿ ಮತ್ತು ನಿಧಿ ಹೆಗ್ಗಡೆ ಅಭಿನಯಿಸಿದ್ದಾರೆ. ಇವರ ಅಭಿನಯ ಚಿತ್ರಕ್ಕೆ ತೀವ್ರತೆ ಮತ್ತು ನಾಟಕೀಯತೆಯ ಸ್ಪರ್ಶ ನೀಡಿದೆ.

ಸಾಂದರ್ಭಿಕ ಹಿನ್ನೆಲೆಗಳಿಗೆ ತಕ್ಕಂತೆ ಭಾವಯುಕ್ತ ಸಂಗೀತವನ್ನು ಮಯೂರ ಅಂಬಿಕಳ್ಳು ರಚಿಸಿದ್ದು, ಚಿತ್ರಕ್ಕೆ ಔದಾರ್ಯ ತುಂಬಿದೆ. ಚಿತ್ರದಲ್ಲಿ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಕಾರ್ಯ ತಂತ್ರಜ್ಞಾನ ಮತ್ತು ದೃಶ್ಯ ವೈಭವದಲ್ಲಿ ಗಮನ ಸೆಳೆಯುತ್ತದೆ. ಶಶಾಂಕ್ ನಾರಾಯಣ ಅವರ ಸಂಪಾದನೆಯು ಚಿತ್ರಕ್ಕೆ ಸರಿಯಾದ ಹರಿವನ್ನು ನೀಡಿದೆ.

ಈ ಚಿತ್ರವನ್ನು ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಾಣ ಸಂಸ್ಥೆ ಯಿಂದ ತಯಾರಿಸಲಾಗಿದ್ದು, ಕೆ.ಎಂ.ಜಿ. ಸ್ಟುಡಿಯೋಸ್ ವಿತರಣೆ ಹೊಣೆ ಹೊತ್ತಿದೆ. ವಿತರಣೆ ಮತ್ತು ಪ್ರದರ್ಶನದಲ್ಲಿ ರಂಗಾಯಣ ದಂಪತಿ ಮುಖ್ಯ ಪಾತ್ರವಹಿಸಿಕೊಂಡಿದ್ದಾರೆ. ಚಿತ್ರದ ಕಾಲಾವಧಿಯೂ 146 ನಿಮಿಷಗಳಾಗಿದ್ದು, ಇದು ಭಾರತದಾದ್ಯಂತ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿದೆ.

ಈ ಸಂಶೋಧನಾತ್ಮಕ ಥ್ರಿಲ್ಲರ್ ಚಿತ್ರವು ಮಾಂಸಾಹಾರ ಮತ್ತು ಶಾಖಾಹಾರದ ನೈತಿಕ ಮತ್ತು ತಾತ್ವಿಕ ಚರ್ಚೆಯ ಸುತ್ತ ಮೂಡಿರುವ ಮರ್ಡರ್ ಮಿಸ್ಟರಿ ಕಥಾವಸ್ತು ಹೊಂದಿದ್ದು, ಪ್ರೇಕ್ಷಕರ ಮನಸ್ಸಿಗೆ ಆಳವಾಗಿ ತಲುಪುವಂಥದ್ದು.

ಚಿತ್ರದ ಹಿನ್ನಲೆಯಲ್ಲಿ ಮಲೆನಾಡಿನ ತೀರ್ಥಹಳ್ಳಿ ಪ್ರದೇಶವನ್ನು ಆಯ್ಕೆ ಮಾಡಿದ್ದು, ಇಲ್ಲಿ ‘ಸುಬ್ಬಣ್ಣ’ ಎಂಬ ಹೋಟೆಲ್ ಅಡುಗೆಗಾರನ ಪಾತ್ರದಲ್ಲಿ ರಂಗಾಯಣ ರಘು ಅವರು, ದೀಪದಂತೆ ಪ್ರಕಾಶಮಾನವಾದ ಅಭಿನಯ ನೀಡಿದ್ದಾರೆ. ಸೂಕ್ಷ್ಮ ಮತ್ತು ಅನಿರೀಕ್ಷಿತ ಘಟನೆಗಳ ಸರಣಿಯಲ್ಲಿ, ಸತ್ಯವನ್ನು ಹುಡುಕುತ್ತಿರುವ ಪೊಲೀಸ್ ಅಧಿಕಾರಿಯಾಗಿ, ಗೋಪಾಲಕೃಷ್ಣ ದೇಶಪಾಂಡೆ ಅವರ ತನಿಖೆ ಪ್ರೇಕ್ಷಕರನ್ನು ಕುತೂಹಲದಿಂದ ಕಟ್ಟಿ ಹಿಡಿಯುತ್ತದೆ.

