District Consumer Disputes Redressal Commission ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೌರಾಪುರ ಅಜ್ಜಂಪುರದ ತಾಲಿಬ್ ಪಾಷ ಬಿನ್ ಅನ್ಸರ್ ಪಾಷ ಇವರು ಮಣಪುರಂ ಫೈನಾನ್ಸ್ ಲಿಮಿಟೆಡ್ ಶಿವಮೊಗ್ಗ, ಮುಜೀರ್‌ಪಾಷ, ಕೇರಾಫ್ ವಿನಸ್ ಆಟೋಮೊಬೈಲ್ಸ್ ಹಾಸನ ಮತ್ತು ರೀಜನಲ್ ಟ್ರಾನ್ಸ್ಪೋರ್ಟ್ ಅಥಾರಿಟಿ ಎಆರ್‌ಟಿಓ ತರೀಕೆರೆ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಲಾರಿ ಸಂಖ್ಯೆ: ಕೆ.ಎ.52-ಬಿ-4032ರ ಮಾಲೀಕರಾಗಿದ್ದು, 1 ನೇ ಎದುರುದಾರ ಹಣಕಾಸು ಸಂಸ್ಥೆಯಿಂದ ರೂ.8,30,000/- ಗಳ ಸಾಲವನ್ನು(ಲೋನ್ ಕಂ ಹೈಪೋಥಿಕೇಶನ್)ಪಡೆದಿದ್ದು, 52 ಇಎಂಐ ಕಂತುಗಳ ಮೂಲಕ ಸಾಲವನ್ನು ತೀರಿಸಲು ಒಪ್ಪಂದವಾಗಿರುತ್ತದೆ. ಮತ್ತು ದೂರುದಾರರು ಸಾಲವನ್ನು ಪಡೆಯುವಾಗ ಆರು ಬ್ಲಾಂಕ್ ಚೆಕ್‌ಗಳನ್ನು ಸಹ ನೀಡಿರುತ್ತಾರೆ. ತದನಂತರ ಲಾರಿಯು ಅಪಘಾತವಾಗಿದ್ದು, ಈ ಲಾರಿಯನ್ನು ಪೊಲೀಸ್‌ನವರು ವಶಕ್ಕೆ ಪಡೆದಿರುತ್ತಾರೆ. ದಿನಾಂಕ:20/02/2024 ರಂದು ಪೊಲೀಸ್‌ನವರಿಂದ ಲಾರಿಯನ್ನು ಬಿಡಿಸಿಕೊಂಡು ರಿಪೇರಿಗಾಗಿ ಬಿಟ್ಟಿದ್ದಾಗ ಎದುರುದಾರರು ಲಾರಿಯನ್ನು ತನ್ನ ಏಜೆಂಟರ ಮೂಲಕ ವಶಕ್ಕೆ ಪಡೆದಿರುತ್ತಾರೆ. ಆಗ ದೂರುದಾರರು ಎಆರ್‌ಟಿಓ ತರಿಕೇರೆ ರವರಿಗೆ ಪತ್ರವನ್ನು ಬರೆದು ಲಾರಿಯನ್ನು ಬೇರೆ ಯಾರ ಹೆಸರಿಗೂ ವರ್ಗಾಯಿಸಬಾರೆಂದು ತಿಳಿಸಿರುತ್ತಾರೆ.
1 ನೇ ಎದುರುದಾರರು ಲಾರಿಯನ್ನು ಸೀಜ್ ಮಾಡುವ ಮುಂಚಿತವಾಗಿ ಎದುರುದಾರರಿಗೆ ನೋಟಿಸನ್ನಾಗಲಿ ಅಥವಾ ನ್ಯಾಯಾಲಯದ ಆದೇಶವನ್ನಾಗಲಿ ತರದೇ ಲಾರಿಯನ್ನು ಸೀಜ್ ಮಾಡಿರುವುದು ಲೋನ್ ಕಂ ಹೈಪೋಥಿಕೇಶನ್ ಅಗ್ರಿಮೆಂಟ್‌ಗೆ ವಿರುದ್ದವಾಗಿದ್ದು, ಎದುರುದಾರರ ನಡೆಯಿಂದ ತಮಗೆ ಬಹಳ ಆರ್ಥಿಕ ನಷ್ಟ ಉಂಟಾಗಿರುವುದಾಗಿ ಮತ್ತು ತಾವು ರೂ.1,87,000/-ಗಳ ಸಾಲ ಕಟ್ಟಿದ್ದರು ಸಹ ಅಗ್ರಿಮೆಂಟ್ ವಿರುದ್ದವಾಗಿ ಲಾರಿಯನ್ನು ಸೀಜ್ ಮಾಡಿ 2 ನೇ ಎದುರುದಾರರಿಗೆ ಬಾಡಿಗೆ ರೂಪದಲ್ಲಿ ಲಾರಿಯನ್ನು ನೀಡಿರುವುದರಿಂದ ತಮಗೆ ಪ್ರತಿ ದಿನ ರೂ. 1,500/- ನಷ್ಟವಾಗುತ್ತಿರುವುದಾಗಿ ಮತ್ತು ಎದುರುದಾರರ ಈ ನಡೆಯನ್ನು ಸೇವಾ ನ್ಯೂನ್ಯತೆ ಎಂದು ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಷದವರ ವಾದ-ವಿವಾದಗಳನ್ನು ಆಲಿಸಿ 1 ನೇ ಎದುರುದಾರರು ದೂರುದಾರರಿಗೆ ಕಾನೂನು ರೀತ್ಯಾ ನೋಟಿಸ್ ಅನ್ನು ನೀಡದೆ ಲಾರಿಯನ್ನು ವಶಪಡಿಸಿಕೊಂಡು ಮಾರಿರುವುದರಿಂದ ಎದುರುದಾರರು ಸೇವಾ ನ್ಯೂನ್ಯತೆಯನ್ನು ಎಸಗಿರುವುದಾಗಿ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿ ಈ ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ದೂರುದಾರರ ವಶಕ್ಕೆ ಲಾರಿಯನ್ನು ನೀಡತಕ್ಕದ್ದು, ತಪ್ಪಿದಲ್ಲಿ ಈ ಆದೇಶವಾದ ದಿನಾಂಕದಿಂದ ಪ್ರತಿದಿನ ರೂ.1000/-ಗಳನ್ನು ದೂರುದಾರರ ವಶಕ್ಕೆ ಲಾರಿಯನ್ನು ನೀಡುವವರೆಗೂ ಪಾವತಿಸಬೇಕೆಂದು ಹಾಗೂ 1 ನೇ ಎದುರುದಾರರು ರೂ.20,000/- ಗಳನ್ನು ಮಾನಸಿಕ ವೇದನೆಗೆ ಹಾಗೂ ದೂರಿನ ಖರ್ಚು-ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನ ಸೇರಿಸಿ ಈ ಆದೇಶವಾದ ದಿನದಿಂದ ಪೂರಾ ಹಣ ಪಾವತಿಸುವವರೆಗೂ ಪಾವತಿಸಲು ಹಾಗೂ 2 ಮತ್ತು 3 ನೇ ಎದುರುದಾರರ ವಿರುದ್ಧ ದೂರನ್ನು ವಜಾ ಮಾಡಿರುವುದಾಗಿ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ದಿನಾಂಕ:5/6/20205 ರಂದು ಆದೇಶಿಸಿದೆ.
District Consumer Disputes Redressal Commission ಮಣಪುರಂ ಫೈನಾನ್ಸ್ ಸೇವಾ ನ್ಯೂನ್ಯತೆ: ಪರಿಹಾರ ನೀಡಲು ಆಯೋಗ ಆದೇಶ
Date:
