Tuesday, August 25, 2026
Tuesday, August 25, 2026

Sahyadri Narayan Multispeciality Hospital ಏಪ್ರಿಲ್ 17 ಎನ್ ಹೆಚ್ ಆಸ್ಪತ್ರೆಯಿಂದ ” ಸರ್ವೈವರ್ಸ್ ಕ್ಲಿನಿಕ್” ಕ್ಯಾನ್ಸರ್ ವಾಸಿಯಾದವರಿಗಾಗಿ ಸಮಾಲೋಚನೆ ಚಟುವಟಿಕೆ

Date:

Sahyadri Narayan Multispeciality Hospital ಶಿವಮೊಗ್ಗ, ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು, ಕ್ಯಾನ್ಸರ್‌ನಿಂದ ಗುಣಮುಖರಾದವರಿಗಾಗಿ (ಸರ್ವೈವರ್ಸ್) ತನ್ನ ಮಾಸಿಕ ‘ಸರ್ವೈವರ್ಸ್ ಕ್ಲಿನಿಕ್ ‘ ಅನ್ನು ಏಪ್ರಿಲ್ 17 ರಂದು ಮಧ್ಯಾಹ್ನ 2:00 ರಿಂದ 4:00 ಗಂಟೆಯವರೆಗೆ ಆಸ್ಪತ್ರೆಯ ಹರಕೆರೆ ಆವರಣದಲ್ಲಿ ಆಯೋಜಿಸಿದೆ.

ಈ ವಿಶೇಷ ಸಮಾಲೋಚನಾ ಕಾರ್ಯಕ್ರಮದಲ್ಲಿ, ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಭಟ್ ಕೆ. ಅವರು ಮಧ್ಯಾಹ್ನ 2:00 ಗಂಟೆಗೆ “ಕ್ಯಾನ್ಸರ್ ನಂತರದ ನೆಮ್ಮದಿ ಮತ್ತು ಸಂತಸ: ಭಾವನಾತ್ಮಕ ಏರಿಳಿತಗಳ ನಿರ್ವಹಣೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ವಿಭಾಗದ ವೈದ್ಯೆ ಡಾ. ಅಪರ್ಣಾ ಶ್ರೀವತ್ಸ ಅವರು ಕ್ಯಾನ್ಸರ್ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವವರಿಗೆ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆ ನಡೆಸಿಕೊಡಲಿದ್ದಾರೆ.

ಈ ಕ್ಲಿನಿಕ್‌ನಲ್ಲಿ ಭಾಗವಹಿಸಲು ಆಸಕ್ತರು ಎನ್‌ಎಚ್ ಕೇರ್ ಆ್ಯಪ್ (NH Care App) ಮೂಲಕ ಅಥವಾ 18003090309 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

Sahyadri Narayan Multispeciality Hospital ಕಾರ್ಯಕ್ರಮವನ್ನು ಆಸ್ಪತ್ರೆಯ ‘ಕ್ಯಾನ್ಸರ್ ಗೆ ಆನ್ಸರ್’ (Cancer Ge Answer) ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು, ಇದರಿಂದ ಭಾಗವಹಿಸಲು ಸಾಧ್ಯವಾಗದವರೂ ವೀಕ್ಷಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...