Bapuji Institute of Hi-Tech Education ಸಂಶೋಧನಾ ಸಾಕ್ಷಿ ಇಲ್ಲದ ಜ್ಞಾನಕ್ಕೆ ಬೆಲೆಯೇ ಇಲ್ಲ, ಯಾವುದೇ ಪದವಿಯಾಗಿರಲಿ ಮೂಲ ವಿಷಯದ ಬಗ್ಗೆ ಸಂಶೋಧನೆ ಬೇಕು ಎಂದು ಅಂತಾರಾಷ್ಟ್ರೀಯ ಶೈಕ್ಷಣಿಕ ವಿಶ್ಲೇಷಕ ಎ ಹೆಚ್ ಸಾಗರ್ ಅಭಿಪ್ರಾಯಪಟ್ಟರು.
ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ಬಿಕಾಂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಯಾವುದೇ ಅಧ್ಯಯನ ವಾಗಿರಲಿ ವಿಷಯದ ಮೇಲೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಅದು ಅರ್ಥವಾಗುತ್ತದೆ ಹಾಗೂ ಹೊಸ ಹೊಸ ಆಲೋಚನೆಗಳಿಗೂ ಎಡೆ ಮಾಡಿಕೊಡುತ್ತದೆ, ವಾಣಿಜ್ಯದಿಂದ ವಿಜ್ಞಾನದ ವರೆಗೆ ಎಲ್ಲ ವಿಷಯಗಳೂ ತತ್ವಜ್ಞಾನದ ಆಧಾರಿತವೇ ಆಗಿರುತ್ತದೆ, ಭಾರತದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳಿಗೆ ಕೊರತೆ ಇಲ್ಲ ಆದರೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಸಂಶೋಧನೆಗಳು ನಮ್ಮಲ್ಲಿ ವಿರಳವಾಗುತ್ತಿವೆ. ಪ್ರತಿ ವಿಷಯಗಳನ್ನೂ ಪ್ರತ್ಯೇಕಿಸಿ ನೋಡುವುದಕ್ಕಿಂತ ಅವುಗಳ ನಡುವಿನ ಸಂಬಂಧವನ್ನು ಅರಿತಲ್ಲಿ ಹೊಸ ಹೊಸ ಆಲೋಚನೆಗಳು ಹೊಳೆಯುತ್ತವೆ. ಯುದ್ಧ ಹಾಗೂ ರಕ್ಷಣೆಯ ವಿಚಾರವನ್ನು ವಾಣಿಜ್ಯ ವಿದ್ಯಾರ್ಥಿಗಳೂ ಅಧ್ಯಯನ ಮಾಡಬೇಕು ಕಾರಣ ಯುದ್ಧವು ವಾಣಿಜ್ಯೋದ್ಯಮದ ಮೇಲೆ ಸಹಾ ಪರಿಣಾಮ ಮಾಡುತ್ತದೆ. ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ 1,800 ಟೆರಾ ಬೈಟ್ ನಷ್ಟು ವ್ಯರ್ಥ ಡಾಟಾಗಳು ಹಾಗೂ ಪ್ರತಿ ನಿಮಿಷಕ್ಕೆ 1,36,000 ವ್ಯರ್ಥ ವಾಟ್ಸಪ್ ಸಂದೇಶಗಳು ಮೊಬೈಲ್ ಫೋನ್ ಗಳಲ್ಲಿ ಹರಿದಾಡುತ್ತವೆ.
ಆಧುನಿಕ ತಂತ್ರಜ್ಞಾನಗಳನ್ನು ವಿಧಾಯಕ ಕಾರ್ಯಗಳಿಗೆ ಬಳಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
Bapuji Institute of Hi-Tech Education ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಚೇರ್ಮನ್ ಅಥಣಿ ಎಸ್ ವೀರಣ್ಣನವರು ಭವಿಷ್ಯ ಯಾವತ್ತೂ ಒಳ್ಳೆಯದೇ ಇರುತ್ತದೆ ಅದನ್ನು ಸಾಧಿಸಿಕೊಳ್ಳುವುದು ಪ್ರಯತ್ನಿಶೀಲತೆಯ ಮೇಲಿದೆ, ಭಾರತ ಅತ್ಯಂತ ಬಲಿಷ್ಠ ರಾಷ್ಟ್ರ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ, ವಾಣಿಜ್ಯ ಪದವಿಗೆ ಬೇಡಿಕೆಯು ಹಾಗೂ ಭವಿಷ್ಯ ಇದ್ದೇ ಇದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ ವೀರಪ್ಪನವರ ಉಪಸ್ಥಿತಿಯಲ್ಲಿ ನಿರ್ದೇಶ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಸ್ವಾಗತ ಕೋರಿದರು. ಅರ್ಚನಾ ಹಾಗೂ ಅನಿಲ್ ಅತ್ತರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸಹನಾ ಜಿ ಬಿ ಹಾಡಿದರೆ ಅತಿಥಿಗಳ ಪರಿಚಯವನ್ನು ಪವನ್ ಡಿ ಅಲ್ಫಿಜಾ ಮಾಡಿದರು.
ಕುಂಕುಮ್ ವಿ ವೈದ್ಯ ವರದಿ ವಾಚನ ಮಾಡಿದರೆ ಪ್ರತಿಭಾ ಪುರಸ್ಕಾರ ಹಾಗೂ ಪದವಿ ಪ್ರದಾನವನ್ನು ಪ್ರೊ. ನಾಗರಾಜ ಎಂ ಎಸ್, ಪ್ರೊ. ಶ್ವೇತಾ ಬಿ ವಿ ನಿರ್ವಹಿಸಿದರು. ಪ್ರತಿಜ್ಞಾವಿಧಿಯನ್ನು ಪ್ರೊ. ಜ್ಞಾನೇಶ್ವರ ಆರ್ ಸುಳಕೆ ಬೋಧಿಸಿದರು. ಬೋಧಕ ವರ್ಗದ ಲತಾ ಓ ಎಚ್, ಮಂಜುಳಾ ಎ ಎನ್, ನರೇಂದ್ರ ಡಿ ಆರ್, ಪ್ರಜ್ವಲ್ ಎ ಆರ್ ಉಪಸ್ಥಿತರಿದ್ದು ಮಂಜುನಾಥ್ ಬಿ ಬಿ ವಂದನೆಗಳನ್ನು ಸಮರ್ಪಿಸಿದರು.
-ಚಿತ್ರ ಹಾಗೂ ವರದಿ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-