Klive Special Article ಈ ಚಿತ್ರದಲ್ಲಿ ‘ಹತ್ಯೆ ಯಾರು ಮಾಡಿದರು?’ ಎಂಬ ಪ್ರಶ್ನೆಯೊಂದಿಗೆ ಆಹಾರದ ಆಯ್ಕೆಗೂ ಸಂಬಂಧಿಸಿದ ಧಾರ್ಮಿಕ-ಸಾಂಸ್ಕೃತಿಕ ಚರ್ಚೆ ಹಿನ್ನಲೆಯಲ್ಲಿ ಬರುವುದರಿಂದ, ಇದು ಪಾರಂಪರಿಕ ಥ್ರಿಲ್ಲರ್‌ಗಿಂತ ವಿಶಿಷ್ಟವಾಗಿದೆ. ನವೀನ್ ರಾಜ್ ಅವರ ಹಿನ್ನೆಲೆ ಸಂಗೀತವು ಚಿತ್ರದಲ್ಲಿ ಥ್ರಿಲ್ಲರ್ ಎಫೆಕ್ಟ್‌ಗೆ ತಕ್ಕಷ್ಟು ತೀವ್ರತೆ ನೀಡಿದೆ. ಸೌಂಡ್ ಡಿಸೈನ್ ಸುಕ್ಷ್ಮವಾಗಿದೆ. ಛಾಯಾಗ್ರಹಣ ನಿಸರ್ಗದ ಸೌಂದರ್ಯವನ್ನು ಹಾಗೂ ಪಾತ್ರಗಳ ಭಾವನಾತ್ಮಕ ದಿಕ್ಕುಗಳನ್ನು ಸಮರ್ಪಕವಾಗಿ ಹಿಡಿದಿಟ್ಟುಕೊಳ್ಳುತ್ತದೆ.

Bangalore International Film Festival (BIFFes) 2024 – Best Kannada Feature Film (Special Mention), Best Backgroundd score.
Ottawa Indian Film Festival Awards (OIFFA) 2024 – Best Director ನಾಮಿನೇಷನ್.
IFFI 2024 Indian Panorama – ಅಧಿಕೃತ ಆಯ್ಕೆ.
Karnataka State Film Awards 2024–25 – ನಿರೀಕ್ಷಿತ ಪ್ರಶಸ್ತಿಗಳ ಪಟ್ಟಿ: Best Debut Director, Best Story/Screenplay. ಇವು ಚಿತ್ರದ ಕಲಾತ್ಮಕತೆಯ ಜಾಗತಿಕ ಗುರುತಿನ ಸಾಕ್ಷಿಗಳಾಗಿವೆ.ಹಾಗೂ ಅನೇಕ ಪ್ರಶಸ್ತಿಗಳೂ ಸಹ ದೊರೆತಿದ್ದು, ವಿವಿಧ ಭಾಷೆಗಳಿಗೆ ಅನುವಾದವು ಸಹ ಆಗಿದೆ.

ಮೇ 24, 2024 ರಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾದ ನಂತರ, ಕೆಲವೇ ದಿನಗಳಲ್ಲಿ 10 ಮಿಲಿಯನ್ ನಿಮಿಷಗಳ ವೀಕ್ಷಣೆ ದಾಖಲಾಗಿದ್ದು, ಇದುOTT ವೀಕ್ಷಣಾ ವಿಶ್ವಾಸಾರ್ಹತೆಗೂ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ಚಿತ್ರವನ್ನು “ಅತ್ಯುತ್ತಮ ಥ್ರಿಲ್ಲರ್” ಎಂದು ಹೊಗಳಿದ್ದಾರೆ.

ಸಿನಿಮಾದಲ್ಲಿ ಉತ್ತಮ ಅಂಶವನ್ನು ಗುರುತಿಸುವುದಾದರೆ,
ವಿಭಿನ್ನ ಕಥಾವಸ್ತುವನ್ನು ಹೊಂದಿದ್ದು, ಗಂಭೀರ ಪಾತ್ರ ನಿರ್ವಹಣೆಯು ಉತ್ತಮವಾಗಿ ಮೂಡಿದೆ,
ನೈತಿಕವಾಗಿ ಮತ್ತು ತಾತ್ವಿಕ ಚರ್ಚೆಗೆ ಆಧಾರವಾಗಿ ವಿಷಯ ವಿಶ್ಲೇಷಣೆ ದೊರೆತಿದೆ, ಸಂಯಮಿತ ನಿರ್ದೇಶನ ಮತ್ತು ಸಾಫ್ಟ್ ಥ್ರಿಲ್ಲರ್ ಹಾದಿಯಿಂದ ಸಿನಿಮಾ ನೋಡುಗರನ್ನು
ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಕಾಣಬಹುದಾಗಿದೆ.

ಕೆಲವು ಅಂಶಗಳನ್ನು ಸಿನಿಮಾದಲ್ಲಿ ಒಳಪಡಿಸಿದ್ದರೆ ಮತ್ತಷ್ಟು ವಿಶೇಷವಾಗಿ ಮೂಡಿರಬಹುದೇನೋ ಎಂಬ ಅಂಶಗಳನ್ನು ಹೇಳುವುದಾದರೆ, ನಿರ್ದಿಷ್ಟ ಶ್ರೇಣಿಯ ಪ್ರೇಕ್ಷಕರಿಗೆ ಮಾತ್ರ ಪೂರ್ಣವಾಗಿ ಮನರಂಜನೆ ನೀಡಬಹುದು (commercial mass appeal ಕಡಿಮೆ) ಕಥೆಯಲ್ಲಿ ರಂಗಾಯಣ ರಘು ಅವರ ಪ್ರೀತಿ ವಿಷಯಾಧರಿತ ಒಂದಿಷ್ಟು ಮತ್ತಿಷ್ಟು ಅಂಶ, ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅವರ ಮಡದಿಯ ಮತ್ತಿಷ್ಟು ಸನ್ನಿವೇಶಗಳನ್ನು ನೀಡಬಹುದಿತ್ತೇನೋ,

“ಶಾಖಾಹಾರಿ” ಕನ್ನಡ ಚಲನಚಿತ್ರದಲ್ಲಿ ಬರುವ ಹಾಡುಗಳು ತಮ್ಮ ವೈಶಿಷ್ಟ್ಯತೆಯಿಂದ ಗಮನ ಸೆಳೆದಿವೆ. ಈ ಚಿತ್ರವನ್ನು ಎಸ್. ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ ಮತ್ತು ಚಿತ್ರವು ಸಾಹಿತ್ಯ, ಸಂಸ್ಕೃತಿ ಮತ್ತು ಆತ್ಮವಿಶ್ಲೇಷಣೆಯ ಸೂಕ್ಷ್ಮತೆಗೆ ಪ್ರಾಮುಖ್ಯತೆ ನೀಡಿರುವ ತೀವ್ರ ಕಥಾವಸ್ತುವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ಚಿತ್ರದಲ್ಲಿನ ಸಂಗೀತ ಕೂಡ ಅದರ ವಿಷಯದ ಮೇಲೆ ಸಮಶಾಖJukeಮೂಡಿಬಂದಿದೆ.

  1. Soul of shakahari, ಈ ಹಾಡು ಚಿತ್ರದಲ್ಲಿ ಬರುವ ಅತ್ಯಂತ ಭಾವನಾತ್ಮಕ ಸಂಗೀತವಾಗಿದ್ದು. “ಸೋಲ್ ಆಫ್ ಶಾಖಾಹಾರಿ” ಎಂಬ ಹೆಸರಿನಂತೆ, ಈ ಹಾಡು ಕಥೆಯ ಆಂತರಂಗವನ್ನು ಮನೋಜ್ಞವಾಗಿ ಪ್ರತಿಬಿಂಬಿಸುತ್ತದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವಿನಯ್ ಯುಜೆ ಮತ್ತು ನಿಧಿ ಹೆಗ್ಡೆ ಈ ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.
  2. Sougandhika, ಚಲನಚಿತ್ರದ ಮತ್ತೊಂದು ಮಧುರ ಹಾಡಾಗಿದೆ. ಪ್ರೇಮ ಹಾಗೂ ನಿಜವಾದ ಸಂಬಂಧಗಳ ನಡುವಿನ ಭಾವನೆಗಳನ್ನು ಈ ಹಾಡು ತುಂಬಾ ಮನಮೋಹಕವಾಗಿ ವಿವರಿಸುತ್ತದೆ. ಹಾಡಿನ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ವಿಭಿನ್ನ ಅನುಭವವನ್ನು ನೀಡುತ್ತದೆ.
    ಚಿತ್ರದ ಎಲ್ಲಾ ಹಾಡುಗಳನ್ನು ಒಟ್ಟುಗೂಡಿಸಿ MRT Music ಸಂಸ್ಥೆ “Audio Jukebox” ರೂಪದಲ್ಲಿ ಬಿಡುಗಡೆ ಮಾಡಿದ್ದು, ಶ್ರೋತರಿಗೆ ಒಂದು ನಿರಂತರ ಸಂಗೀತಾನುಭವವನ್ನು ನೀಡುತ್ತದೆ. ಇದು ಆನ್‌ಲೈನ್‌ನಲ್ಲಿ ಯೂಟ್ಯೂಬ್‌ ಮೂಲಕ ಲಭ್ಯವಿದೆ.

ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಎಲ್ಲಾ ಹಾಡುಗಳನ್ನು ಮಯೂರ ಅಂಬೇಕಳ್ಳು ಸಂಯೋಜಿಸಿದ್ದಾರೆ. ಅವರು ಈ ಚಿತ್ರದ ಭಾವನಾತ್ಮಕ ಹಿನ್ನೆಲೆಯೊಂದಿಗೆ ಸಂಗೀತವನ್ನು ಅಪರೂಪದ ಸಂಯೋಜನೆಯೊಂದಿಗೆ ಬೆರೆಸಿ, ಕೇಳುಗರಿಗೆ ಹೊಸ ಅನುಭವವನ್ನು ನೀಡಿದ್ದಾರೆ. ಹಾಡುಗಳ ವೈಶಿಷ್ಟ್ಯತೆ ನೋಡುವುದಾದರೆ, ಹೃದಯಸ್ಪರ್ಶಿ ಸಂಗೀತ ಮತ್ತು ದಾರ್ಶನಿಕ ಸಾಹಿತ್ಯ. ಕಥೆಯ ತೀವ್ರತೆಗೆ ತಕ್ಕಂತೆ ಹಾಡುಗಳ ಅರ್ಥಪೂರ್ಣ ವಿನ್ಯಾಸ, MRT Music ನಿಂದ ಉಚಿತವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ.

“ಶಾಖಾಹಾರಿ” ಚಿತ್ರದ ಹಾಡುಗಳು ಸಿನಿಮಾ ಕಥೆಗೂ, ಪಾತ್ರಗಳೊಳಗಿನ ಆಂತರಿಕ ಬದಲಾವಣೆಗೂ ತಾಳಮೇಳ ಹೊಂದಿವೆ. ಭಾವನೆ ಮತ್ತು ಕಲಾತ್ಮಕತೆ ಎರಡರನ್ನೂ ಒಳಗೊಂಡಿರುವ ಈ ಹಾಡುಗಳು ನಿಜಕ್ಕೂ ಪ್ರೇಕ್ಷಕರ ಮನಸ್ಸಿನಲ್ಲಿ ಧೀರ್ಘಕಾಲ ನೆನಪಾಗುವಂಥವು. ಹೊಸ ತರದ ಸಂಗೀತ ಪ್ರೀತಿಸುವವರು ಈ ಹಾಡುಗಳನ್ನು ತಪ್ಪದೆ ಕೇಳಬೇಕು.

“ಶಾಖಾಹಾರಿ” ನಿಜವಾಗಿಯೂ ಕನ್ನಡ ಚಿತ್ರರಂಗದಲ್ಲಿ ಹೊಸತವನ್ನು ಸಾದರಪಡಿಸುವ ಪ್ರಯತ್ನ. ಅದರಲ್ಲಿ ಕೇವಲ ಮನರಂಜನೆ ಮಾತ್ರವಲ್ಲ, ಅರ್ಥಪೂರ್ಣ ಸಂದೇಶವಿದೆ. ವಿಭಿನ್ನ ಥ್ರಿಲ್ಲರ್ ಅನುಭವವನ್ನು ಹುಡುಕುತ್ತಿರುವ ಪ್ರೇಕ್ಷಕರಿಗೆ ಇದು ತಪ್ಪದೇ ನೋಡಬೇಕಾದ ಚಿತ್ರ.

ಬರಹ :ಭಾರ್ಗವಿ ಬಿ.ಆರ್.
ವಿಧ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ
ಕುವೆಂಪು ವಿಶ್ವವಿದ್ಯಾಲಯ
ಶಂಕರಘಟ್ಟ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...