World Music Day ಐವತ್ತು ವರ್ಷಗಳಿಂದ ನಿರಂತರವಾಗಿ ಕಲಾ ಸೇವೆಯನ್ನು ಮಾಡುತ್ತ ಸಾವಿರಾರು ಜನ ಕಲಾವಿದರಿಗೆ ಸಂಗೀತದ ಶಿಕ್ಷಣವನ್ನು ಭದ್ರಾವತಿ ವಾಸು ನೀಡಿದ್ದಾರೆ ಎಂದು ಭಾವಗಾನ ತಂಡದ ಅಧ್ಯಕ್ಷ ಭುಜಂಗಪ್ಪ ಹೇಳಿದರು.
ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭದ್ರಾವತಿ ವಾಸು ಅವರಿಗೆ ಸನ್ಮಾನಿಸಿ ಮಾತನಾಡಿ, ಹಲವಾರು ವೇದಿಕೆಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು ಹಗಲಿರುಳು ಶ್ರಮಿಸಿದ ಭದ್ರಾವತಿ ವಾಸು ಅವರ ಸೇವೆಗೆ ಬೆಲೆಕಟ್ಟಲು ಆಗುವುದಿಲ್ಲ ಎಂದು ತಿಳಿಸಿದರು.
World Music Day ಮಥುರಾ ರಜತೋತ್ಸವ ಸಮಿತಿ ಸಂಚಾಲಕ ಎನ್.ಗೋಪಿನಾಥ್, ಭಾವಗಾನ ತಂಡ ಮತ್ತು ಎಸ್ ಎಸ್ ಕರೋಕೆ ಗ್ರೂಪ್ ವತಿಯಿಂದ ಭದ್ರಾವತಿ ವಾಸು ಅವರನ್ನು ಸನ್ಮಾನಿಸಲಾಯಿತು. ಸುಗಮ ಸಂಗೀತ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ವೃತ್ತಿಯ ಜೊತೆಗೆ ಸಂಗೀತವನ್ನು ಪ್ರವೃತ್ತಿಯಾಗಿ ಬಳಸಿಕೊಂಡು ನಿರಂತರವಾಗಿ ಸಂಗೀತ ಸೇವೆ ಮಾಡುತ್ತಾ ಬಂದಿದ್ದಾರೆ. ಅವರ ಕುಟುಂಬ ವರ್ಗದವರು ಅವರ ಕಾಂತಾರ ಚಲನಚಿತ್ರಕ್ಕೆ ಸಂಗೀತ ನೀಡಿರುವುದು ಇಲ್ಲಿ ಗಮನಾರ್ಹ ಎಂದು ನುಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಮಾತನಾಡಿ, ನಾವೆಲ್ಲ ವಾಸು ಅವರ ಗರಡಿಯಲ್ಲಿ ಪಳಗಿದವರು. ಅವರ ಸಂಗೀತ ಶಿಕ್ಷಣ ಇಂದು ರಾಜ್ಯದ ಮೂಲೆ ಮೂಲೆಗೂ ತಲುಪಿದೆ. ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಅಂದಿನಿಂದಲೂ ಇಂದಿನವರೆಗೂ ಸಹ ಕಲಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಭಿನಂದಿಸಿದರು.
ಭಾವಗಾನ ತಂಡದ ಕಾರ್ಯದರ್ಶಿ ಪ್ರಶಾಂತ್ ಹದಡಿ, ಉಪಾಧ್ಯಕ್ಷ ರವಿ ಚೌವಾಣ್, ಹೇಮಂತ್, ನವೀನ್ ಕುಮಾರ್, ಪರಶುರಾಮ್, ಲಕ್ಷ್ಮೀದೇವಿ ಗೋಪಿನಾಥ, ಮಥುರಾ ನಾಗರಾಜ್, ಆದ್ಯಾ, ಉಷಾ, ರವಿ, ರಾಜಶೇಖರ್, ಎಸ್ ಎಸ್ ಕರೋಕೆ ತಂಡದ ಪದಾದಿಕಾರಿಗಳು ಉಪಸ್ಥಿತರಿದ್ದರು. ನಂತರ ಸದಸ್ಯರಿಂದ ಹಳೆ ಚಿತ್ರ ಗೀತೆಗಳ ಕಾರ್ಯಕ್ರಮ ಜರುಗಿತು.
