Saturday, May 30, 2026
Saturday, May 30, 2026

Sri Shivananda Bharati Chintamani Swami ಹೊಸಪೇಟೆಯಲ್ಲಿ ಶಂಕರ ವರ್ಧಂತಿ ವಿಶೇಷ ಶಂಕರ ಸ್ತೋತ್ರ ಪಠಣ ಸಮರ್ಪಣೆ

Date:

Sri Shivananda Bharati Chintamani Swami ಶ್ರೀಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮಿಗಳ ಪಾವನ ಸಾನ್ನಿಧ್ಯದಲ್ಲಿ, ಶಂಕರ ವರ್ಧಂತಿಯ ಎರಡನೇ ದಿನದ ಬೆಳಿಗ್ಗೆ ಶಂಕರ ಸ್ತೋತ್ರ ಪಠಣ ಸಮರ್ಪಣೆಯು ಯಶಸ್ವಿಯಾಗಿ ಸಂಪನ್ನವಾಯಿತು.

ಹೊಸಪೇಟೆಯ ಮಹಿಳೆಯರು ಕೇವಲ 20 ದಿನಗಳಲ್ಲಿ ಶ್ರೀ ಶಂಕರಾಚಾರ್ಯರು ರಚಿಸಿದ 32 ಸ್ತೋತ್ರಗಳನ್ನು ಕಲಿತರು. ಅವರು 29-04-2025 ರಂದು ಇಲ್ಲಿಯ ಚಿಂತಾಮಣಿ ಮಠದ ಶ್ರೀ ಕಾಶಿ ಸುಬ್ರಹ್ಮಣ್ಯ ಚಿಂತಾಮಣಿ ಸ್ವಾಮೀಜಿಯವರ ಅನುಷ್ಟಾನ ಮಂದಿರದಲ್ಲಿ, ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಬೆಳಿಗ್ಗೆ 11 ಘಂಟೆಯಿಂದ ಮೂರು ಗಂಟೆಗಳ ಕಾಲ ಕಲಿತ ಎಲ್ಲ ಸ್ತೋತ್ರಗಳನ್ನು ಪಠಿಸಿ ಶ್ರೀ ಶಂಕರಾಚಾರ್ಯರಿಗೆ ಸಮರ್ಪಿಸಿದರು.

ಈ ಭಾಗದಲ್ಲಿಯೇ ಇದೇ ಮೊಟ್ಟಮೊದಲ ಬಾರಿಗೆ ಕೇವಲ 20 ದಿನಗಳ ಅಭ್ಯಾಸದಿಂದ, ಮಹಿಳೆಯರು ಒಟ್ಟಾಗಿ ಸೇರಿ 32 ಕಠಿಣ ಸ್ತೋತ್ರಗಳನ್ನು ಕಲಿತು ಅನುಷ್ಠಾನ ಮಂದಿರದಲ್ಲಿ ಸಮರ್ಪಿಸುವುದರ ಮೂಲಕ ಶ್ರೀ ಶಂಕರರ ಆಶೀರ್ವಾದಕ್ಕೆ ಪಾತ್ರರಾದರು.

ಈ ವಿಶೇಷ ಕಾರ್ಯಕ್ರಮವು ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿಗಳ ನೇತೃತ್ವದಲ್ಲಿ, ಬೆಳಿಗ್ಗೆ ಶ್ರೀ ಕಾಶಿ ವಿಶ್ವೇಶ್ವರನ ದರ್ಶನ ಮತ್ತು ಪೂಜೆ ಮೂಲಕ ಪ್ರಾರಂಭವಾಯಿತು. ಸುಮಾರು 3 ಗಂಟೆಗಳ ಅವಧಿಯಲ್ಲಿ ಆಯ್ದ 32 ಶಂಕರ ಸ್ತೋತ್ರಗಳನ್ನು ಪಠಿಸಿ, ಸಮರ್ಪಣೆ ಮಾಡಿ, ಶ್ರೀ ಸ್ವಾಮೀಜಿಗಳ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಲಾಯಿತು.

Sri Shivananda Bharati Chintamani Swami ಈ ಕಾರ್ಯಕ್ರಮದಲ್ಲಿ ಸುಮಾರು 25 ಮಹಿಳೆಯರು ಭಾಗವಹಿಸಿದ್ದರು.ಯಶಸ್ವಿಯಾಗಿ ನೆರವೇರಲು ಕಾರಣರಾದ ಎಲ್ಲಾ ಮಹಿಳೆಯರಿಗೆ ಧನ್ಯವಾದಗಳನ್ನು ತಿಳಿಸಿದರು.

ವರದಿ: ಮುರಳೀಧರ್ ನಾಡಿಗೇರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Mining Geology ಅಕ್ರಮ ಮರಳುಗಾರಿಕೆ ದಂಧೆ: ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ.

Department of Mining Geology ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತ...

Breaking News ಬೇಲಿ ಜಗಳ: ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ.

Breaking News ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದಲ್ಲಿ ರಸ್ತೆ...