Friday, December 5, 2025
Friday, December 5, 2025

DC Gurudatta Hegde ಪರಿಶಿಷ್ಠ ಜಾತಿ‌‌ ಒಳ ಮೀಸಲಾತಿ‌ ಸಮೀಕ್ಷಾರ್ಯ ಮೇ25 ರವರೆಗೆ ವಿಸ್ತರಣೆ- ಗುರುದತ್ತ ಹೆಗಡೆ

Date:

DC Gurudatta Hegde ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ರಚಿಸಲಾಗಿದ್ದು, ಪರಿಶಿಷ್ಟ ಜಾತಿಗಳ ವಿವಿಧ ಒಳಮೀಸಲಾತಿಯನ್ನು ವರ್ಗೀಕರಿಸಿ, ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶವನ್ನು ಸಂಗ್ರಹಿಸಲು ಕೈಗೊಳ್ಳಲಾದ ಸಮೀಕ್ಷೆಯ ಅವಧಿಯನ್ನು ಮೇ 25 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ತಿಳಿಸಿದ್ದಾರೆ.
ಮೇ. 05 ರಿಂದ 17ರವರೆಗೆ ನಡೆಯಲಿರುವ ಸಮೀಕ್ಷೆಯನ್ನು ಮೇ 25 ರವರೆಗೆ ಮುಂದುವರೆಸಲಾಗಿದ್ದು, ಈ ಸಮೀಕ್ಷಾ ಸಮಯದಲ್ಲಿ ಮನೆಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸುವುದರಿಂದ ಈ ದಿನಾಂಕಗಳAದು ಮನೆಯ ಹಿರಿಯ ಸದಸ್ಯರು ಹಾಜರಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಸಮೀಕ್ಷಾದಾರರಿಗೆ ನೀಡಿ ಸಹಕರಿಸುವಂತೆ ಅವರು ತಿಳಿಸಿರುತ್ತಾರೆ.
DC Gurudatta Hegde ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವ ದಿನಾಂಕ ಮೇ 05 ರಿಂದ 25, ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ದಿನಾಂಕ ಮೇ 26 ರಿಂದ 28 ಹಾಗೂ ಸ್ವಯಂ ಘೋಷಣೆ (ಆನ್‌ಲೈನ್ ಮೂಲಕ) ಅವಧಿ ಮೇ 19 ರಿಂದ 28ರವರೆಗೆ ಎಂದು ಅವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...