Saturday, December 6, 2025
Saturday, December 6, 2025

City Institute of Bangalore ಇಂದು ಒತ್ತಡದ ಪ್ರಪಂಚದಲ್ಲಿ ಪರಸ್ಪರ ಒಡನಾಟ ಕಡಿಮೆಯಾಗುತ್ತಿದೆ- ಬಿ.ಜಿ.ಧನರಾಜ್

Date:

City Institute of Bangalore ಸಂಘ ಸಂಸ್ಥೆಗಳ ಪ್ರಗತಿಗೆ ಕಾರಣರಾದ ಹಿರಿಯರು, ಮಾಜಿ ಅಧ್ಯಕ್ಷರು ಗೌರವಿಸುವುದರಿಂದ ಇತರರಿಗೂ ಪ್ರೇರಣೆ ದೊರೆಯುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಹೇಳಿದರು.

ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಆಯೋಜಿಸಿದ್ದ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಒತ್ತಡದ ಪ್ರಪಂಚದಲ್ಲಿ ಪರಸ್ಪರರಲ್ಲಿ ಒಡನಾಟ ಕಡಿಮೆಯಾಗುತ್ತಿದೆ. ಕಷ್ಟ ಸುಖ ಭಾವನೆಗಳನ್ನು ಹಂಚಿಕೊಳ್ಳಲು ಸಮಯವೇ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ 58 ವಸಂತಗಳನ್ನ ಮುಗಿಸಿದ ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷರ ಅನುಭವ ಹಾಗೂ ಸಾಧನೆ ಇಂದಿಗೂ ಸಹ ದಾರಿ ದೀಪವಾಗಿದೆ ಎಂದು ನುಡಿದರು.

ಈಗಾಗಲೇ ನಮ್ಮ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಫ್ರೆಂಡ್ಸ್ ಸೆಂಟರ್ ಸಂಸ್ಥೆಗೆ ತಮ್ಮ ಕಾಲಾವಧಿಯಲ್ಲಿ ವಿಶೇಷವಾದ ಸೇವೆ ಸಲ್ಲಿಸುವುದರ ಮುಖಾಂತರ ಸಂಸ್ಥೆ ಗೌರವವನ್ನು ಹೆಚ್ಚಿಸಿ ಫ್ರೆಂಡ್ಸ್ ಸೆಂಟರ್‌ನ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶ್ರೀನಿಧಿ ವೆಂಕಟೇಶ್ ಮಾತನಾಡಿ, ಸಂಸ್ಥೆ ಇದುವರೆಗೂ ಮಾಡಿದ ಕಾರ್ಯ ಸಾಧನೆಗಳ ಬಗ್ಗೆ ಸಭೆಗೆ ವಿವರಿಸಿದರು. ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಅವರು ಸಂಸ್ಥೆಯ ಸಾಧನೆ ಬಗ್ಗೆ ತಿಳಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಾಜಿ ಅಧ್ಯಕ್ಷ ಎಸ್ ದತ್ತಾತ್ರಿ ಅವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.

City Institute of Bangalore ಮಾಜಿ ಅಧ್ಯಕ್ಷರಾದ ಟಿ.ಎನ್.ಲಕ್ಷ್ಮೀಕಾಂತ್, ಡಿ.ಆರ್.ಅನಂತರಾಮ್, ಎಸ್.ಆರ್.ವೆಂಕಟರಾಮ್, ಸುಮಾ ಭಾಸ್ಕರ್ ಸನ್ಮಾನ ಸ್ವೀಕರಿಸಿ ತಮ್ಮ ಅನುಭವಗಳನ್ನ ಹಂಚಿಕೊಂಡರು.

ಸಮಾರಂಭದಲ್ಲಿ ಎಚ್.ಕೆ.ಲೋಕೇಶ್, ಸುರೇಶ್ ಬಾಬು, ಮಲ್ಲಿಕಾರ್ಜುನ ಕಾನೂರು, ಸುನಂದಾ ವಿ ಮೂರ್ತಿ, ಜಿ.ವಿಜಯಕುಮಾರ್, ಜಿ.ಸತ್ಯನಾರಾಯಣ್, ಡಿ.ಪಿ.ಮೋಹನ್, ಮೋಹನ್, ಗುರುನಾಥ್, ಡಾ. ರಂಜನಾ ಧನರಾಜ್, ಶ್ರೀ ರಂಜಿನಿ ದತ್ತಾತ್ರಿ, ಕೀರ್ತನಾ ದತ್ತಾತ್ರಿ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...