GMS Academy First Grade College ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತವು ಜಿ ಡಿ ಪಿ ಯಲ್ಲಿ ಅಮೆರಿಕ ಮತ್ತು ಚೈನಾ ಕ್ಕಿಂತ ಮುಂದಿದ್ದು ಭಾರತದ ರೂಪಾಯಿಯು ಅಮೆರಿಕದ ಡಾಲರಿನಂತೆ ಜಾಗತಿಕ ಚಲಾವಣಾ ಮೌಲ್ಯ ಹೊಂದುವ ಕಾಲ ಬರಬಹುದು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಹೇಳಿದರು.
ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ಪದವೀಧರರಿಗೆ ಬೀಳ್ಕೊಡುವ ಸಮಾರಂಭ ‘ಸಯನಾರಾ 2025’ ರ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಕೇವಲ ಹತ್ತು ವರ್ಷಗಳಲ್ಲಿ ತನ್ನ ಆರ್ಥಿಕ ಶಕ್ತಿಯನ್ನು ದ್ವಿಗುಣಗೊಳಿಸಿಕೊಂಡು ಜಪಾನನ್ನು ಹಿಂದಿಕ್ಕಿ 4.187 ಟ್ರಿಲಿಯನ್ ಡಾಲರು ಆರ್ಥಿಕ ಶಕ್ತಿಯಾಗಿ ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿರುವ ಭಾರತದ ಆಂತರಿಕ ನಿವ್ಹಳ ಉತ್ಪಾದನಾ ಸಾಮರ್ಥ್ಯವು ಚೀನ ಹಾಗೂ ಅಮೇರಿಕಾದಕ್ಕಿಂತ ಹೆಚ್ಚಾಗಿದ್ದು ಹೀಗೇ ಮುಂದುವರಿದಲ್ಲಿ ಭಾರತದ ರೂಪಾಯಿಗೆ ಡಾಲರ್ ನಂತೆ ಜಾಗತಿಕ ಚಲಾವಣಾ ಮೌಲ್ಯ ಬರುತ್ತದೆ, ಇದರ ಸಾಕಾರದಲ್ಲಿ ಭಾರತದ ಪದವೀಧರರ ಪಾತ್ರ ಮಹತ್ತರವಾಗಿದೆ, ದೇಶದಲ್ಲಿ ವಾರ್ಷಿಕ 15 ಲಕ್ಷದಷ್ಟು ತಾಂತ್ರಿಕ ಪದವೀಧರರು, 85 ಲಕ್ಷದಷ್ಟು ಸಾಮಾನ್ಯ ಪದವೀಧರರು ಹೊರ ಬರುತ್ತಿದ್ದು ಇವರೆಲ್ಲ ಉದ್ಯೋಗವನ್ನು ಅರಸುವುದಕ್ಕಿಂತ ಸ್ವಉದ್ಯೋಗಿಗಳಾಗಿ ಉತ್ಪಾದನಾ ರಂಗವನ್ನು ಅಭಿವೃದ್ಧಿಪಡಿಸಬೇಕು. ಶಿಕ್ಷಣದಿಂದ ಜ್ಞಾನವನ್ನೂ, ಅನುಭವದಿಂದ ಕೌಶಲವನ್ನೂ ಹೊಂದಿದಾಗ ಕೃತಕ ಬುದ್ಧಿಮತ್ತೆ ಯಂತಹ ಆಧುನಿಕ ತಂತ್ರಜ್ಞಾನವೂ ಸವಾಲು ಎನಿಸದೆ ಅಭಿವೃದ್ಧಿಗೆ ಸಹಕಾರಿ ಎನಿಸುತ್ತದೆ ಎಂದರಲ್ಲದೆ ಆರ್ಥಿಕ ಅಭಿವೃದ್ಧಿಯ ಭರದಲ್ಲಿ ಅಧ್ಯಾತ್ಮಿಕತೆಯನ್ನು ಮರೆಯಬಾರದು, ಅಧ್ಯಾತ್ಮ ಎಂದರೆ ತನ್ನನ್ನು ತಾನು ಅರ್ಥ ಮಾಡಿಕೊಂಡು ತನ್ನಂತೆ ಇತರರು ಎಂದು ಭಾವಿಸುವುದು ಧರ್ಮ ಎಂದರೆ ಇತರರಿಗೂ ಅನ್ಯಾಯವಾಗದಂತೆ ಬಾಳುವುದು ಎಂದರು.
GMS Academy First Grade College ಕಾಲೇಜಿನ ಪ್ರಾಂಶುಪಾಲೆ ಡಾ. ಶ್ವೇತಾ ಮರಿಗೌಡರ್ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವರ್ಗದ ಶಿವಕುಮಾರ್ ಜಿ ಜೆ, ಡಾ. ಸಂತೋಷ್ ಕುಮಾರ್ ಬಿ ಎಮ್, ಡಾ, ಗಂಗಾಧರ ಹೂಗಾರ್, ಪ್ರೊ. ರಮೀಜ್ ರಾಜಾ, ಪ್ರೊ. ರಾಜಶೇಖರ ಜಿ ಸಿ, ಪ್ರೊ. ಸವಿತಾ ಪಿ ಹೆಚ್, ಡಾ. ಶ್ವೇತಾ ಹೆಚ್ ಎಸ್, ಪ್ರೊ ಶಮೀನಾ ಅತ್ತರ್ ಮುಂತಾದವರು ಉಪಸ್ಥಿತರಿದ್ದು ಶ್ರೇಯಾ ಎಸ್ ಎಂ, ಪ್ರೇಕ್ಷಾ ಆರ್ ಯು ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯವನ್ನು ಪ್ರಾರ್ಥನಾ ಜಿ ಡಿ ಪ್ರಸ್ತುತಪಡಿಸಿದರೆ ಪ್ರಾರ್ಥನಾ ಗೀತೆಯನ್ನು ಸಿಂಚನಾ ಎಮ್ ಆಚಾರ್ಯ ಹಾಡಿದರು. ಪ್ರಗತಿ ಎನ್ ಜಿ ಸ್ವಾಗತ ಕೋರಿದರೆ ಮುಖ್ಯ ಅತಿಥಿಗಳ ಪರಿಚಯವನ್ನು ಎ.ತೇಜಸ್ವಿನಿ ಮಾಡಿದರು. ವಿದ್ಯಾರ್ಥಿಗಳ ಪರವಾಗಿ ಅಪೂರ್ವ ಮಾತನಾಡಿದರು. ವಿವಿಧ ಸ್ಪರ್ಧೆಗಳ ಬಹುಮಾನಗಳ ವಿತರಣೆಯ ನಂತರ ಪ್ರಕೃತಿ ಡಿ ಟಿ ವಂದನೆ ಸಲ್ಲಿಸಿದರು.
