World Environment Day ಇಂದು ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್, ಜಾವಳ್ಳಿ ಹಾಗೂ ಬಯೋ ಡೈವರ್ ಸಿಟಿ ಫೌಂಡೇಶನ್ ಆಫ್ ರೋಟರಿ ಕ್ಲಬ್ಸ್ ಆಫ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಾಡಿಕೊಪ್ಪದಲ್ಲಿರುವ ರೋಟರಿ ಬಯೋ ಡೈವರ್ ಸಿಟಿ ಫಾರೆಸ್ಟ್ ಸ್ಥಳದಲ್ಲಿ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರತಿ ತರಗತಿಯಿಂದ ಆಯ್ಕೆಯಾದ ಮಕ್ಕಳಿಂದ ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಷನ್ ನ ನಿರ್ದೇಶಕರು ಹಾಗೂ ಶಿವಮೊಗ್ಗ ರೋಟರಿ ಸಂಸ್ಥೆಯ ಡಿ.ಆರ್.ಎಫ್.ಸಿ. ಗಳಾದ ಡಾ. ಪಿ. ನಾರಾಯಣ್ ಅವರು ಮಾತನಾಡುತ್ತಾ ” ಜ್ಞಾನದೀಪ ಶಾಲೆಯು ಮಕ್ಕಳಿಗೆ ಗಿಡನೆಡುವ, ಪೋಷಿಸುವ ಪರಿಸರದ ಜವಾಬ್ದಾರಿಯನ್ನು ಮೊದಲಿನಿಂದಲೂ ನೀಡುತ್ತಿದೆ. ಇಂದಿನ ಜನಾಂಗ ಸಂಪೂರ್ಣವಾಗಿ ಪ್ಲಾಸ್ಟಿಕ್ ಅನ್ನು ನಿಷೇಧಿಸಬೇಕು.” ಎಂದು ಹೇಳಿದರು.
ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಶನ್ ನ ಮತ್ತೋರ್ವ ನಿರ್ದೇಶಕರು ಹಾಗೂ ರೋಟರಿ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಹೆಚ್.ಎನ್.ಎಸ್.ರಾವ್ ಅವರು ಮಾತನಾಡುತ್ತಾ ” ಮುಂದಿನ ಜನಾಂಗದ ಆಸ್ತಿ ಇಂದಿನ ಮಕ್ಕಳು. ಮಕ್ಕಳಿಂದ ಗಿಡನೆಡುವ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ಇಂದು ಜ್ಞಾನದೀಪ ಶಾಲೆಯ ಆಯ್ಕೆಯಾದ ಮಕ್ಕಳು ಗಿಡಗಳನ್ನು ನೆಟ್ಟಿದ್ದು ನಮಗೆ ಸಂತೋಷವಾಗಿದೆ. ಈ ಪರಂಪರೆ ಇದೇ ರೀತಿ ಮುಂದುವರೆಯಲಿ. ತಾವು ನೆಟ್ಟ ಗಿಡಗಳ ಪಾಲನೆ – ಪೋಷಣೆಯನ್ನು ನೀವು ಜವಾಬ್ದಾರಿಯಿಂದ ಮಾಡಬೇಕೆಂದು ಮಕ್ಕಳಿಗೆ ಹೇಳಿದರು.
World Environment Day ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀ ಶ್ರೀಕಾಂತ್ ಎಮ್ ಹೆಗ್ಡೆ ಅವರು ಮಾತನಾಡುತ್ತಾ ” ಇಂದು ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್ ನ ಪ್ರತಿ ತರಗತಿಯಿಂದ ಆಯ್ಕೆಯಾದ 3 ರಿಂದ 14 ವರ್ಷದವರೆಗಿನ ಸುಮಾರು 50 ಮಕ್ಕಳಿಗೆ ರೋಟರಿ ಬಯೋಡೈವರ್ ಸಿಟಿ ಫಾರೆಸ್ಟ್ ಸ್ಥಳದಲ್ಲಿ ಗಿಡಗಳನ್ನು ನೆಡುವ ಒಂದು ಸುವರ್ಣ ಅವಕಾಶವನ್ನು ನೀಡಿದ ರೋಟರಿ ಸಂಸ್ಥೆಗೆ ಧನ್ಯವಾದ ತಿಳಿಸುತ್ತಾ, ಮಕ್ಕಳಿಗೆ ಇದೊಂದು ಅವಿಸ್ಮರಣೀಯ ಸಮಯ. ಈ ರೀತಿಯ ಕಾರ್ಯಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರಿಗೆ ಪರಿಸರ ಪ್ರಜ್ಞೆ ಮೂಡುತ್ತದೆ. ಪರಿಸರವನ್ನು ಕಾಪಾಡಿ ಜೀವಸಂಕುಲವನ್ನು ರಕ್ಷಿಸಬೇಕೆಂಬ ಮನೋಭಾವನೆ ಉಂಟಾಗುತ್ತದೆ. ಎಂದು ಹೇಳಿದರು.
ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೃಷ್ಣಪ್ರಸಾದ್ ಅವರು ಪರಿಸರ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಶಾಲೆಯ ಶಿಕ್ಷಕಿ ಶ್ರೀಮತಿ ವಿದ್ಯಾ ಪ್ರಾರ್ಥಿಸಿದರು. ಶಿಕ್ಷಕಿ ಪ್ರಿಯಾ ಸ್ವಾಗತಿಸಿದರು. ಶಾಲೆಯ ಶಿಕ್ಷಕ ಶ್ರೀ ಶ್ರೀಕಾಂತ್ ಗೋಸಾವಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಶನ್ ನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್. ನೀಲಕಂಠಮೂರ್ತಿ, ರೋಟರಿ ಟ್ರಸ್ಟ್ ಕಾರ್ಯದರ್ಶಿ ಶ್ರೀ ಆನಂದಮೂರ್ತಿ, ರೋಟೆರಿಯನ್ ಶ್ರೀ ಕೆ.ಪಿ.ಶೆಟ್ಟಿ , ಬಯೋಡೈವರ್ ಸಿಟಿ ಯೋಜನೆಯ ಅಧ್ಯಕ್ಷರಾದ ಶ್ರೀ ಉಮೇಶ್, ಟ್ರಸ್ಟ್ ಸದಸ್ಯರಾದ ಶ್ರೀ ವಿಜಯ್ ಕುಮಾರ್, ಶಾಲಾ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
World Environment Day ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಬೇಕು- ಡಾ.ಪಿ.ನಾರಾಯಣ್
Date:
