Monday, December 8, 2025
Monday, December 8, 2025

Klive Special Article ಕೆ ಲೈವ್ ಸಂಪಾದಕೀಯ ಪೊಲೀಸ್ ಇಲಾಖೆ ಇತ್ತಲೂ ಗಮನ ಹರಿಸಲಿ

Date:

Klive Special Article ಮಾಲಿನ್ಯಗಳ ಬಗ್ಗೆ ನಮ್ಮಲ್ಲಿ‌ಎಷ್ಟು ಬಗೆಯ ಚರ್ಚೆಗಳು ನಡೆಯುತ್ತವೆ. ಅವೆಲ್ಲ‌ ಕೇವಲ ಬೌದ್ಧಿಕ‌ ಮಟ್ಟದಲ್ಲೇ ಹೊರಳಾಡುತ್ತವೆ. ಒಂದು ತಾರ್ಕಿಕ ಅಂತ್ಯ ಕಾಣುವುದೇ ಇಲ್ಲ.
ಪ್ರತಿಯೊಂದಕ್ಕೂ ಕಾನೂನು ಮಾಡಬೇಕು ಎನ್ನುವವರು ನಾವೆ.
ಅದನ್ನ ಸೂಕ್ತವಾಗಿ ಪಾಲಿಸದೇ ಇರುವವರೂ ನಾವೆ.
ಇದೆಂಥ ವಿಪರ್ಯಾಸ.?

ಈಗ ನಗರ ಪಟ್ಟಣಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗಿದೆ.
ಓಡಾಡುವ ಜನಕ್ಕಿಂತ ವಾಹನಗಳ ಸಂಚಾರವೇ ಜಾಸ್ತಿ.

ಶಿವಮೊಗ್ಗದಲ್ಲಿ ಹೇಳುವುದಾದರೆ ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ , ಅಶೋಕ ವೃತ್ತ, ಶೀನಪ್ಪ ಶ್ರೇಷ್ಠಿ ವೃತ್ತ,
ತುಂಗಾ ಸೇತುವೆ ಬಳಿಯ ಶಂಕರಮಠ ವೃತ್ತ. ಹೀಗೆ ಸಂಚಾರಿ ದೀಪ ನಿಯಂತ್ರಕವಿದ್ದರೂ ಚಾಲಕರಿಗೆ ನಿಲ್ಲಿಸಲೂ ವ್ಯವಧಾನವಿಲ್ಲ. ಒಂದೇ ಸಮನೆ ಹಾರ್ನ್ ಮಾಡಿ ಕಿವಿಗಡಚಿಕ್ಕುತ್ತಾರೆ.
ಈ ವಾಹನಗಳ ಹಾರ್ನ್ ಗಳೋ ಒಂದೊಂದೂ ಭಿನ್ನಭಿನ್ನ. ಆದರೆ ಕೇಳುವ ಬಡಪಾಯಿ ನಮ್ಮ ಕಿವಿ ಒಂದೆ.

ಇಲ್ಲಿ ಮುಖ್ಯವಾಗಿ ಹೇಳಬೇಕಾಗಿರುವುದು ಕರ್ಕಶತೆ. ಅದೇನು ಶಬ್ದ,? ಅದೇನು ಯಾತನೆ? ಅಬ್ಬಬ್ಬಾ ಎನಿಸಿಬಿಡುತ್ತದೆ. ಅನವಶ್ಯಕವಾಗಿಯೂ ಕರ್ಕಶ ಹಾರ್ನ್ ಮಾಡುತ್ತಾ ಸಾಗುವ ಚಾಳಿ ಈಚೆಗೆ ಜಾಸ್ತಿಯಾಗಿದೆ. ಅದೇನು ಅವರ ಇಷ್ಟವೋ ಗೊತ್ತಿಲ್ಲ.
ಈ ಬಗ್ಗೆ ಜಿಲ್ಲಾ ಪೊಲೀಸ್ ಅನಾವಶ್ಯಕ ಹಾರ್ನ್ ಮಾಡಿ ವಾಹನ ಸಂಚರಿಸುವುದನ್ನ ನಿಷೇಧಿಸಿದೆ. ಅದನ್ನ ಪಾಲಿಸುವುದು ಸಾರ್ವಜನಿಕರಾದ ವಾಹನ ಮಾಲೀಕರು, ಚಾಲಕರ ಕರ್ತವ್ಯ. ಅದೇ ಕರ್ಕಶತೆ ನಮ್ಮ ಕಿವಿಗೂ ಬಿದ್ದರೆ ಹೇಗಿರುತ್ತದೆ? ಎಂಬುದನ್ನ ಚಾಲಕರು ಯೋಚಿಸಬೇಕು.
ಈ ಬಗ್ಗೆ ಈ ಹಿಂದೆ ಪೊಲೀಸ್ ಅಧಿಕಾರಿಗಳೊಬ್ಬರು
ಬಸ್ ಚಾಲಕನನ್ನು ಕೆಳಗಿಳಿಸಿ ಅವನ ಬಸ್ಸಿನ ಹಾರ್ನ್ ಆತನ ಕಿವಿಗೇ ಕೇಳಿಸುವ ಶಿಕ್ಷೆ ನೀಡಿದ್ದರು. ಆದರೂ ನಮ್ಮವರಿಗೆ ಬುದ್ಧಿ ಬಂದಿಲ್ಲ. ಇದು ವಾಹನ ಸಂಚಾರದ ಬಗ್ಗೆ ನಾವು ಪಡುತ್ತಿರುವ ಮಾಲಿನ್ಯ ಶಿಕ್ಷೆ.

ಆದರೆ ಇನ್ನೂ ಒಂದಿದೆ. ಅದೇ ಪಾರ್ಟಿ ಹಾಲ್, ಹೋಟೆಲ್ ಗಳು, ಕಲ್ಯಾಣ ಮಂಟಪಗಳಲ್ಲಿ ತಡರಾತ್ರಿ ಹಾಕುವ “ಸ್ಪೀಕರ್ “ಗಳಿಗೆ ಜೋಡಿಸಿದ “ಊಫರ್” ಗಳ ಬಲವಂತ ಶಿಕ್ಷೆ, ಹ್ಯರಾಸ್ ಮೆಂಟ್ ಅಂದರೂ ತಪ್ಪಲ್ಲ.

Klive Special Article ಮಾಧ್ಯಮಕ್ಕೆ ಬಂದಿರುವ ಸಾರ್ವಜನಿಕ ದೂರುಗಳ ಪ್ರಕಾರ
ಮನೆಗಳಿರುವ ಬಡಾವಣೆಗಳಲ್ಲಿ‌ ಕೆಲವೆಡೆ ಪಾರ್ಟಿ ಹಾ್ ಇದೆ. ಉದಾ: ಹರ್ಷ ದಿ ಫರ್ನ್ ಹೋಟೆಲ್ ‌ಇರುವ ಪುರದಾಳ್ ಕ್ರಾಸ್ ನಲ್ಲಿ‌ ಈ‌ಪಾರ್ಟಿಹಾಲ್ ಇದೆ. ಅಲ್ಲಿ‌ ತಿಂಗಳಲ್ಲಿ‌ ಒಂದಿಲ್ಲೊಂದು ಸಮಾರಂಭ ಜರುಗುತ್ತದೆ. ಅಲ್ಲಿ‌ ಸ್ಪೀಕರ್ ಗೆ ಊಫರ್ ಜೋಡಿಸಿ ಬಡಾವಣೆಗಳ ಜನರ ನಿದ್ರೆಗೆ ಭಂಗ, ಶಾಂತಿ ನೆಮ್ಮದಿಗೆ ಸಂಚಕಾರ ಬಂದುಬಿಟ್ಟಿದೆ.

ನಿವಾಸಿಗಳ ಮುಖಂಡರು ಸ್ವತಹಜ ಅಲ್ಲಿಗೆ
ಹೋಗಿ ಮೈಕ್ ಹಾಕಿಕೊಳ್ಳಿ, ಆದರೆ ಊಫರ್ ಜೋಡಿಸಬೇಡಿ ಅಂತ ಸೌಜನ್ಯ ತೋರಿ‌ಹೇಳಿದರೆ,ಅದಕ್ಕೂ ಜಗ್ಗದ ಅಲ್ಲಿಯ‌ ಆಸಾಮಿ “ಮೈಕ್ ಸೆಟ್ಟಿಗೆ, ಕಾರ್ಯಕ್ರಮಕ್ಕೆ ದುಡ್ಡು ಕೊಟ್ಟರ್ತೀವಿ. ನಿಮ್ಮದೊಳ್ಳೆ ಆಯ್ತಲ್ಲ” ಎಂಬ ಧಿಮಾಕಿನ ಉತ್ತರ ನೀಡಿದ್ದಾರೆ.

ಇದರ ಬಗ್ಗೆ ಎಸ್ ಪಿ ಅವರಿಗೆ, ತುಂಗಾನಗರ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಈ‌
ಪಾರ್ಟಿಹಾಲ್ ತನ್ನದೇ ವರಸೆಯಲ್ಲಿ ನಡೆಯುತ್ತಿದೆ.
ಈ ಬಗ್ಗೆ ಮೋದಿ ಅವರ ಪಿಎಂ ಆ್ಯಪ್‌ಗೂ ದೂರು‌ನೀಡಿ ಅದು ಜಿಲ್ಲಾ ಪೊಲೀಸ್ ಕಾರ್ಯಾಲಯಕ್ಕೆ ಬಂದು ,ಅಲ್ಲಿಂದ ಸಿಬ್ಬಂದಿ ಆಗಮಿಸಿ ಇರುವ ಸಹಜ ತೊಂದರೆ ಒಪ್ಪಿದರು
ಮಹಜರ್ ನಡೆಸಿ ಪಾರ್ಟಿಹಾಲ್ ಮುಖಂಡರಿಂದ ಮುಚ್ಚಳಿಕೆ ಬರೆಸಿಕೊಂಡರು. ಆದರೆ ಅದೆಲ್ಲಾ ನೀರಲ್ಲಿ ಹೋಮ ಮಾಡಿದಂತಾಗಿದೆ.
ಇನ್ನ ಅಲ್ಲಿನ ಹೋಟೆಲ್ ನಲ್ಲೂ ಇದೇ ಪಾಡು. ಹತ್ತಿರದ ನಿವಾಸಿಗಳು
ಶಾಂತಿಯಿಂದ ಇರುವಂತಿಲ್ಲ.ಮೆರವಣಿಗೆ ಬರುವವರು ಮನೆಗಳ ಮುಂದೆಯೇ ಸಾಗಬೇಕು. ಆದರೆ ಅಲ್ಲಿಯೇ ನಿಂತು ಕುಣಿದು ಕುಪ್ಪಳಿಸುತ್ತಾರೆ. ಬ್ಯಾಡ್ ಸೆಟ್ಟಿನ ಭಯಂಕರ ಮಟ್ಟುಗಳನ್ನ ಎದೆ ಬಿಗಿ ಹಿಡಿದು ಬಲವಂತ ಕೇಳಬೇಕು. ಗೃಹಿಣಿಯರು ಈ ಬಗ್ಗೆ
ಹೇಳಿದರೆ ಅವರ ಮೇಲೇಯೇ ರೇಗುತ್ತಾರಂತೆ. ಈ ಬಗ್ಗೆ ಮಹಿಳೆಯರು ಮಾಧ್ಯಮಗಳ ಮುಂದೆ ಮಾತಾಡಿದ್ದಾರೆ.

ಇಲ್ಲಿರುವ ಪ್ರಶ್ನೆ ಎಂದರೆ. ಅನಾವಶ್ಯಕ ಹಾರ್ನ್ ಮಾಡುವುದನ್ನ ನಿಷೇಧಿಸಿದ ಪೊಲೀಸ್ ಇಲಾಖೆಯು ಬಡಾವಣೆಗಳಲ್ಲಿನ ಅನಾವಶ್ಯಕ ಶಬ್ದ ಮಾಲಿನ್ಯದ ಬಗ್ಗೆ ಏಕೆ ಕ್ರಮ ಕೈಗೊಳ್ಳುವುದಿಲ್ಲ.?
112 ಕ್ಕೆ ಪ್ರತೀ ಬಾರಿಯೂ ಫೋನಾಯಿಸುವುದು. ದೀಪದ ಗೂಟದ ವ್ಯಾನು ಬರುವುದು. ಸಿಬ್ಬಂದಿ ಅಲ್ಲಿಗೆ ಹೋಗಿ ಎಚ್ಚರಿಸುವುದು. ಎದುರಿಗೆ ಇರುವಷ್ಟು ಹೊತ್ತು‌ಶಬ್ದ ಕಡಿಮೆಗೊಳಿಸುವುದು. ಅವರು ವಾಪಸ್ ಹೋದ ನಂತರ ಮತ್ತೆ ಯಥಾರೀತಿ ಡಬಡಬ ಊಫರ್ ಶಿಕ್ಷೆ. 112 ವ್ಯಾನ್ ಸಿಬ್ಬಂದಿ ಈ ಪಾರ್ಟಿಹಾಲ್,ಹೋಟೆಲ್ ಮಂದಿಗೆ ಪರಿಣಾಮಕಾರಿಯಾಗಿಲ್ಲ ಎಂಬ ಸತ್ಯ ಸಾರ್ವಜನಿಕರಿಗೆ ಗೊತ್ತಾಗಿಬಿಟ್ಟಿದೆ.

ಹೋಟೆಲ್ ಓರ್ವ ಪ್ರತಿಷ್ಠಿತರದ್ದೆ? ಪಾರ್ಟಿ ಹಾಲ್ ಕೂಡ
ಓರ್ವ ವಿಐಪಿಗೆ ಸಂಬಂಧಿಸಿದೆಯೆ? ಎಂಬ ಸಂದೇಹ ಅನಾವಶ್ಯಕ ಸಾರ್ವಜನಿಕರನ್ನ ಕಾಡುತ್ತಿದೆ.
ಈಗ ಪರಿಹಾರ ನೀಡುವವರು ಯಾರು?
ಇಷ್ಟೆಲ್ಲ ಬರೆಯಲು
ಪೊಲೀಸ್ ಇಲಾಖೆಯು ಖಾತೆಯಲ್ಲಿ ಪೋಸ್ಟ್ ಮಾಡಿದ ಎಚ್ಚರಿಕೆ ಸಂದೇಶ ಓದಿದ ನಂತರ ಅನಿಸಿತು.
ಈ ಪೋಸ್ಟ್ ಅನಾವಶ್ಯಕ ಅಲ್ಲ. ಸಂದೇಶಕ್ಕೆ ಬೆಲೆಯಿದೆ. ಆದರೆ ಬಡಾವಣೆಯೊಳಗಿನ ಜನತೆಯ ಇಂಗಿತವನ್ನೂ ಅದೇ ರೀತಿ ಅರ್ಥೈಸಿ, ಸ್ಪಂದಿಸಬೇಕಲ್ಲವೆ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ವಿಧಾನಸಭೆ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜು.

CM Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಳಿಗಾಲದ ಅಧಿವೇಶನದ ಪ್ರಯುಕ್ತ ಸುವರ್ಣ...

Shimoga News ಜೀವರಕ್ಷಣಾ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು- ಸೀಮಾ ಆನಂದ್

Shimoga News ಜೀವ ರಕ್ಷಿಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ಅತ್ಯಂತ...

Gurudutt Hegde ಧ್ವಜವಂತಿಗೆ ನೀಡುವ ಮೂಲಕ ನಿವೃತ್ತ ಸೈನಿಕರಿಗೆ & ಅವರ ಅವಲಂಬಿತರಿಗೆ ನೆರವಾಗೋಣ- ಗುರುದತ್ತ ಹೆಗಡೆ

Gurudutt Hegde ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ...

D S Arun ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿ ಶಾಸಕ ಡಿ.ಎಸ್.ಅರುಣ್ ಆಯ್ಕೆ.

D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ...